ಭಾರತ : ಭಾವಪರವಶ ಸಂಗೀತವು ಹಬ್ಬಗಳೊಂದಿಗೆ ಸೇರಿಕೊಂಡಿದೆ. ಸಂಗೀತ ಸಂಯೋಜಕ ಡಾ. ಸಿ.ವಿ. ರಂಜಿತ್ ಆ ಕ್ಷಣ ಹತ್ತಿರವಾದಂತೆ ಕೊಂಚ ಹರ್ಷ ಹಾಗೂ ಉತ್ಸಾಹವನ್ನು ಅನುಭವಿಸುತ್ತಿದ್ದಾರೆ. ವೃತ್ತಿಯಲ್ಲಿ ದಂತ ವೈದ್ಯರಾಗಿದ್ದರೂ ಕಣ್ಣೂರಿನ ಅತ್ಯಂತ ಆಸಕ್ತಿಯ ಸಂಗೀತ ಸಂಯೋಜಕರಾಗಿರುವ ಅವರು ಭಾರತದ ಹೃದಯ ಭಾಗಗಳಲ್ಲಿ ಸಂಚರಿಸಿ, ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಿ ಪರಿಶ್ರಮ ಪಟ್ಟು ತಮ್ಮ ಆವಿಷ್ಕಾರಕ ಯೋಜನೆ- ವಂದೇ ಮಾತರಂ- ಎ ಫೀಲ್ ಆಫ್ ಪೇಟ್ರಿಯಾಟಿಸಂ ಮೂಲಕ ಜನರ ಕಲ್ಪನಾಶಕ್ತಿಯನ್ನು ಸೆರೆ ಹಿಡಿಯುವಂತೆ ರಾಗವನ್ನು ಸಂಯೋಜಿಸಿ ಮತ್ತು ಪರಿಷ್ಕರಿಸಿದ್ದು ಅವರು ತಮ್ಮ ಕನಸಿನ ಯೋಜನೆ ಕುರಿತು ಉತ್ಸುಕರಾಗಿದ್ದು ಈ ಸ್ವಾತಂತ್ರ್ಯೋತ್ಸವ ದಿನದಂದು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
“ನಾನು ಈ ಸಂಗೀತದ ಪ್ರಯಾಣ ಅಂತಿಮ ತಾಣ ತಲುಪಿರುವುದಕ್ಕೆ ಬಹಳ ಉತ್ಸಾಹ ಹಾಗೂ ಕೊಂಚ ಭಾವೋದ್ವೇಗಕ್ಕೂ ಒಳಗಾಗಿದ್ದೇನೆ. ಇದು ಅತ್ಯಂತ ಕಠಿಣ, ದೈಹಿಕ ಪರಿಶ್ರಮ ಹಾಗೂ ಸಮಯದ ವಿರುದ್ಧದ ಓಟವಾಗಿದ್ದು ಅದು ಉತ್ಸಾಹಕರ ಮತ್ತು ನನಗೆ ಆತ್ಮದ ಹುಡುಕಾಟದ ಪ್ರಯಾಣವಾಗಿದೆ. ನಾನು ಈ ಹೋರಾಟ ಆನಂದಿಸಿದ್ದೇನೆ ಮತ್ತು ಪ್ರಯತ್ನಗಳು ಉತ್ತಮ ಫಲ ನೀಡಿರುವುದನ್ನು ಕಾಣಲು ಬಹಳ ಸಂತೋಷ ಹೊಂದಿದ್ದೇನೆ” ಎಂದು ಡಾ.ರಂಜಿತ್ ಹೇಳುತ್ತಾರೆ.
