ಯಾರ ಸಂಸಾರದಲ್ಲಿ ಜಗಳ ಇರೋದಿಲ್ಲ ಹೇಳಿ. ಹೇಳಿದ ಒಂದು ಮಾತು ನೂಲಿನಂತೆ ಸುತ್ತಿ ಇಡೀ ಸಂಸಾರವನ್ನೇ ಹಾಳು ಮಾಡುತ್ತದೆ. ನಿಮ್ಮ ಸಂಗಾತಿಯೊಂದಿಗೂ ಹೀಗೆ ಜಗಳವಾಗುತ್ತಾ? ಹಾಗಿದ್ರೆ ಅದನ್ನ ನಿಭಾಯಿಸಲು ಈ ಟಿಪ್ಸ್ ಟ್ರೈ ಮಾಡಿ
• ಜಗಳ ನಡೆಯುತ್ತಿರುವ ಸ್ಥಳದಿಂದ ಹೊರ ನಡೆದುಬಿಡಿ: ಜಗಳ ನಡೆಯುವಾಗ ಅಲ್ಲೇ ಇದ್ದರೆ ಮಾತಿಗೆ ಮಾತು ಬೆಳೆಯುತ್ತದೆ. ಹಾಗಾಗಿ ಸುಮ್ಮನೆ ಆ ಜಾಗದಿಂದ ಮುಂದೆ ನಡೆಯಿರಿ.
• ಹತ್ತಿರದ ಕುಟುಂಬದವರನ್ನು ಕರೆದು ಸಂಧಾನ ಮಾಡಿಸಿ: ನಿಮ್ಮ ಸಂಗಾತಿಯ ಕುಟುಂಬದವರನ್ನು ಕರೆದು ಸಂಧಾನ ಮಾಡಿಕೊಳ್ಳಿ.
• ಎಲ್ಲವೂ ನೀವೇ ಮಾತನಾಡದಿರಿ: ಸಂಧಾನಕ್ಕೆ ಕರೆದ ನಂತರ ಎಲ್ಲರ ಅಭಿಪ್ರಾಯವೂ ಕೇಳಬೇಕು. ನೀವು ಏನು ಹೇಳಬೇಕೆಂದಿದ್ದೀರೋ ಅದನ್ನ ತಿಳಿಸಿ, ಬೇರೆಯವರ ಮಾತುಗಳನ್ನು ಕೂಡ ಕೇಳಿ.
• ಮಾತನಾಡುವ ನಿಮ್ಮ ನೋಟ, ಪದ ಬಳಕೆ ಬಗ್ಗೆ ಎಚ್ಚರದಿಂದಿರಿ: ಮಾತನಾಡುವಾಗ ಕೆಟ್ಟ ಪದಗಳನ್ನು ಬಳಸದಿರಿ. ನೋಟ ದೃಢವಾಗಿರಲಿ.
• ನಿಮ್ಮ ಅನಿಸಿಕೆ, ನಿಮ್ಮ ಬೇಡಿಕೆಗಳನ್ನು ಅರ್ಥವಾಗುವ ಹಾಗೆ ತಿಳಿಸಿ: ನಿಮ್ಮ ನಡುವಿನ ತೊಂದರೆಗೆ ಕಾರಣವೇನು? ಅದಕ್ಕೆ ನಿಮ್ಮ ಸಂಗಾತಿಯಿಂದ ನೀವು ಏನನ್ನು ಅಪೇಕ್ಷಿಸುತ್ತೀರ ಎಂದು ಸ್ಪಷ್ಟವಾಗಿ ತಿಳಿಸಿ.
• ಒಂದು ರೆಸಲ್ಯೂಷನ್ ಮಾಡಿ. ಅದರಂತೆ ಫಾಲೋ ಮಾಡಿ: ನಿಮ್ಮಿಬ್ಬರ ನಡುವೆ ಮನಸ್ತಾಪ ಬಂದಾಗ ಒಂದು ರೆಸಲ್ಯೂಷನ್ ಮಾಡಿಕೊಂಡು ಅದರಂತೆ ಫಾಲೋ ಮಾಡಿ.
• ಅಗತ್ಯವೆನಿಸಿದರೆ ಮಾನಸಿಕ ತಜ್ಞರ ಜೊತೆ ಸಂವಾದ ನಡೆಸಿ: ತುಂಬಾ ತೊಂದರೆ ಅನಿಸಿದರೆ ಮಾನಸಿಕ ತಜ್ಞರ ಜೊತೆ ಪ್ರತ್ಯೇಕ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರಕಂಡುಕೊಳ್ಳಿ.