ಮಲಬದ್ಧತೆ, ವಾಯು, ಅಜೀರ್ಣ, ಆಮ್ಲೀಯತೆ, ಪೈಲ್ಸ್, ಗ್ಯಾಸ್ಟ್ರಿಕ್, ಅಜೀರ್ಣ ಮತ್ತು ಕರುಳಿನ ಕ್ಯಾನ್ಸರ್ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮಗೂ ಈ ಸಮಸ್ಯೆಗಳಿದ್ದರೆ ಪ್ರತಿದಿನ ನಿಮ್ಮ ಊಟದಲ್ಲಿ ಈ ಹಣ್ಣುಗಳನ್ನು ತಪ್ಪದೇ ಸೇವಿಸಿ.
ಸೇಬು: ಸೇಬು ಹಣ್ಣು ಕರಗುವ ಫೈಬರ್ ಮತ್ತು ನೀರಿನ ಉತ್ತಮ ಮೂಲವಾಗಿದೆ. ಇದು ಕರುಳನ್ನು ಹೈಡ್ರೇಟ್ ಮಾಡುತ್ತದೆ ಹಾಗೂ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಬಾಳೆಹಣ್ಣು: ಬಾಳೆಹಣ್ಣು ಫೈಬರ್ನ ಉತ್ತಮ ಮೂಲವಾಗಿದೆ. ಇದಲ್ಲದೆ, ಪೊಟ್ಯಾಸಿಯಮ್, ವಿಟಮಿನ್ಗಳು, ಫೋಲೇಟ್ನಂತಹ ಪೋಷಕಾಂಶಗಳು ಸಹ ಇದರಲ್ಲಿ ಕಂಡುಬರುತ್ತವೆ.
ಪೀಯರ್ಸ್: ಪಿಯರ್ಸ್ ಫೈಬರ್ನಿಂದ ಸಮೃದ್ಧವಾಗಿದ್ದು, ಹೊಟ್ಟೆ ಮತ್ತು ಕರುಳಿನಿಂದ ಹಾನಿಕಾರಕ ವಿಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಸ್ಟ್ರಾಬೆರಿ: ಸ್ಟ್ರಾಬೆರಿಗಳು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ. ಈ ಹಣ್ಣು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ನಿರ್ಮಿಸುತ್ತದೆ. ಫೈಬರ್ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಅವಕಾಡೋ: ಆಂಟಿಆಕ್ಸಿಡೆಂಟ್ ಮತ್ತು ಗ್ಲುಟಾಥಿಯೋನ್ ಈ ಹಣ್ಣಿನಲ್ಲಿ ಕಂಡುಬರುತ್ತದೆ. ಇದು ಕರುಳಿನ ಆರೋಗ್ಯ ಕಾಪಾಡುತ್ತದೆ.