ಈ ವರ್ಷದ ಬೇಸಿಗೆ ಎಲ್ಲೆಡೆ ನೀರಿಲ್ಲದೆ ಆಹಾಕಾರ ಎಬ್ಬಿಸಿದೆ. ಬಿಸಿಲಿನ ಝಳ ಮನುಷ್ಯರನ್ನಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳನ್ನು ಬಿಟ್ಟಿಲ್ಲ. ಅದರಲ್ಲೂ ಎಲ್ಲೆಂದರಲ್ಲಿ ಸ್ವಚಂದವಾಗಿ ಹಾರಿಕೊಂಡು ಇರುತ್ತಿದ್ದ ಪಕ್ಷಿಗಳು, ಬೇಸಿಗೆ ಸಮಯದಲ್ಲಿ ನೀರಿಗೆ ಪರಿತಪಿಸುವುದು ಸಾಮಾನ್ಯವಾಗಿದೆ. ಇಷ್ಟಕ್ಕೂ ಈ ವರ್ಷ ನೀರಿನ ಬರಗಾಲ ಎಲ್ಲೆಡೆ ಕಾಣುತ್ತಿದೆ. ನಮ್ಮ ಪರಿಸ್ಥಿತಿಯೇ ಇಷ್ಟು ಹೀನವಾಗಿರುವಾಗ, ಇನ್ನು ಪ್ರಾಣಿ ಪಕ್ಷಿಗಳ ಕಥೆ ಏನು?
ಕಟ್ಟಡ, ವಸತಿ ಅಂದುಕೊಂಡು ಅವುಗಳ ವಾಸಸ್ಥಾನ ಕಿತ್ತುಕೊಂಡ ನಾವು, ಇವಾಗ ಈ ಸಂದರ್ಭದಲ್ಲಿ ಕನಿಷ್ಠ ಸಹಾಯವನ್ನಾದರೂ ಮಾಡಬೇಕಲ್ಲವೇ?
• ಬರ್ಡ್ ಫೀಡರ್
ಹೌದು, ಹೆಸರೇ ಹೇಳುವಂತೆ ಇದು ಪಕ್ಷಿಗಳಿಗೆ ಆಹಾರ ನೀಡುವ ತಟ್ಟೆ. ಇದನ್ನು ತಯಾರಿಸೋದು ತುಂಬಾ ಸುಲಭ. ಪ್ಲಾಸ್ಟಿಕ್ ಮರುಬಳಕೆಯಲ್ಲಿ ಬರ್ಡ್ ಫೀಡರ್ ತಯಾರಿಸಬಹುದು
ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕ, ಆದರೆ ವಿಧಿಯಿಲ್ಲದೇ ಎಲ್ಲರೂ ಅದನ್ನು ಬಳಸುವವರೇ. ಒಂದು ಸಲ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಇದನ್ನು ತಯಾರಿಸಬಹುದು.
ಬರ್ಡ್ ಫೀಡರ್ ಮಾಡೋದು ಹೇಗೆ?
ಪ್ಲಾಸ್ಟಿಕ್ /ಬಿಸ್ಲೇರಿ ಬಾಟಲಿಗಳ ನಡುವೆ ಎರಡು ರಂದ್ರ ತೆಗೆದು ಒಂದು ಕೋಲು ಅದರ ಒಳಗೆ ಹೋಗುವಂತೆ ಮಾಡಬೇಕು. ಹಾಗೆಯೇ ಬಳಸಿ ಬಿಸಾಡಿದ ಎರಡು ಐಸ್ಕ್ರೀಮ್ ಕಪ್ಗಳ ಮೇಲೆ ದಾರ ಕಟ್ಟಿ, ಆ ದಾರವನ್ನು ಕೋಲಿನ ಎರಡು ತುದಿಗಳಿಗೆ ಕಟ್ಟಬೇಕು. ನೋಡಲು ತಕ್ಕಡಿಯಂತೆ ಕಾಣುವ ಈ ಬರ್ಡ್ ಫೀಡರ್ನ ಒಂದು ಬದಿಯಲ್ಲಿ ನೀರು, ಇನ್ನೊಂದು ಬದಿಯಲ್ಲಿ ಧಾನ್ಯ, ಕಾಲುಗಳನ್ನು ಹಾಕಿ ಮರಕ್ಕೆ ಕಟ್ಟಿದರೆ, ಅಥವಾ ನಿಮ್ಮ ಮನೆಯ ಟೆರೇಸ್ ಮೇಲೆ ಕೆಳಗೆ ಬೀಳದಂತೆ ಇಟ್ಟರೆ, ನಿಮ್ಮ ಅಳಿಲು ಸೇವೆಗೆ ಒಂದು ಸಾರ್ಥಕತೆ ಬರುತ್ತದೆ