“ವಂದೇ ಮಾತರಂ” ಡಾ. ಸಿ.ವಿ. ರಂಜಿತ್ ಸಂಗೀತ ಸಂಯೋಜಿಸಿ ನಿರ್ದೇಶಿಸಿದ ಗೀತೆಯಾಗಿದ್ದು ಆಗಸ್ಟ್ 12ರಂದು ಸ್ವಾತಂತ್ರ್ಯ ದಿನಾಚರಣೆಯ ಕೆಲ ದಿನಗಳ ಮುಂಚೆ ಬಿಡುಗಡೆಯಾಗಲು ಸಜ್ಜಾಗಿದ್ದಾರೆ. “ಎ.ಆರ್. ರಹಮಾನ್ ಅವರ ವಂದೇ ಮಾತರಂನ ಅಸಾಧಾರಣ ಸಂಗೀತದ ಮಾಸ್ಟರ್ ಪೀಸ್ ಬಿಡುಗಡೆಯಾದ ದಿನದಿಂದಲೂ ನಾನು ಬೇರೆ ಯಾವುದೇ ದೇಶಭಕ್ತಿ ಗೀತೆಯೂ ಭಾರತೀಯರಲ್ಲಿ ಈ ರೀತಿಯಲ್ಲಿ ಸ್ಫೂರ್ತಿ ತುಂಬಿಲ್ಲ. ನಾನು ಈ ಐತಿಹಾಸಿಕ ಸೌಂದರ್ಯ ಹಾಗೂ ಈ ದೇಶದ ನೈಸರ್ಗಿಕ ಅದ್ಭುತವನ್ನು ನನ್ನ ಸಂಗೀತ ನಿರ್ಮಾಣದ ಮೂಲಕ ಪ್ರದರ್ಶಿಸಲು ಪ್ರಯತ್ನಿಸಿದ ನನ್ನ ವಿನೀತ ಪ್ರಯತ್ನವಾಗಿದೆ. ಇದು ದೇಶಭಕ್ತ ಭಾರತೀಯರಿಗೆ ನಿಜಕ್ಕೂ ಸ್ಫೂರ್ತಿ ತುಂಬಲಿದೆ ಎಂಬ ಭರವಸೆ ನನ್ನದು” ಎಂದು ರಂಜಿತ್ ಹೇಳುತ್ತಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯಿಂದ ಮೈ ನವಿರೇಳಿಸುವ ತಾಣಗಳಲ್ಲಿ ಚಿತ್ರೀಕರಿಸಿರುವ ಈ ಗೀತೆಯು ತಾಜಾ ಮತ್ತು ಕಣ್ಸೆಳೆಯುವ ಅನುಭವ ನೀಡುತ್ತದೆ” ಎಂದು ಹೇಳಿದರು.
ಡಾ.ಸಿ.ವಿ. ರಂಜಿತ್ ತಾವು ಈ 6 ನಿಮಿಷದ ದೇಶಭಕ್ತಿ ಗೀತೆಯನ್ನು ರೂಪಿಸಲು ಒಂದು ವರ್ಷ ಶ್ರಮಿಸಿದ್ದಾಗಿ ಹೇಳಿದರು. ಚಿತ್ರೀಕರಣ ಕಳೆದ ವರ್ಷ ಜುಲೈನಲ್ಲಿ ಪ್ರಾರಂಭವಾಗಿದ್ದು ಗ್ರಾಮೀಣ ಮತ್ತು ನಗರ ಭಾರತದ ವಿಸ್ತಾರ ನೋಟಗಳನ್ನು ಸೆರೆ ಹಿಡಿದಿದ್ದು ಅದರಲ್ಲಿ ದೆಹಲಿ, ಆಗ್ರಾ, ಅಮೃತಸರ, ಕುಲು ಮನಾಲಿ, ಲಡಾಖ್, ಕೇದಾರನಾಥ್, ಶ್ರೀನಗರ, ಕೇರನ್, ಮುಂಬೈ, ವಾರಣಾಸಿ, ಬರೋಡ, ಲಖನೌ, ಮೈಸೂರು, ಹಂಪಿ, ಹೈದರಾಬಾದ್, ಗೌಹಾಟಿ, ಜೈಪುರ, ಅಜ್ಮೀರ, ಮೇಘಾಲಯ, ಕೊಲ್ಕತಾ, ಕನ್ಯಾಕುಮಾರಿ, ಧನುಷ್ಕೋಡಿ, ಮದುರೈ, ತಿರುವನಂತಪುರಂ ಮತ್ತು ಕಾಶ್ಮೀರ ಒಳಗೊಂಡಿವೆ.
ಡಾ.ಸಿ.ವಿ. ರಂಜಿತ್ ಭಾರತ ಮತ್ತು ಪಾಕಿಸ್ತಾನಗಳ ಗಡಿಯು ಒಂದು ನದಿಯಿಂದ ಪ್ರತ್ಯೇಕಗೊಂಡ ಭಾರತದ ಮೊದಲ ಗ್ರಾಮವಾದ ಕೇರನ್ ನಲ್ಲಿ ಚಿತ್ರೀಕರಿಸಿದ ಅವಿಸ್ಮರಣೀಯ ಅನುಭವ ನೆನಪಿಸಿಕೊಂಡರು.
