ವಿಶ್ವದ ಖ್ಯಾತ ಉದ್ಯಮಗಳನ್ನು ಭಾರತೀಯರು ಮುನ್ನಡೆಸುತ್ತಿರುವುದು, ದಿಗ್ಗಜ ಸಂಸ್ಥೆಗಳಲ್ಲಿ ಸಿಇಒ ಪಟ್ಟ ಅಲಂಕರಿಸಿರುವುದು ಗೊತ್ತಿರುವ ವಿಚಾರವೇ.
ಭಾರತೀಯರ ಈ ನೈಪುಣ್ಯಕ್ಕೆ ಜಗತ್ತಿನಾದ್ಯಂತ ಅನೇಕರೂ ತಲೆದೂಗಿದ್ದೂ ಇದೆ. ಈಗ ಆ ಸರದಿ ಟ್ವಿಟರ್ ಮಾಲೀಕ ಎಲಾನ್ಮಸ್ಕ್ ಅವರದ್ದಾಗಿದ್ದು, ಭಾರತೀಯ ಮೂಲದ ಸಿಇಒಗಳ ಪಟ್ಟಿ ನೋಡಿ ಎಲಾನ್ “ಇಂಪ್ರಸಿವ್’ ಎಂದಿದ್ದಾರೆ. ಆಲ್ಪಾಬೆಟ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ನ ಸತ್ಯ ನಾದೆಲ್ಲಾ, ಅಡೋಬ್ ಸಿಇಒ ಶಂತನು ನಾರಾಯಣ್ ಸೇರಿ ವಿಶ್ವದ 20ಕ್ಕೂ ಅಧಿಕ ಬಹುರಾಷ್ಟ್ರೀಯ ಸಂಸ್ಥೆಗಳ ಭಾರತೀಯ ಮೂಲದ ಸಿಇಒಗಳ ಪಟ್ಟಿಯನ್ನು ವರ್ಲ್ಡ್ ಆಫ್ ಸ್ಯಾಟಿಸ್ಟಿಕ್ಸ್ ಸಂಸ್ಥೆ ಬಿಡುಗಡೆಗೊಳಿಸಿದೆ.
ಅದನ್ನು ಎಲಾನ್ ಮಸ್ಕ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡು ಇಂಪ್ರಸಿವ್ ಎಂದು ಕ್ಯಾಪ್ಶನ್ ನೀಡಿದ್ದಾರೆ. ಭಾರತೀಯ ಸಿಇಒಗಳನ್ನು ಹೊಗಳಿದ ಎಲಾನ್ ನಡೆ ಬಗ್ಗೆ ನೆಟ್ಟಿಗರು ಕೂಡ ಪ್ರಶಂಸೆ ವ್ಯಕ್ತಪಡಿಸಿ, ವಿಶ್ವ ಉದ್ಯಮಗಳಿಗೆ ಭಾರತದ ಕೊಡುಗೆಯನ್ನು ಶ್ಲಾಗಿಸಿದ್ದಾರೆ.