ಭಾರತೀಯ ಸಿನಿರಂಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಆದರೆ ಕುತೂಹಲದ ಸಂಗತಿ ಎಂದರೆ ಭಾರತೀಯ ಚಿತ್ರರಂಗದಲ್ಲಿ 35 ನ್ಯಾಷನಲ್ ಅವಾರ್ಡ್ಸ್ ಗಳನ್ನು ಪಡೆದ ಏಕೈಕ ವ್ಯಕ್ತಿ ಇದ್ದಾರೆ.
ಅವರು ಯಾರು ಗೊತ್ತಾ?
ಭಾರತೀಯ ಚಿತ್ರರಂಗದಲ್ಲಿ ದಂತಕಥೆ, ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇ ಅವರು ಬರೋಬ್ಬರಿ 35 ನ್ಯಾಷನಲ್ ಅವಾರ್ಡ್ಸ್ ಗಳನ್ನು ಪಡೆದುಕೊಂಡ ಏಕೈಕ ವ್ಯಕ್ತಿಯಾಗಿದ್ದಾರೆ. ಅತ್ಯುತ್ತಮ ಸಿನಿಮಾಗಳನ್ನು ನೀಡುವ ಮೂಲಕ ಸತ್ಯಜಿತ್ ರೇ ಅವರು ಭಾರತೀಯ ಸಿನಿಮಾವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿರುವ ಹೆಗ್ಗಳಿಕೆ ಅವರದಾಗಿದೆ.
ಸುಮಾರು 40 ವರ್ಷಗಳ ಕಾಲ ಸತತವಾಗಿ ಸತ್ಯಜಿತ್ ರೇ ನ್ಯಾಷನಲ್ ಅವಾರ್ಡ್ಸ್ ಗಳಿಗೆ ಭಾಜನರಾಗಿದ್ದರು. 1994ರಲ್ಲಿ ರೇ ಅವರು ತಮ್ಮ ಉತ್ತೋರಾನ್ ಚಿತ್ರದ ಅತ್ಯುತ್ತಮ ಚಿತ್ರಕಥೆಗಾಗಿ ಕೊನೆಯದಾಗಿ ನ್ಯಾಷನಲ್ ಅವಾರ್ಡ್ ಪಡೆದಿದ್ದರು.
ಸತ್ಯಜಿತ್ ರೇ ಅವರು ಪಡೆದ 35 ನ್ಯಾಷನಲ್ ಅವಾರ್ಡ್ ಗಳಲ್ಲಿ, ಉತ್ತಮ ನಿರ್ದೇಶನಕ್ಕಾಗಿ ಆರು ಹಾಗೂ ಇನ್ನುಳಿದಂತೆ ಉತ್ತಮ ಚಿತ್ರ, ಚಿತ್ರಕಥೆ, ಎಡಿಟಿಂಗ್ ಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು.
ಸಿನಿಮಾ ರಂಗದಲ್ಲಿ ನ್ಯಾಷನಲ್ ಅವಾರ್ಡ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಹೆಚ್ಚಿನ ಮಹತ್ವವಿದೆ. ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಈವರೆಗೆ ಒಟ್ಟು ಏಳು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ನಿರ್ದೇಶಕ ಸತ್ಯಜಿತ್ ರೇ ನಂತರ ಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರು 17 ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದ ಇತರ ನಟರು ಯಾರು?
ಬಾಲಿವುಡ್ ನ ಶಬಾನಾ ಅಜ್ಮಿ ಐದು ರಾಷ್ಟ್ರಪ್ರಶಸ್ತಿ
ಖ್ಯಾತ ನಟರಾದ ಮೋಹನ್ ಲಾಲ್, ಅಮಿತಾಬ್ ಬಚ್ಚನ್ ಮತ್ತು ಕಂಗನಾ ರಣಾವತ್ ತಲಾ ನಾಲ್ಕು ರಾಷ್ಟ್ರಪ್ರಶಸ್ತಿ.
ನಟ ಮಮ್ಮುಟ್ಟಿ 3 ರಾಷ್ಟ್ರ ಪ್ರಶಸ್ತಿ,
ಪ್ರಸಿದ್ಧ ಗಾಯಕ ಯೇಸುದಾಸ್ ಆರು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.