ಬೆಳಗಿನ ವಾಕಿಂಗ್ ದೇಹದಲ್ಲಿನ ರಕ್ತ ಸಂಚಾರವನ್ನು ಉತ್ತಮಪಡಿಸುತ್ತದೆ. ಮತ್ತು ಅನೇಕ ರೋಗಗಳಿಂದ ಮುಕ್ತಿ ನೀಡುತ್ತದೆ. ಆದರೆ ಕೆಲವರು ವಾಕಿಂಗ್ ಇಂದ ಬಂದ ಬಳಿಕ ಕೆಲ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ವಾಕಿಂಗ್ ಮಾಡಿದ ಲಾಭ ಏನು ಕೂಡ ಸಿಗುವುದಿಲ್ಲ. ಹಾಗಾದ್ರೆ ವಾಕಿಂಗ್ ಬಳಿಕ ಮಾಡಬಾರದಾದ ತಪ್ಪುಗಳೇನು ಎಂಬುವುದನ್ನು ನೋಡೋಣ.
ಪ್ರತಿಯೊಬ್ಬರು ಕೊಬ್ಬನ್ನು ಕರಗಿಸಿಕೊಳ್ಳಲು ಆಗದೇ ಪರದಾಡಿ, ಫಿಟ್ ಆಗಿರುವದಕ್ಕಾಗಿ ಬೆಳಗ್ಗೆ ಹೊತ್ತು ವಾಕಿಂಗ್ ಹೋಗುತ್ತಿರುತ್ತಾರೆ. ವಾಕಿಂಗ್ ಮಾಡಿದರೆ ದೇಹವನ್ನು ಹೆಲ್ದಿಯಾಗಿ ಇಟ್ಟುಕೊಳ್ಳಲು ಸಾಧ್ಯ. ಅದರೊಟ್ಟಿಗೆ ಸೂಕ್ತವಾದ ಆಹಾರ ಮತ್ತು ಪಾನೀಯವನ್ನು ಕುಡಿಯಬೇಕು. ಚೆನ್ನಾಗಿ ವ್ಯಾಯಾಮ ಮಾಡಬೇಕು. ಹೀಗೆಲ್ಲ ಮಾಡುವುದರಿಂದ ನಮ್ಮ ಆರೋಗ್ಯ ಹೆಲ್ದಿ ಆಗಿರುತ್ತದೆ.
ಹೆಲ್ತ್ಲೈನ್ ಪ್ರಕಾರ, ವಾಕಿಂಗ್ ಮಾಡಿ ಬಂದ ನಂತರ ಸ್ವಲ್ಪ ಸಮಯ ಬಿಟ್ಟು ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಬೇಕು. ಬೆಳಗ್ಗೆ ವಾಕಿಂಗ್ ನಂತರ ದೇಹದಲ್ಲಿ ಆಯಾಸ ಹೆಚ್ಚಾಗುತ್ತದೆ. ಹಾಗಾಗಿ ವಾಕಿಂಗ್ ಮಾಡಿದ ನಂತರ ಹೆಚ್ಚು ನೀರು ಕುಡಿಯಬೇಕು. ಎಲೆಕ್ಟ್ರೋಲೈಟ್ ಪಾನೀಯಗಳನ್ನು ದೇಹವನ್ನು ಹೈಡ್ರೀಕರಿಸಲು ಸಹ ಬಳಸಬಹುದಾಗಿದೆ.
ವಾಕಿಂಗ್ ನಂತರ ಸ್ಟ್ರೆಚಿಂಗ್ ಮಾಡಬೇಕು. ಇದು ಅನೇಕ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ. ಮಾರ್ನಿಂಗ್ ವಾಕಿಂಗ್ ಸ್ನಾಯುಗಳನ್ನು ಬೆಚ್ಚಗಾಗಿಸುತ್ತದೆ. ಇದರಿಂದ ಸ್ನಾಯು ನೋವು ಮೊದಮೊದಲು ಹೆಚ್ಚಾಗಬಹುದು. ಆದರೆ ಸ್ಟ್ರೆಚಿಂಗ್ ಮಾಡುವುದರಿಂದ ನೋವು ಕಡಿಮೆ ಆಗುತ್ತದೆ. ಇದಲ್ಲದೇ ದೇಹವನ್ನು ಫ್ಲೆಕ್ಸಿಬಲ್ ಆಗಿಸಲು ಸಹಾಯಕವಾಗುತ್ತದೆ. ವಾಕಿಂಗ್ ನಂತರ ಕುಳಿತುಕೊಳ್ಳುವುದು ಸಹ ದೇಹದಲ್ಲಿ ನೋವು ಉಂಟುಮಾಡುತ್ತದೆ. ಅದಕ್ಕಾಗಿ ವಾಕಿಂಗ್ ಇಂದ ಬಂದವರು ಕುಳಿತುಕೊಳ್ಳದೆ ಚಿಕ್ಕ ಪುಟ್ಟ ಏನಾದ್ರೂ ಕೆಲಸಗಳನ್ನು ಮಾಡುತ್ತಿರಬೇಕು. ಸ್ವಲ್ಪ ಸಮಯವಾದ ಮೇಲೆ ಶಾಂತವಾಗಿ ಕುಳಿತುಕೊಂಡು ದೇಹದ ತಣಿವನ್ನು ಆರಿಸಿಕೊಳ್ಳಬೇಕು
ವಾಕಿಂಗ್ ಬಳಿಕ ಶಕ್ತಿಯನ್ನು ಕಾಪಾಡಿಕೊಳ್ಳಲು ಪ್ರೋಟೀನ್ ಶೇಕ್ಗಳನ್ನು ಉಪಯೋಗಿಸಬಹುದು. ಬೆಳಗ್ಗೆ ವಾಕಿಂಗ್ ಮಾಡುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಹಾಗೆಯೇ ನಮ್ಮ ಶಕ್ತಿಯೂ ಕಡಿಮೆಯಾಗುತ್ತದೆ. ಆದ್ದರಿಂದ ನೀವು ನಿಮ್ಮ ಮಾರ್ನಿಂಗ್ ವಾಕಿಂಗ್ ನಂತರ ಹಿಂತಿರುಗಿದಾಗ, ಪ್ರೋಟೀನ್ ಶೇಕ್ ಅಥವಾ ಬಾಳೆಹಣ್ಣು ತಿನ್ನಬೇಕು.. ಇದು ಸ್ನಾಯುಗಳನ್ನು ಬಲಪಡಿಸುವುದಲ್ಲದೇ, ದೇಹಕ್ಕೆ ಅಗತ್ಯವಾದ ಜೀವಸತ್ವಗಳನ್ನು ಸಹ ನೀಡುತ್ತದೆ.
ಮಾರ್ನಿಂಗ್ ವಾಕಿಂಗ್ ನಂತರ ಯಾವುದೇ ಹಣ್ಣುಗಳನ್ನು ಬೇಕಾದರು ತಿನ್ನಬಹುದು. ಹೀಗೆ ಮಾಡುವುದರಿಂದ ದೇಹಕ್ಕೆ ಶಕ್ತಿ ಮರಳುತ್ತದೆ. ಜೊತೆಗೆ ಅನೇಕ ರೀತಿಯ ವಿಟಮಿನ್ ಗಳು ಮತ್ತು ಮಿನರಲ್ ಗಳು ಕೂಡ ಸಿಗುತ್ತದೆ.