ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್ ಇಂದು ಕರ್ನಾಟಕದಲ್ಲಿ ಮೂರು ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್ಲೆಟ್ಗಳ (ಶೋರೂಮ್ಗಳ) ಉದ್ಘಾಟನೆಯನ್ನು ಘೋಷಿಸಿದೆ. ಕೆಆರ್ ಪುರಂನಲ್ಲಿ 8,945 ಚದರ ಅಡಿ ವಿಸ್ತಾರದ ‘ಐ ಆಟೋಮೊಬೈಲ್ಸ್ ಪ್ರೈ. ಲಿಮಿಟೆಡ್’, ಹೊಸಕೋಟೆಯಲ್ಲಿ 4,071 ಚದರ ಅಡಿ ಜಾಗದ ‘ಗರುಡ ವೀಲ್ಸ್’, ಮಂಡ್ಯದಲ್ಲಿ 5,800 ಚದರ ಅಡಿ ಜಾಗದಲ್ಲಿ ‘ಚಿರಾಗ್ ಮೋಟಾರ್ಸ್’- ಎಂಬ ಮೂರು ಹೊಸ ಎಕ್ಸ್ಕ್ಲೂಸಿವ್ ಔಟ್ಲೆಟ್ಗಳನ್ನು ಯಮಹಾ ಬೆಂಗಳೂರಿನ ಸುತ್ತಮುತ್ತ ತೆರೆದಿದೆ. ಹೊಸ ಬ್ಲೂ ಸ್ಕ್ವೇರ್ ಔಟ್ಲೆಟ್ಗಳನ್ನು ಹೆಚ್ಚು ವೈಯಕ್ತೀಕರಿಸಿದ ವಿಧಾನದ ಮೂಲಕ ಸಂಪೂರ್ಣ ಮಾರಾಟ, ಸೇವೆ ಮತ್ತು ನೆರವಿನ ಜೊತೆಗೆ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
ಯಮಹಾ ಬ್ಲೂ ಸ್ಕ್ವೇರ್ ಔಟ್ಲೆಟ್ಗಳನ್ನು ಬ್ರ್ಯಾಂಡ್ನ ನಿಜವಾದ ಚೈತನ್ಯವನ್ನು ತಲುಪಿಸುವಂತೆ ಮತ್ತು ಗ್ರಾಹಕರಿಗೆ ಸಂಪೂರ್ಣ ಉತ್ತಮವಾದ ಅನುಭವ ಒದಗಿಸುವಂತೆ ನಿಖರವಾಗಿ ವಿನ್ಯಾಸ ಮಾಡಲಾಗಿದೆ. ಅಲ್ಲಿ ವೈಯಕ್ತೀಕರಿಸಿದ ವಿಧಾನದ ಮೂಲಕ ಪ್ರತಿಯೊಬ್ಬ ಗ್ರಾಹಕರು ಮೌಲ್ಯಯುತ ಮತ್ತು ತೃಪ್ತಿದಾಯಕ ಸೇವೆ ಪಡೆಯಲಿದ್ದಾರೆ. ಈ ವಿಶೇಷವಾದ ಔಟ್ಲೆಟ್ಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಬ್ರ್ಯಾಂಡ್ ಗ್ರಾಹಕರಿಗೆ ಯಮಹಾ ರೇಸಿಂಗ್ ಜಗತ್ತಿಗೆ ಪ್ರವೇಶ ಒದಗಿಸುವ ಗುರಿಯನ್ನು ಹೊಂದಿದೆ.
ಈ ಪ್ರೀಮಿಯಂ ಔಟ್ಲೆಟ್ಗಳ ಪ್ರತಿಯೊಂದು ವಿಭಾಗವನ್ನೂ ಅಂತರರಾಷ್ಟ್ರೀಯ ಮೋಟಾರ್ಸ್ಪೋರ್ಟ್ಗಳಲ್ಲಿ ಆಳವಾಗಿ ತೊಡಗಿಸಿಕೊಂಡಿರುವ ಈ ಜಾಗತಿಕ ಬ್ರ್ಯಾಂಡ್ ಜೊತೆಗೆ ಸಂಬಂಧ ಹೊಂದುವ ಹೆಮ್ಮೆಯ ಭಾವವನ್ನು ಮೂಡಿಸುವಂತೆ ಚಿಂತನಶೀಲವಾಗಿ ರಚಿಸಲಾಗಿದೆ. ಈ ಫಿಲಾಸಫಿಯಿಂದ ಮಾರ್ಗದರ್ಶನ ಪಡೆದಿರುವ ಯಮಹಾ, ಬ್ರ್ಯಾಂಡ್ನ ಹೆಮ್ಮೆಯ ರೇಸಿಂಗ್ ಪರಂಪರೆಯನ್ನು ಪ್ರತಿನಿಧಿಸುವ “ಬ್ಲೂ(ನೀಲಿ)” ಬಣ್ಣ ಮತ್ತು ಗ್ರಾಹಕರು ಯಮಹಾದ ಹರ್ಷದಾಯಕ, ಸ್ಪೋರ್ಟಿ ಮತ್ತು ಸೊಗಸಾದ ಶ್ರೇಣಿಯ ದ್ವಿಚಕ್ರ ವಾಹನಗಳೊಂದಿಗೆ ಸಂಪರ್ಕ ಸಾಧಿಸಲು ರಚಿಸಲಾದ ಪ್ಲಾಟ್ಫಾರ್ಮ್ ಅನ್ನು ಸಂಕೇತಿಸುವ “ಸ್ಕ್ವೇರ್” ಸಂಯೋಜನೆಯ ಮೂಲಕ ಗ್ರಾಹಕರೊಂದಿಗೆ ತ್ವರಿತ ಸಂಪರ್ಕವನ್ನು ಸಾಧಿಸಿದೆ.
