ಈ ಕಥೆ ಬೇರಾರದ್ದೂ ಅಲ್ಲ ಭಾರತೀಯ ವೇಗದ ಬೌಲರ್ ಹೈದ್ರಾಬಾದನ ಯುವಕ ಆರ್ಸಿಬಿ ಬೌಲಿಂಗ್ ಪಡೆಯ ಬೆನ್ನೇಲಬು ಮೊಮ್ಮದ್ ಸಿರಾಜ್ ಐಪಿಎಲ್ನಲ್ಲಿ ಆರ್ಸಿಬಿ, ಟೀಮ್ ಇಂಡಿಯಾ ಪರ ಆಡುತ್ತಿದ್ದಾಗ ಹೆಚ್ಚು ರನ್ ಬಿಟ್ಟು ಕೊಟ್ಟರೆಂದು ಭಾರೀ ಟೀಕೆಗೆ ಗುರಿಯಾಗಿದ್ದರು. ಇದರಿಂದ ಹೆಚ್ಚು ಟ್ರೋಲ್ ಆಗಿ, ಟೀಕೆ ಎದುರಿಸಿದ ಬೌಲರ್, ಹೈದರಾಬಾದ್ನ ಬಲಗೈ ಬೌಲರ್ ಈ ಯಾವ ಟೀಕೆ, ಟ್ರೋಲ್ಗಳಿಗೂ ಕುಗ್ಗಲಿಲ್ಲ, ಜಗ್ಗಲಿಲ್ಲ. ಸತತ ಕಠಿಣ ಪರಿಶ್ರಮ ಹಾಕಿದರು. ಗೋಡೆಗೆ ಬಿದ್ದ ಚೆಂಡಿನಂತೆ ಬಲಿಷ್ಠವಾಗಿ ವಾಪಾಸ್ ಆದರು. ಟೀಕಿಸಿದವರಿಗೆ ತನ್ನ ಪ್ರದರ್ಶನದ ಮೂಲಕವೇ ಉತ್ತರಿಸಿದರು.
ಮೊಹಮ್ಮದ್ ಸಿರಾಜ್ ಭಾರತದ ಬೌಲಿಂಗ್ ಅಸ್ತ್ರ. ನಿಜ, ಮೂರು ಫಾರ್ಮೆಟ್ಗಳಲ್ಲಿ ಗೇಮ್ ಚೇಂಜರ್, ಮ್ಯಾಚ್ ವಿನ್ನರ್. ಟೀಕೆಗಳ ಸುರಿಮಳೆಗೆ ಬೇಸತ್ತಿದ್ದ ಸಿರಾಜ್, ಸತತ ಕಠಿಣ ಪರಿಶ್ರಮದೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ನಂಬರ್ 1 ಶ್ರೇಯಾಂಕ ಅಲಂಕರಿಸಿದ ಕೀರ್ತಿ ಅವರದ್ದು. ಈಗ ಏಕದಿನ ವಿಶ್ವಕಪ್ ಟೂರ್ನಿಗೆ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿರುವ 29 ವರ್ಷದ ವೇಗದ ಬೌಲರ್, ಗಲ್ಲಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಹುಡುಗ ಎಂಬುದು ವಿಶೇಷ.
