ಬೆಂಗಳೂರು : ‘ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ’ ಎಂಬ ಕನ್ನಡ ಹಾಡಿಗೆ ಕೀಬೋರ್ಡ್ ನುಡಿಸಿ ಹಾಡಿರುವ ಕನ್ನಡದ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಫಿದಾ ಆಗಿದ್ದಾರೆ.
ಕೆಲ ದಿನಗಳ ಹಿಂದೆ, ಸುಶ್ರಾವ್ಯವಾಗಿ ಪಿಯಾನೋ ಬಾರಿಸಿದ ಪುಟ್ಟ ಪೋರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆ ಪುಟ್ಟ ಕಂದಮ್ಮನ ಪ್ರತಿಭೆಗೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆ.ಎಸ್.ನರಸಿಂಹಸ್ವಾಮಿ ರಚನೆಯ ‘ಪಲ್ಲವಗಳ ಪಲ್ಲವಿಯಲಿ’ ಹಾಡಿಗೆ ತಕ್ಕಂತೆ ಪುಟಾಣಿ ಶಾಲ್ಮಲಿ ಪಿಯಾನೊ ನುಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಡಿಯೊವನ್ನು ರೀ ಟ್ವಿಟ್ ಮಾಡಿದ್ದು, ಶಾಲ್ಮಲಿಗೆ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.
ಸಂಗೀತ ನುಡಿಸಿ ಹಾಡುವ ಪುಟ್ಟ ಬಾಲಕಿಯ ವಿಡಿಯೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನಸೋತಿದ್ದಾರೆ. ಅಲ್ಲದೆ, ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡುವ ಮೂಲಕ ಈ ಪೋರಿಯ ಸಂಗೀತ ಪ್ರೀತಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಅನಂತ್ ಕುಮಾರ್ ಎನ್ನುವವರು ಈ ವಿಡಿಯೋ ಶೇರ್ ಮಾಡಿದಾಗ ಹಲವು ಜನ ಇದರ ಸಾಹಿತ್ಯವನ್ನು ಕೇಳಿದ್ದರಂತೆ. ಅದಕ್ಕೆ ಅವರು ಸಾಹಿತ್ಯದ ಲಿಂಕನ್ನೂ ನಂತರ ಶೇರ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಕೆ.ಎಸ್.ನ ಅವರ ಈ ಹಾಡು ಮತ್ತೊಮ್ಮೆ ಹೊಸ ತಲೆಮಾರಿನ ಕೇಳುಗರನ್ನು, ಸಾಹಿತ್ಯ ಆರಾಧಕರನ್ನು ಸೆಳೆದಿದೆ.