ಮೂಲಭೂತ ಸೌಲಭ್ಯ ನೀಡಲಾಗುವುದು. ತಸ್ತೀಕ್ ಹಣ ನೇರವಾಗಿ ಅರ್ಚಕರಿಗೆ ತಲುಪುವ ವ್ಯವಸ್ಥೆ ಸಂಪೂರ್ಣ ರೀತಿಯಲ್ಲಿ ಜಾರಿ ಮಾಡುತ್ತೇವೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.
ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ದೇವಾಲಯಕ್ಕೆ ಸಂಬಂಧಿಸಿದಂತೆ ಖಡಕ್ ಸೂಚನೆ ಕೊಟ್ಟಿದ್ದಾರೆ ಸಚಿವ ರಾಮಲಿಂಗರೆಡ್ಡಿ. ಹಳೆಯ ದೇವಾಲಯಗಳಿಗೆ ಕ್ರಮಬದ್ಧವಾಗಿ ಮತ್ತೆ ಕೊಠಡಿ ನಿರ್ಮಾಣ ಮಾಡಲು ಸೂಚಿಸಿದ್ದಾರೆ.
ಇಲಾಖೆ ಸೂಚನೆ ಏನು?
-ಸಿಸಿ ಕ್ಯಾಮರಾ ಅಳವಡಿಕೆ ಮಾಡಬೇಕು
-ದೇವಾಲಯದ ಆವರಣದ 100 ಮೀಟರ್ ವರೆಗೂ ತಂಬಾಕು ಅಂಗಡಿ ತೆರೆಯುವಂತಿಲ್ಲ.
-ಶೌಚಾಲಯಕ್ಕೆ ಹೋಗುವ ಭಕ್ತರಿಂದ ಹಣ ತೆಗೆದುಕೊಳ್ಳುವಂತಿಲ್ಲ.
-ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ,
-ಶೌಚಾಲಯ, ದೇವಾಲಯದ ಆವರಣ ಸ್ವಚ್ಚವಾಗಿ ಇಡುವುದು ಕಡ್ಡಾಯ.
-ಎಲ್ಲರಿಗೂ ಕಾಣುವಂತೆ ಹುಂಡಿ ಇಡುವುದು ಕಡ್ಡಾಯ.
-ಈ ಹಣವನ್ನು ದೇವಾಲಯದ ಅಭಿವೃದ್ಧಿಗೆ ವ್ಯಯ ಮಾಡಲಾಗುವುದು
ಪ್ರಮುಖ ದೇಗುಲಗಳಲ್ಲಿ ಆನ್ ಲೈನ್ ಸೇವೆಗಾಗಿ ಆ್ಯಪ್ ಶೀಘ್ರ ಬಿಡುಗಡೆ ಮಾಡಲಾಗುತ್ತೆ. ದೇವಾಲಯಗಳ ಚಿರ ಆಸ್ತಿ ಸರ್ವೇ ಮಾಡಿ ಒತ್ತುವರಿ ಆಗಿದ್ರೆ ತೆರವು ಕಾರ್ಯ ಆಗುತ್ತೆ ಎಂದು ತಿಳಿಸಿದೆ.