ಕ್ರಿಕೆಟ್ ಬಿಡಲಿಲ್ಲ
ಅಲ್ಲದೆ, ಜಾಹೀರಾತಿನಲ್ಲೂ ಹೆಚ್ಚು ಹೆಚ್ಚು ಆದಾಯ ಸಂಪಾದಿಸುತ್ತಿರುವ ಸಿರಾಜ್ ಅವರ ಆದಾಯ ಈಗ 47 ಕೋಟಿ ಎಂಬುದು ವಿಶೇಷ. ಆದರೆ, ಸಿರಾಜ್ ಜೀವನ ಮೊದಲು ಹೀಗಿರಲಿಲ್ಲ. ಸ್ಲಂ ಏರಿಯಾದಲ್ಲಿ ನೆಲೆಸಿದ್ದರು. ಸಿರಾಜ್ ತಂದೆ ಆಟೋ ಚಾಲಕ. ಸಂಕಷ್ಟದಲ್ಲಿ ಕುಟುಂಬ ನಡೆಯುತ್ತಿತ್ತು. ತಿಂಗಳ ಮನೆ ಬಾಡಿಗೆ ಕಟ್ಟಲೂ ಕಷ್ಟವಾಗಿತ್ತು. ಅಷ್ಟರ ಮಟ್ಟಿಗೆ ಬಡತನ ಹೊಂದಿದ್ದರು ಸಿರಾಜ್. ಅವರ ಬಡತನ ಕಂಡವರು ಅಯ್ಯೋ ಎನ್ನದವರೇ ಇರಲಿಲ್ಲ. ದೇಶೀಯ ಕ್ರಿಕೆಟ್ಗೆ ಬರುವುದಕ್ಕೂ ಮುನ್ನ ಗಲ್ಲಿ ಕ್ರಿಕೆಟ್ ಆಡುತ್ತಿದ್ದರು. ಟೆನಿಸ್ ಬಾಲ್ನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಒಂದೆಡೆ ಹಣದ ಕೊರತೆ, ಮತ್ತೊಂದೆಡೆ ಪ್ರೋತ್ಸಾಹದ ಕೊರತೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಿರಾಜ್ ಕ್ರಿಕೆಟ್ ಮೇಲಿನ ಹುಚ್ಚು ಬಿಟ್ಟಿರಲಿಲ್ಲ. ಬೆಂಕಿ ವೇಗದ ಬೌಲರ್ನ ಸಾಮರ್ಥ್ಯ ಕಂಡ ಸ್ಥಳೀಯ ಕ್ರಿಕೆಟ್ ತರಬೇತುದಾರರೊಬ್ಬರು, ಸಿರಾಜ್ರನ್ನು ಹೈದರಾಬಾದ್ ಸ್ಥಳೀಯ ಕ್ರಿಕೆಟ್ ಕ್ಲಬ್ಗಳಿಗೆ ಸೇರಿಸಿದರು. ಆದರೆ, ಅವರ ಅತ್ಯದ್ಭುತ ಪ್ರದರ್ಶನವು ಶೀಘ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್ ಕಡೆಗೆ ಮರಳುವಂತೆ ಮಾಡಿತು.
2017ರ ಆವೃತ್ತಿಯ ಬಳಿಕ ಹೈದರಾಬಾದ್ ಸಿರಾಜ್ ಅವರನ್ನು ಕೈ ಬಿಟ್ಟಿತು. 2018ರಲ್ಲಿ ಆರ್ಸಿಬಿ ಸಿರಾಜ್ರನ್ನು ಬುಟ್ಟಿಗೆ ಹಾಕಿಕೊಂಡಿತು. 2.60 ಕೋಟಿಗೆ ಖರೀದಿಸಿತ್ತು. ಅಂದಿನಿಂದ ಆರ್ಸಿಬಿ ಪರವೇ ಆಡುತ್ತಿರುವ ಈ ವೇಗಿ, ಪ್ರಸ್ತುತ ತಂಡದ ಪ್ರಮುಖ ಬೌಲರ್. ವರ್ಷಕ್ಕೆ 7 ಕೋಟಿ ಪಡೆಯುತ್ತಿರುವ ಆಟೋ ರಿಕ್ಷಾ ಓಡಿಸುತ್ತಿದ್ದವನ ಮಗ, ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಬಿ ಗ್ರೇಡ್ನಲ್ಲಿದ್ದು ವಾರ್ಷಿಕ 3 ಕೋಟಿ ದುಡಿಯುತ್ತಿದ್ದಾರೆ. ಅಲ್ಲದೆ, ಪಂದ್ಯದ ಶುಲ್ಕ ಅಂದರೆ ಒಂದು ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಕ್ರಿಕೆಟ್ ಪಂದ್ಯಕ್ಕೆ 6 ಲಕ್ಷ, ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ
