ಈಗಂತೂ ಹವಾಮಾನ ಹೇಗಿದೆ ಅಂದರೆ ಯಾವಾಗ ಮಳೆ ಬರುತ್ತೋ, ಯಾವಾಗ ಬಿಸಿಲಾಗುತ್ತೋ ಗೊತ್ತೇ ಆಗುವುದಿಲ್ಲ. ಇಂತಹ ವೇಳೆ ಏನಾದರು ರುಚಿಕರ ತಿನಿಸುಗಳು ಬೇಕೆನಿಸುತ್ತದೆ. ಆದರೆ ಡಯಟ್! ಒಂದು ತಿಂದರೆ ಗ್ಯಾಸ್ಟ್ರಿಕ್ ಮತ್ತೊಂದು ತಿಂದರೆ ಕ್ಯಾಲೊರೀಸ್ ಅಂತಾರೆ.
ನೀವು ನಿಮ್ಮ ಡಯಟ್ ಜೊತೆಗೆ ನೆಚ್ಚಿನ ಆಹಾರಗಳನ್ನು ಕೂಡ ತಿನ್ನಬಹುದು.. ಹೇಗೆ ಗೊತ್ತಾ? ಇಲ್ಲಿದೆ ನೋಡಿ
• ನಿಮ್ಮಿಷ್ಟದ ಆಹಾರ ಸೇವಿಸುವಾಗ ಮಿತಿ ಇರಲಿ. ಜಾಸ್ತಿ ತಿನ್ನದಿರಿ.
• ಪ್ರತಿದಿನ ಹೊರಗೆ ತಿನ್ನುವ ಅಭ್ಯಾಸ ಬಿಟ್ಟುಬಿಡಿ.
• ಆರೋಗ್ಯಕರ ತಿಂಡಿಗಳಿಗೆ ಹೆಚ್ಚಿನ ಮಹತ್ವ ಕೊಡಿ.
• ಬಾಯಾರಿಕೆಗೂ, ಹಸಿವಿಗೂ ವ್ಯತ್ಯಾಸ ತಿಳಿಯಿರಿ. ಹಸಿವಾದಾಗ ಮಾತ್ರ ತಿನ್ನಿ.
• ನಿಯಮಿತ ಹಾಗೂ ನಿಗದಿತ ಸಮಯದಲ್ಲಿ ಮಾತ್ರ ಆಹಾರ ಸೇವಿಸಿ.
• ಪ್ರತಿನಿತ್ಯ ತಪ್ಪದೆ ವ್ಯಾಯಾಮ ಮಾಡಿ.
• ನೈಟ್ ಶಿಫ್ಟ್ ಆದಷ್ಟು ಕಡಿಮೆ ಮಾಡಿ.
• ಪ್ರತಿದಿನ ಮುಂಜಾನೆ ತಪ್ಪದೆ ಬಿಸಿ ನೀರು ಸೇವಿಸಿ.