ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿ ವರ್ಷ ಸೆ. 8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಪ್ರಾಮುಖ್ಯತೆ ಏನು ಗೊತ್ತಾ?
1966ರಲ್ಲಿ ಸೆ. 8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಿಸಲು ಯುನೆಸ್ಕೋ ಘೊಷಿಸಿದ್ದು, ಅಂದಿನಿಂದ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
26 ಅಕ್ಟೋಬರ್ 1966ರಂದು ಯುನೆಸ್ಕೋ 14ನೇ ಸಾಮಾನ್ಯ ಸಮ್ಮೇಳನದಲ್ಲಿ ಪ್ರತಿ ವರ್ಷ ಸೆ. 8ರಂದು ಸಾಕ್ಷರತಾ ದಿನ ಎಂದು ಘೋಷಿಸಿತು.
ಹಾಗಿದ್ರೆ 2023 ರ ವಿಶ್ವ ಸಾಕ್ಷರತಾ ದಿನದ ಥೀಮ್ ಏನಿತ್ತು?
2023ರಲ್ಲಿ ʼಪರಿವರ್ತನೆಯಾಗುತ್ತಿರುವ ಜಗತ್ತಿನಲ್ಲಿ ಸಾಕ್ಷರತೆಯ ಪ್ರಾಮುಖ್ಯತೆ: ಸುಸ್ಥಿರ ಮತ್ತು ಶಾಂತಿಯುತ ಸಮಾಜಗಳಿಗೆ ಅಡಿಪಾಯವನ್ನು ನಿರ್ಮಿಸುವುದು.ʼ