“ದೇಶಭಕ್ತಿ ಮತ್ತು ಸಂಗೀತದ ಶ್ರೇಷ್ಠತೆಯನ್ನು ಉಂಟು ಮಾಡುವ ಹೊಸ ರಾಗದೊಂದಿಗೆ ಬರುವುದು ನಿಜಕ್ಕೂ ಸವಾಲಿನದಾಗಿದೆ, ಏಕೆಂದರೆ ನೂರಾರು ಅಂತಹ ಗೀತೆಗಳು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಗಳಂದು ಬರುತ್ತವೆ. ಅಭಿಮಾನಿಗಳು ಕೋರುವ ಗುಣಮಟ್ಟದ ಮಾನದಂಡಗಳನ್ನು ಪೂರೈಸುವ ವಿಭಿನ್ನ ಗೀತೆ ಸಂಯೋಜಿಸುವುದು ನಿಜಕ್ಕೂ ಕಷ್ಟದ ಕೆಲಸ. ಆದರೆ ನಾನು ಈ ಯೋಜನೆಗೆ ಪೂರ್ಣ ನ್ಯಾಯ ಸಲ್ಲಿಸಿದ್ದೇನೆ ಎಂದು ನಂಬಿದ್ದೇನೆ” ಎಂದು ಈ ಗೀತೆ ಸಂಯೋಜನೆಯೊಂದಿಗೆ ವಿಡಿಯೋ ಆಲ್ಬಂ ಕೂಡಾ ನಿರ್ದೇಶಿಸಿರುವ ರಂಜಿತ್ ಹೇಳುತ್ತಾರೆ. “ವಂದೇ ಮಾತರಂ” ಸಾಹಿತ್ಯವನ್ನು ದುಬೈನಲ್ಲಿರುವ ರೇಡಿಯೊ ನಿರೂಪಕಿ ಮತ್ತು ಗೀತ ರಚನೆಕಾರ್ತಿ ಸುಮಿತಾ ಅಯಿಲ್ಲಿಯಾಥ್ ಈ ಗೀತೆ ರಚಿಸಿದ್ದಾರೆ ಮತ್ತು ಮುಂಬೈನ ಗಾಯಕ ಅಸ್ಲಾಂ ಹಾಡಿದ್ದಾರೆ. ಈ ಗೀತೆಯ ಸೌಂಡ್ ಮಿಕ್ಸಿಂಗ್ ಮತ್ತು ನಿರ್ಮಾಣವನ್ನು ಅಶ್ವಿನ್ ಸಿವದಾಸ್ ನಿರ್ವಹಿಸಿದ್ದರೆ ಸಿನೆಮಾಟೋಗ್ರಫಿ ಸನಿಲ್ ಕೂತುಪರಂಪ್, ಪಿವಿ ರಂಜಿತ್ ಮತ್ತು ಡಾ.ಸಿ.ವಿ.ರಂಜಿತ್ ಅವರದು. ಸಂಕಲನ ದೀಪ್ತಿ ಮತ್ತು ನಿವೇದ್ ಅವರದು.
ಗೀತೆಯನ್ನು ಖ್ಯಾತ ಬಾಲಿವುಡ್ ನಿರ್ಮಾಪಕ ಮಯೂರ್ ಕೆ. ಬರೋಟ್ ಅವರ ಮುಂಬೈನ ವೈಟ್ ಮೆಷರ್ ಎಂಟರ್ಟೈನ್ ಮೆಂಟ್ ಅಡಿಯಲ್ಲಿ ನಿರ್ಮಿಸಲಾಗಿದೆ.
ಡಾ.ಸಿ.ವಿ. ರಂಜಿತ್ ಹಿಂದೆ “ದಿ ಸಾಂಗ್ ಆಫ್ ಕಣ್ಣೂರ್: ಹೆವನ್ ಆಫ್ ಟೂರಿಸಂ” ಎಂಬ ಯಶಸ್ವಿ ಗೀತೆ ಸಂಯೋಜಿಸಿ ಖ್ಯಾತಿ ಪಡೆದಿದ್ದು ಅದಕ್ಕೆ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ, ಅವರು 20 ಭಾರತೀಯ ಭಾಷೆಗಳಲ್ಲಿ ಗೀತೆಗಳನ್ನು ಸೃಷ್ಟಿಸಿದ್ದು ಖ್ಯಾತ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ಅವರಿಗೆ ಗೌರವಪೂರ್ವಕ ಗೀತೆಯೊಂದನ್ನೂ ರೂಪಿಸಿದ್ದಾರೆ.
“ವಂದೇ ಮಾತರಂ” ಅನ್ನು ಖ್ಯಾತ ಮ್ಯೂಸಿಕ್ ಲೇಬಲ್ ಮ್ಯುಜಿಕ್ 247 ಮೂಲಕ ಬಿಡುಗಡೆ ಮಾಡಲಾಗುತ್ತಿದ್ದು ದೇಶಾದ್ಯಂತ ಯುವಜನರು ಮತ್ತು ನವೀಕೃತ ದೇಶಭಕ್ತಿಯ ಭಾವನೆಯ ಸ್ಫೂರ್ತಿ ತುಂಬುವ ಉದ್ದೇಶ ಹೊಂದಿದೆ.