1992ರಿಂದ ಈವರೆಗೆ ಪ್ರತಿ ವರ್ಷ ಅ.10ರಂದು ಇಡೀ ವಿಶ್ವವೇ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತದೆ. ಈಗಿನ ಕಾಲದಲ್ಲಿ ನಮ್ಮ ಜೀವನ ಶೈಲಿ, ಒತ್ತಡ, ಧಾವಂತದ ಬದುಕು ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ.
ಏನಿದು ವಿಶ್ವ ಮಾನಸಿಕ ಆರೋಗ್ಯ ದಿನ?
ಲಂಡನ್ ನಲ್ಲಿ 1948ರಲ್ಲಿ ವರ್ಲ್ಡ್ ಫೆಡರೇಷನ್ ಫಾರ್ ಮೆಂಟಲ್ ಹೆಲ್ತ್ ಸ್ಥಾಪನೆಗೊಂಡಿತು. ಬಳಿಕ 1992ರಲ್ಲಿ ಮೊದಲ ಬಾರಿಗೆ ಮಾನಸಿಕ ಆರೋಗ್ದ ವಿಶ್ವ ಒಕ್ಕೂಟ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲು ಪ್ರಾರಂಭಿಸಿತು.
ಅಂದಿನಿಂದ ಇಡೀ ವಿಶ್ವದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ, ಜಾಗೃತಿ ಹಾಗೂ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತಿದೆ. 2023ರ ವಿಶ್ವ ಮಾನಸಿಕ ಆರೋಗ್ಯ ದಿನಕ್ಕೆ “ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು” ಎಂಬ ಥೀಮ್ ನೀಡಲಾಗಿದೆ.
ಮಾನಸಿಕ ಆರೋಗ್ಯ , ಹದಿಹರೆಯದವರ ಮತ್ತು ಶಾಲಾ ಮಕ್ಕಳ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಮೂಡಿ ಬರುತ್ತಿರಬೇಕು. ಮಕ್ಕಳು, ಮಹಿಳೆಯರು, ಅಂಗವಿಕಲರು, ವೃದ್ಧರು, ವಲಸಿಗರು ಮತ್ತು ನಿರಾಶ್ರಿತರು ಮುಂತಾದ ದುರ್ಬಲ ವರ್ಗಗಳಿಗೆ ವಿಶೇಷ ಗಮನ ಹರಿಸುವುದು ಅವಶ್ಯಕ ಮತ್ತು ಪರಿಣಾಮಕಾರಿಯಾಗಿದೆ. ಮಾನಸಿಕ ಆರೋಗ್ಯವಿಲ್ಲದೆ ನಮ್ಮ ಆರೋಗ್ಯವಿಲ್ಲ” ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಧ್ಯೇಯವಾಕ್ಯವಾಗಿದೆ.
ನಾವು ಯಾವಾಗ ಮನಶಾಸ್ತ್ರಜ್ಞರನ್ನು ಭೇಟಿಯಾಗಬೇಕು?
ಮನೆ, ಮನಸ್ಸಿನಲ್ಲಿ ತುಂಬಾ ಗೊಂದಲವಿದ್ದರೆ, ನಿರ್ಧಾರ ಕೈಗೊಳ್ಳಲು ಹಿಂಜರಿಕೆ ಇದ್ದರೆ ನೀವು ಮನಶಾಸ್ತ್ರಜ್ಞರನ್ನು ಭೇಟಿ ನೀಡಬಹುದು.
ವೃತ್ತಿ ಜೀವನ, ಬ್ಯುಸಿನೆಸ್ ನಲ್ಲಿ ನಿರಂತರ ಸೋಲು, ಕಷ್ಟಗಳನ್ನು ಕಾಣುತ್ತಿದ್ದರೆ ಮಾನಸಿಕವಾಗಿ ಬಲಗೊಂಡು ಮುಂದಿನ ಹೆಜ್ಜೆ ಇಡಲು ಮನಶಾಸ್ತ್ರಜ್ಞರನ್ನು ಮೀಟ್ ಮಾಡಬಹುದು.