ರಾತ್ರಿ ಬೇಗ ಮಲಗಿದರೂ ಬೆಳಗ್ಗೆ ಎದ್ದಾಗ ತಲೆ ನೋವು, ಕಣ್ಣು ಉರಿ ಆಗಿದೆ ಅಥವಾ ರಾತ್ರಿ ಲೇಟಾಗಿ ಮಲಗಿದರೂ ಒಳ್ಳೆ ನಿದ್ದೆ ಆಗಿದೆ. ಈ ಎರಡೂ ವಿಭಿನ್ನ ಅನುಭವಗಳು ಎಲ್ಲರಿಗೂ ಸಹಜವಾಗಿಯೇ ಆಗುತ್ತದೆ. ಇದರಲ್ಲೇ ತಿಳಿಯುತ್ತೆ ಎಷ್ಟು ಹೊತ್ತು ಮಲಗ್ತೀವಿ ಅನ್ನೋಕ್ಕಿಂತ ಎಷ್ಟು ಕ್ವಾಲಿಟಿ ನಿದ್ದೆ ಮಾಡಿದ್ದೇವೆ ಅನ್ನೋದು ಮುಖ್ಯವಾಗುತ್ತದೆ ಅಲ್ವಾ?
ನಿಮಗೂ ಈ ಕ್ವಾಲಿಟಿ ನಿದ್ದೆ ಬೇಕಾ? ಹಾಗಿದ್ರೆ ಈ ರೂಲ್ಸ್ ಗಳನ್ನ ಫಾಲೋ ಮಾಡಿ.
• ಪ್ರತಿದಿನ ಮಲಗುವ ಸಮಯ ನಿಗದಿ ಮಾಡಿ. ಅದೇ ಸಮಯಕ್ಕೆ ಮಲಗಿ.
• ತುಂಬಾ ಜಾಸ್ತಿ ಊಟ ಮಾಡಬೇಡಿ.
• ಕಾಫಿ ಕುಡಿಯಬೇಡಿ.
• ನಿಮ್ಮ ಕೋಣೆ ಕತ್ತಲೆಯಾಗಿರಲಿ.
• ಮೊಬೈಲ್, ಟಿವಿಗಳಿಂದ ದೂರ ಇರಿ.
• ತಪ್ಪದೇ ಸಂಜೆ ಒಂದು ವರ್ಕ್ ಔಟ್ ಮಾಡಿ.
• ಯಾವುದಾದರು ವಿಚಾರದ ಬಗ್ಗೆ ತುಂಬಾ ಚಿಂತಿಸಬೇಡಿ.
• ಜಗಳ ಮಾಡಿಕೊಂಡು ಮಲಗಬೇಡಿ.
• ನೀವು ಮಲಗುವ ಜಾಗ ಕಂಫರ್ಟಬಲ್ ಇರಲಿ.