ಉದ್ಯಮ-ಪ್ರಧಾನ ಅನುಭವವನ್ನು ಒದಗಿಸುವುದರ ಜೊತೆಗೆ, ಈ ಬ್ಲೂ ಸ್ಕ್ವೇರ್ ಔಟ್ಲೆಟ್ಗಳು ಬ್ಲೂ ಸ್ಟ್ರೀಕ್ಸ್ ರೈಡರ್ಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಯಮಹಾದ ವಿಶೇಷ ಬೈಕರ್ ಸಮುದಾಯದ ಸವಾರರು ಇತರ ಸವಾರರನ್ನು ಭೇಟಿ ಮಾಡಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಎರಡು ಹೊಸ ಔಟ್ಲೆಟ್ಗಳನ್ನು ಒಳಗೊಂಡಂತೆ, ಯಮಹಾ ಈಗ ಕರ್ನಾಟಕ ಮಾರುಕಟ್ಟೆಯಲ್ಲಿ 20 ವಿಶೇಷ ಬ್ಲೂ ಸ್ಕ್ವೇರ್ ಶೋರೂಮ್ಗಳನ್ನು ಮತ್ತು ಪ್ಯಾನ್ ಇಂಡಿಯಾದಲ್ಲಿ 270 ಔಟ್ಲೆಟ್ಗಳನ್ನು ಹೊಂದಿದೆ.
ಯಮಹಾದ ಮ್ಯಾಕ್ಸಿ-ಸ್ಪೋರ್ಟ್ಸ್ ಏರಾಕ್ಸ್ 155 ಸ್ಕೂಟರ್ ಅನ್ನು ಬ್ಲೂ ಸ್ಕ್ವೇರ್ ಶೋರೂಮ್ಗಳ ಮೂಲಕ ವಿಶೇಷವಾಗಿ ಮಾರಾಟ ಮಾಡಲಾಗುತ್ತದೆ. ಈ ಪ್ರೀಮಿಯಂ ಔಟ್ಲೆಟ್ಗಳು ವೈಝಡ್ಎಫ್-ಆರ್15 ವಿ4 (155ಸಿಸಿ), ವೈಝಡ್ಎಫ್-ಆರ್15ಎಸ್ ವಿ3 (155ಸಿಸಿ), ಎಂಟಿ-15 ವಿ2 (155ಸಿಸಿ), ಬ್ಲೂಕೋರ್ ತಂತ್ರಜ್ಞಾನ ಆಧರಿತ ಮಾದರಿಗಳಾದ ಎಫ್ಝಡ್ಎಸ್-ಎಫ್ಐ ವರ್ಷನ್ 4.0 (149ಸಿಸಿ), ಎಫ್ಝಡ್ಎಸ್-ಎಫ್ಐ ವರ್ಷನ್ 3.0 (149ಸಿಸಿ), ಎಫ್ಝಡ್-ಎಫ್ಐ ವರ್ಷನ್ 3.0 (149ಸಿಸಿ), ಎಫ್ಝಡ್-ಎಕ್ಸ್ (149ಸಿಸಿ), ಮತ್ತು ಸ್ಕೂಟರ್ಗಳಾದ ಫ್ಯಾಸಿನೋ 125 ಎಫ್ಐ ಹೈಬ್ರಿಡ್ (125ಸಿಸಿ), ರೇ ಝಡ್ಐರ್ 125 ಎಫ್ಐ ಹೈಬ್ರಿಡ್ (125ಸಿಸಿ), ರೇ ಝಡ್ಐರ್ ಸ್ಟ್ರೀಟ್ ರ್ಯಾಲಿ 125 ಎಫ್ಐ ಹೈಬ್ರಿಡ್ (125ಸಿಸಿ) ಸೇರಿದಂತೆ ನವೀಕರಿಸಲ್ಪಟ್ಟ 2023ನೇ ಸಾಲಿನ ಪ್ರೀಮಿಯಂ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸುತ್ತವೆ. ಹೆಚ್ಚು ಸಮಗ್ರವಾದ ಅನುಭವವನ್ನು ಒದಗಿಸುವ ಭರವಸೆಯನ್ನು ನೀಡುತ್ತಾ, ಈ ಪ್ರೀಮಿಯಂ ಬ್ಲೂ ಸ್ಕ್ವೇರ್ ಔಟ್ಲೆಟ್ಗಳು ಯಮಹಾದ ನಿಜವಾದ ಆ್ಯಕ್ಸೆಸರೀಸ್ಗಳು, ಅಧಿಕೃತ ಉಡುಪುಗಳು ಮತ್ತು ಯಮಹಾo ನಿಜವಾದ ಬಿಡಿಭಾಗಗಳನ್ನು ಗ್ರಾಹಕರಿಗೆ ಪ್ರದರ್ಶನ ಮತ್ತು ಮಾರಾಟ ಮಾಡುತ್ತವೆ.