ಎಷ್ಯಾ ಕಪ್ ಇಂಟರ್ನ್ಯಾಷನಲ್ ಪಂದ್ಯದ ಫೈನಲ್ನಲ್ಲಿ ತನಗೆ ದೊರೆತ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಯ ಮೊತ್ತವನ್ನು ಶ್ರೀಲಂಕಾದ ಕ್ರೀಡಂಗನದ ಸಿಬ್ಬಂದಿಗೆ ಸಮರ್ಪಸಿ, ಮತ್ತೊಮ್ಮೆ ಜನ -ಮನ ಗೆದ್ದಿದ್ದಾರೆ ಮೊಹಮ್ಮದ್ ಸಿರಾಜ್.
ನೆನ್ನೆ ನಡೆದ ಪಂದ್ಯಾವಳಿಯಲ್ಲಿ ತನಗೆ ಲಭಿಸಿದ ಐದು ಲಕ್ಷ ಡಾಲರ್ ಮೊತ್ತವನ್ನು ಮತ್ತೊಬ್ಬರಿಗೆ ಸಮರ್ಪಸಿರುವ ಸಿರಾಜ್ ನದ್ದು ರಾಜ ಮನೆತನದ ಕುಟುಂಬ ಎಂದು ಕೊಂಡರೆ, ಅದು ಸುಳ್ಳು. ಆರ್ಥಿಕತವಾಗಿ ಸಾಧಾರಣ ಕುಟುಂಬದಲ್ಲಿ ಜನಿಸಿದ ಮುಹಮ್ಮದ್ ಸಿರಾಜ್ ನ ತಂದೆ ಆಟೋ ರಿಕ್ಷಾ ಚಾಲಕರಾಗಿದ್ದವರು, ಇನ್ನು ತಾಯಿ ಗೃಹಣಿ ಶ್ರಮಪಟ್ಟು ಭಾರತೀಯ ಕ್ರಿಕೆಟ್ ರಂಗದಲ್ಲಿ ಹೆಸರು ಮಾಡಿರುವ ಮುಹಮ್ಮದ್ ಸಿರಾಜ್ ರ ನಡೆ, ಇಡೀ ವಿಶ್ವಕ್ಕೇ ಮಾದರಿಯಾಗುವಂತದ್ದು. ಶ್ರಮಿಕ ವರ್ಗದ ನೋವು, ಶ್ರಮ ಮತ್ತು ಒಂದು ಕಾರ್ಯಕ್ರಮದ ಹಿಂದೆ ಶ್ರಮಿಕ ವರ್ಗದ ಕೊಡುಗೆಯನ್ನು ಸಿರಾಜ್, ಎತ್ತಿ ಹಿಡಿದಿದ್ದಾರೆ.
ಹೈದರಬಾದಿನ ಪ್ರಾದೇಶಿಕ ಉರ್ದು ಭಾಷೆಯನ್ನು ಅಚ್ಚವಾಗಿ ಮಾತನಾಡುವ ಮೊಹಮ್ಮದ್ ಸಿರಾಜ್, ಕ್ರಿಕೆಟ್ ಆಟದೊಂದಿಗೆ ತನ್ನ ಭಾಷೆ ಮತ್ತು ತನ್ನ ಜನರೊಂದಿಗೆ ಪ್ರೀತಿ ಭರಿತ ನಡೆದುಕೊಳ್ಳುವ ರೀತಿ, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಭಾರಿ ಸುದ್ದಿಯಾಗಿತ್ತು. ಇದೀಗ ಮತ್ತೊಮ್ಮೆ ಎಲ್ಲರ ಮನ ಹೊಕ್ಕು ಶ್ರಮ ಜೀವಿಯನ್ನು ಪ್ರೋತ್ಸಾಹಿಸಿ ಎಂಬ ಸಂದೇಶವನ್ನು ಮೊಹಮ್ಮದ್ ಸಿರಾಜ್ ಸಾರಿದ್ದಾರೆ.