ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಕೆಲವು ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ಗಳನ್ನು ಲೈಕ್ ಮಾಡಲು ಮತ್ತು ಹಂಚಿಕೊಳ್ಳಲು ಮತ್ತು ಅವರ ಖಾತೆಗಳಿಗೆ ಚಂದಾದಾರರಾಗುವಂತೆ ಒತ್ತಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಾಲೆಯಲ್ಲಿ ಪ್ರತಿದಿನ ಶಿಕ್ಷಕರೊಬ್ಬರು ಇನ್ಸ್ಟಾಗ್ರಾಮ್ ರೀಲ್ ಗಳನ್ನು ಮಾಡುತ್ತಿದ್ದರೆ, ಇನ್ನೊಬ್ಬ ಶಿಕ್ಷಕರು ಚಿತ್ರೀಕರಣ ಮಾಡುತ್ತಾರೆ. ಶಾಲೆಯಲ್ಲಿ ಕರ್ತವ್ಯದಲ್ಲಿರುವಾಗ ಶಿಕ್ಷಕರು ಇನ್ಸ್ಟಾಗ್ರಾಮ್ಗಾಗಿ ಕಂಟೆಂಟ್ ಗಳನ್ನು ರಚಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
“ಶಿಕ್ಷಕರು ಶಾಲೆಯಲ್ಲಿ ರೀಲ್ಗಳನ್ನು ರೆಕಾರ್ಡ್ ಮಾಡುತ್ತಾರೆ ಮತ್ತು ಅವುಗಳನ್ನು ಲೈಕ್ ಮಾಡಲು ಮತ್ತು ಹಂಚಿಕೊಳ್ಳಲು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಾರೆ. ನಾವು ಹಾಗೆ ಮಾಡದಿದ್ದರೆ ನಮ್ಮನ್ನು ಹೊಡೆಯುವುದಾಗಿ ಅವರು ಬೆದರಿಕೆ ಹಾಕುತ್ತಾರೆ”. ಹಲವಾರು ವಿದ್ಯಾರ್ಥಿಗಳು ಶಾಲೆಯಲ್ಲಿ ಪರಿಪೂರ್ಣವಾದ ಶಿಕ್ಷಣವನ್ನು ಪಡೆಯುತ್ತಿಲ್ಲ. ರೀಲ್ ಗಳನ್ನು ಇಷ್ಟಪಡುವಂತೆ ಒತ್ತಾಯಿಸುವ ಶಿಕ್ಷಕರಲ್ಲದೆ, ಅವರು ಇತರ ಶಿಕ್ಷಕರ ಬಗ್ಗೆಯೂ ದೂರನ್ನು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಶಾಲೆಯಲ್ಲಿ ಸಾಮಾಜಿಕ ಮಾಧ್ಯಮಕ್ಕಾಗಿ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿರುವ ಶಿಕ್ಷಕರನ್ನು ಅಂಬಿಕಾ ಗೋಯಲ್, ಪೂನಂ ಸಿಂಗ್, ನೀತು ಕಶ್ಯಪ್ ಎಂದು ಗುರುತಿಸಲಾಗಿದೆ. ಶಿಕ್ಷಕರು ಶಾಲೆಯಲ್ಲಿ ವೀಡಿಯೊಗಳನ್ನು ಮಾಡುವುದನ್ನು ನಿರಾಕರಿಸಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಲು “ಸಮರ್ಪಿತರಾಗಿದ್ದಾರೆ” ಎಂದು ಹೇಳಿದ್ದಾರೆ,
ಇನ್ಸ್ಟಾಗ್ರಾಮ್ ಖಾತೆಯನ್ನು ಲೈಕ್ ಮಾಡಲು, ಹಂಚಿಕೊಳ್ಳಲು ಮತ್ತು ಚಂದಾದಾರರಾಗಲು ಒತ್ತಾಯಿಸಲಾದ ವಿದ್ಯಾರ್ಥಿಗಳ ಪೋಷಕರು ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವರನ್ನು ಸಂಪರ್ಕಿಸಿದ್ದಾರೆ. ಬ್ಲಾಕ್ ಶಿಕ್ಷಣ ಅಧಿಕಾರಿ ಗಂಗೇಶ್ವರಿ ಆರತಿ ಗುಪ್ತಾ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಶಾಲಾ ಶಿಕ್ಷಕರ ಕೆಲವು ವೈರಲ್ ರೀಲ್ ಗಳ ಬಗ್ಗೆ ತನಗೆ ಮಾಹಿತಿ ನೀಡಲಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗಂಗೇಶ್ವರಿ ಆರತಿ ಗುಪ್ತಾ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಬೇಕಾದ ಶಿಕ್ಷಕರು ಇಂತಹ ಒಂದು ಚಟವನ್ನು ಬೆಳೆಸಿಕೊಂಡಿರುವುದು ವಿಪಾರ್ಯಸ. ಇಷ್ಟುಕ್ಕೂ ವೈಯಕ್ತಿಕ ಜೀವನದಲ್ಲಿ ಎನೂ ಮಾಡಿದರೂ ಆದರೆ ಕರ್ತವ್ಯದ ಸಂದರ್ಭದಲ್ಲಿ ಕರ್ತವ್ಯವನ್ನು ಮಾಡದೇ ಇರುವುದು ಇವರ ವೃತ್ತಿ ಧರ್ಮವನ್ನು ಸ್ವತಃ ಹಾಳು ಮಾಡಿದಂತಿದೆ.ಅಮೂಲ್ಯವಾದ ಸಮಯವನ್ನು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮೀಸಲಿಡಬೇಕಾದವರು ತಮ್ಮ ಹುಚ್ಚು ಶೋಕಿಗಾಗಿ ಬಳಸುತ್ತಿದ್ದಾರೆ.
ರೀಲ್ಸ್ ಗಳ ಹುಚ್ಚು ಯುವಕ ಯುವತಿಯರಲ್ಲಿ ಮಾತ್ರವಲ್ಲದೆ ಎಲ್ಲ ವಯಸ್ಸಿನ ಮತ್ತು ವರ್ಗದ ಜನರನ್ನು ತನ್ನ ತೆಕ್ಕೆಗೆ ಜಾರಿಸಿಕೊಂಡಿದೆ. ಕೆಲವರು ತಮ್ಮ ಬಿಡುವಿನ ಸಮಯವನ್ನು ಇದಕ್ಕಾಗಿ ಮೀಸಲಿಟ್ಟರೆ. ಇನ್ನು ಕೆಲವರ ದಿನವೇ ರೀಲ್ಸ್ ನಿಂದ ಶುರುವಾಗುತ್ತದೆ. ಈ ಮಟ್ಟಿಗೆ ಜನರು ರೀಲ್ಸ್ ಗೆ ಮಾರು ಹೋಗಿದ್ದಾರೆ.