ಸಿರಾಜ್ಗೆ ಐಪಿಎಲ್ನಿಂದ ಜಾಕ್ಪಾಟ್
ದೇಶೀಯ ಕ್ರಿಕೆಟ್ನಲ್ಲಿ ಹೈದರಾಬಾದ್ ತಂಡದ ಪರ ಸಿರಾಜ್ ಧೂಳೆಬ್ಬಿಸಿದರು. ವಿಕೆಟ್ ಬೇಟೆಯಾಡಿದರು. ಇದರೊಂದಿಗೆ ಐಪಿಎಲ್ನಲ್ಲಿ ಫ್ರಾಂಚೈಸಿಗಳ ಮನ ಗೆದ್ದರು. 2017ರಲ್ಲಿ ಐಪಿಎಲ್ಗೂ ಪ್ರವೇಶಿಸಿದರು. ಅಂದು ಅವರ ಮೂಲ ಬೆಲೆ ಇದ್ದದ್ದು ಕೇವಲ 20 ಲಕ್ಷ. ಇಷ್ಟು ಸಿಕ್ಕರೆ ಸಾಕು ಎನ್ನುತ್ತಿದ್ದ ಸಿರಾಜ್ಗೆ ಹೊಡೆದಿದ್ದು ಜಾಕ್ ಪಾಟ್. ಹೌದು, ಸಿರಾಜ್ ಬರೋಬ್ಬರಿ 2.70 ಕೋಟಿಗೆ ಖರೀದಿಯಾದರು. ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಸಿರಾಜ್ರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಆ ಬಳಿಕ ಸಿರಾಜ್ ಹಣೆಬರವೇ ಬದಲಾಗಿ ಹೋಯಿತು. ಏನೂ ಇಲ್ಲದವ ಇಂದು ಕೋಟ್ಯಧಿಪತಿಯಾಗಿ ಬೆಳೆದರು. ಅದು ಕೂಡ ಐಷರಾಮಿ ಜೀವನ ನಡೆಸುವಷ್ಟರ ಮಟ್ಟಿಗೆ ಬದಲಾದ್ರು.
ಸಿರಾಜ್ ಇದೀಗ ಹೈದರಾಬಾದ್ನ ಶ್ರೀಮಂತ ಪ್ರದೇಶ ಎನಿಸಿದ ಜೂಬ್ಲಿಹಿಲ್ಸ್ನ ಫಿಲ್ಮ್ನಗರದಲ್ಲಿ ದೊಡ್ಡ ಐಷರಾಮಿ ಬಂಗಲೆಯೊಂದನ್ನು ಖರೀದಿಸಿದ್ದಾರೆ. ಐಪಿಎಲ್ ವೇಳೆ ಸಿರಾಜ್ರ ಆರ್ಸಿಬಿ ಆಟಗಾರರನ್ನು ಮನೆಗೆ ಆಹ್ವಾನಿಸಿ ಭರ್ಜರಿ ಬಿರಿಯಾನಿ ಔತಣ ಕೂಡ ಏರ್ಪಡಿಸಿದ್ದರು ಎಂಬುದು ವಿಶೇಷ. ಅಪ್ಪನ ಕನಸಿನಂತೆ ದೊಡ್ಡ ಕ್ರಿಕೆಟ್ ಆದ ಸಿರಾಜ್, ಲಕ್ಷುರಿ ಕಾರುಗಳನ್ನೇ ಹೊಂದಿದ್ದಾರೆ. ಬಿಎಂಡಬ್ಲ್ಯು ಸೆಡಾನ್, ಮಹೀಂದ್ರಾ ಥಾರ್, ಟಯೋಟ ಕೊರಲಾ ಸೇರಿದಂತೆ ಹಲವು ಕಾರ್ಗಳ ಮಾಲೀಕ ಸಿರಾಜ್.
ಪರಿಶ್ರಮಕ್ಕೆ ಸಿಕ್ಕ ದೊರೆತ ಫಲ
ಆದರೆ ಆರು ವರ್ಷಗಳ ಹಿಂದೆ ಆಟೋ ರಿಕ್ಷಾದಲ್ಲಿ ಓಡಾಡುತ್ತಿದ್ದ ಸಿರಾಜ್ ಇಂದು ಕೋಟ್ಯದೀಶ. ಐಷರಾಮಿ ಕಾರುಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗಿರುವ ಸಿರಾಜ್ ಈಗ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ತಂಡಕ್ಕೂ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಪ್ರತಿಭೆ, ಸತತ ಕಠಿಣ ಪರಿಶ್ರಮ ಎನ್ನುವುದಿದ್ದರೆ, ಅದೃಷ್ಟ ಎಂದೂ ಕೈ ಕೊಡಲ್ಲ ಎನ್ನುವುದುಕ್ಕೆ ಮೊಹಮ್ಮದ್ ಸಿರಾಜ್ ಅವರೇ ಉತ್ತಮ ಉದಾಹರಣೆ.