ಕಾರವಾರ: ಕಳೆದ ಅಕ್ಟೋಬರ್ 7 ರಂದು ಹಾಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಬರ್ಬರ ಧಾಳಿಯ ನಂತರ ಪ್ರತೀಕಾರ ಘೋಷಿಸಿದ ಇಸ್ರೇಲ್ ಪಡೆಗಳು ಗಾಜಾ ಪಟ್ಟಿಯ ಮೇಲೆ ಮುಗಿ ಬಿದ್ದಿವೆ. ಈಗಾಗಲೇ ಸಾವಿರಾರು ಪ್ಯಾಲೆಸ್ಟೀನಿಯರು ಮತ್ತು ಹಾಮಾಸ್ ಉಗ್ರರು ಇಸ್ರೇಲ್ ಧಾಳಿಗೆ ಮೃತರಾಗಿದ್ದಾರೆ.
ವಿಶ್ವ ಸಂಸ್ಥೆಯ ಕದನ ವಿರಾಮ ನಿರ್ಣಯಕ್ಕೆ ಕ್ಯಾರೇ ಎನ್ನದ ಇಸ್ರೇಲ್ ಹಾಮಾಸ್ ನಿರ್ನಾಮ ಮಾಡುವವರೆಗೂ ವಿರಮಿಸದಿರುವ ಶಪಥ ಮಾಡಿದ್ದು ಹಾಮಾಸ್ ಉಗ್ರರು ಎಂದಿಗೂ ಶರಣಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಗಾಜಾ ಪಟ್ಟಿಯ ಉತ್ತರ ಭಾಗದಿಂದ ದಕ್ಷಿಣಕ್ಕೆ ಪ್ಯಾಲೆಸ್ಟೀನ್ ಪ್ರಜೆಗಳು ಸ್ಥಾಳಾಂತರಗೊಂಡಿದ್ದು ಇಸ್ರೇಲ್ ನ ಟ್ಯಾಂಕರ್ ಗಳು ಗಾಜಾ ಪಟ್ಟಿಯನ್ನು ಸುತ್ತುವರೆದಿದ್ದು ಧಾಳಿ ತೀವ್ರಗೊಳ್ಳಲಿದೆ. ಈ ನಡುವೆ ಭಾರತ ದಲ್ಲಿರುವ ಮುಸ್ಲಿಮರು ಬಹಿರಂಗವಾಗಿಯೇ ಪ್ಯಾಲೆಸ್ಟೀನ್ ಗೆ ಬೇಂಬಲ ಸೂಚಿಸಿ ಪ್ರತಿಭಟನೆ ಮಾಡುತ್ತಿರುವ ಘಟನೆಗಳು ಆಗಾಗ ನಡೆಯುತ್ತಿವೆ, ಈಗಾಗಲೇ ದೇಶದ ಕೆಲವೆಡೆಗಳಲ್ಲಿ ಪ್ಯಾಲೆಸ್ಟೈನ್ ಗೆ ಬೆಂಬಲ ಸೂಚಿಸಿದ ಕಾರಣಕ್ಕೆ ಮೊಕದ್ದಮೆ ದಾಖಲಾಗಿದ್ದರೂ ಪ್ರಗತಿಪರರು ಮುಸ್ಲಿಮರು ಪ್ಯಾಲೆಸ್ಟೀನ್ ಗೆ ಬೆಂಬಲ ಸೂಚಿಸುವುದು ನಿಂತಿಲ್ಲ.
ಇದಕ್ಕೊಂದು ಹೊಸ ಸೇರ್ಪಡೆ ಎಂದರೆ ಭಟ್ಕಳದ ಮುಸ್ಲಿಂ ಯೂಥ್ ಫೆಡರೇಶನ್ ಆಗಿದೆ. ಕರಾವಳಿ ನಗರಿ ಭಟ್ಕಳದ ಈ ಫೆಡರೇಷನ್ ಪ್ರತೀ ವರ್ಷವೂ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಆಯೋಜಿಸುತಿದ್ದು ಪ್ಯಾಲೆಸ್ಟೀನ್ ಯುದ್ದದ ಕಾರಣದಿಂದ ತನ್ನ ಕ್ರಿಕೆಟ್ ಪಂದ್ಯಾವಳಿಯನ್ನೇ ರದ್ದುಗೊಳಿಸಿದೆ. ಅದಲ್ಲದೆ ಈ ಯುದ್ಧ ಮುಗಿಯುವವರೆಗೆ ಭಟ್ಕಳದ ಮುಸ್ಲಿಮರು ಮದುವೆ, ಮನರಂಜನೆಯನ್ನು ರದ್ದು ಮಾಡುವಂತೆ ಕರೆ ನೀಡಿದೆ. ಅವುಝ ಭಟ್ಕಳ ಕ್ರಿಕೆಟ್ ಲೀಗ್-5 ನವೆಂಬರ್ 3 ರಿಂದ ಒಂದು ತಿಂಗಳಕಾಲ ಐಪಿಎಲ್ ಮಾದರಿಯಲ್ಲಿ ನಡೆಯಬೇಕಿತ್ತು. ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ಕಳೆದ ತಿಂಗಳು 200 ಆಟಗಾರರನ್ನು ಗುರುತಿಸಿ ಹರಾಜು ಹಾಕಿ 12 ತಂಡವನ್ನು ಆಯ್ಕೆ ಮಾಡಿತ್ತು. ಆದರೆ ಮುಸ್ಲಿಮರ ಹತ್ಯೆ ವಿರೋಧಿಸಿ ಕ್ರಿಕೆಟ್ ಪಂದ್ಯಾವಳಿಯನ್ನು ರದ್ದು ಮಾಡಲಾಗಿದ್ದು ಅದೇ ಹಣವನ್ನು ಉಳಿಸಿ ಪ್ಯಾಲೆಸ್ಟೈನ್ಗೆ ಸಹಾಯ ಮಾಡಲು ಭಟ್ಕಳ ಮುಸ್ಲಿಮರಿಗೆ ಸಂಘಟನೆ ಮನವಿ ಮಾಡಿದೆ.
ಈ ಕುರಿತು ಭಟ್ಕಳದಲ್ಲಿ ಮುಸ್ಲಿಂ ಯೂಥ್ ಫೆಡರೇಶನ್ನ ಅಧ್ಯಕ್ಷ ಆಝೀಜ್ ಉರ್ರೆಹಮಾನ್ ಮಾಧ್ಯಮ ಹೇಳಿಕೆ ನೀಡಿದ್ದು, ಪ್ಯಾಲೆಸ್ತೀನ್ನಲ್ಲಿ ಇಸ್ರೇಲ್ನವರು ನಮ್ಮ ಸಹೋದರ ಮುಸ್ಲಿಮರನ್ನು ಹತ್ಯೆ ಮಾಡುತ್ತಿದ್ದಾರೆ. ಈ ದುಃಖದ ಸಂದರ್ಭದಲ್ಲಿ ನಾವು ಮೋಜು ಮಾಡುವುದು ಸರಿಯಲ್ಲ. ಅವರಿಗೆ ಸಹಾಯ ಮಾಡಬೇಕಿದೆ. ಭಟ್ಕಳದಲ್ಲಿ ಮುಸ್ಲಿಮರು ಮದುವೆ, ಮನೋರಂಜನೆಗೆ ಖರ್ಚು ಮಾಡುವುದನ್ನು ಕಡಿಮೆ ಮಾಡಿ ಅವರಿಗೆ ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾರೆ.
ಆದರೆ ಈ ಯುದ್ದಕ್ಕೆ ಕಾರಣವೇನು ಎಂಬುದನ್ನು ಎಲ್ಲಾ ಪ್ಯಾಲೆಸ್ಟೀನ್ ಬೆಂಬಲಿಗರೂ ಮಾತಾಡುತ್ತಿಲ್ಲ ಅಷ್ಟೇ ಅಲ್ಲ ಕೆಲವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇದು ಪ್ಯಾಲೆಸ್ಟೀನಿಯರು ತಮ್ಮ ನೆಲವನ್ನು ಪಡೆದುಕೊಳ್ಳಲು ನಡೆಸಿದ ವಿಮೋಚನಾ ಧಾಳಿ ಎಂದು ಟಿವಿ ಕಾರ್ಯಕ್ರಮದಲ್ಲೂ ಸಮರ್ಥಿಸಿಕೊಳ್ಳುತಿದ್ದಾರೆ. ಈ ನಡೆಗೆ ಸಾಮಾಜಿಕ ತಾಣಗಳಲ್ಲಿ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಅಮಾಯಕ ನಾಗರಿಕರನ್ನು ಮಕ್ಕಳನ್ನು ಭಯೋತ್ಪಾದನಾ ಧಾಳಿಯ ಮೂಲಕ ಹತ್ಯೆಗೈದ ಹಾಮಾಸ್ ಗಳು ಸ್ವಾತಂತ್ರ್ಯ ಯೋಧರಾಗಲು ಹೇಗೆ ಸಾಧ್ಯ ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಇದು 26/11 ರ ಮುಂಬೈ ಧಾಳಿ ಮತ್ತು 9/11 ರ ಅಮೇರಿಕ ಧಾಳಿಗಿಂತ ಹೇಗೆ ಭಿನ್ನ ಎಂದು ಪ್ರಶಿಸಿದ್ದಾರೆ.
ಇದೇ ರೀತಿ ನೋಡುವುದಾದರೆ ಇರಾನ್ ದೇಶವು ಮೂಲತಃ ಪರ್ಷಿಯಾ ಆಗಿದ್ದು ಅಲ್ಲಿನ ಮೂಲನಿವಾಸಿಗಳನ್ನು ಮುಸ್ಲಿಮರು ಕೊಲೆ ದೌರ್ಜನ್ಯ ನಡೆಸಿ ಓಡಿಸಿದ್ದಾರೆ. ಅವರು ಪಾರ್ಸಿ ಜನಾಂಗವಾಗಿ ಗುರ್ತಿಸಿಕೊಂಡಿದ್ದು ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರು ಕೇಳಿದರೆ ಅವರಿಗೂ ಅವರ ನೆಲವನ್ನು ವಾಪಾಸ್ ಕೊಡುತ್ತೀರಾ ಎಂದು ಮತ್ತೊಬ್ಬ ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
ಈಗ ಭಾರತವೂ ತನ್ನದೇ ಆಗಿದ್ದ ಅಪಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶಗಳನ್ನು ವಶಕ್ಕೆ ಪಡೆಯಲು ಯುದ್ದ ಘೋಷಿಸಿದರೆ ಒಪ್ಪುತ್ತೀರಾ ಎಂದು ಇನ್ನೊಬ್ಬ ನೆಟ್ಟಿಗ