ದಕ್ಷಿಣ ಕನ್ನಡದಲ್ಲಿ ಸದ್ಯಕ್ಕೆ ಮೊಬೈಲ್ ಕ್ಯಾಮೆರಾಗಳದೇ ಕಾರುಬಾರು. ಮಹಿಳೆಯರ ಶೌಚಾಲಯಕ್ಕೂ ದಾಪು
ಗಾಲುಹಾಕಿರುವ ಕ್ಯಾಮೆರಾಗಳು, ಮಾನವನ ವಿಕೃತ ಮನೋಭಾವಕ್ಕೆ ತನ್ನತನವನ್ನು ಕಳೆದು ಕೊಳ್ಳುತ್ತಿದೆ. ಹಿಂದೊಂದು ಕಾಲದಲ್ಲಿ ಆಫ್ರಿಕಾ ಖಂಡದ ಅಪೌಷ್ಟಿಕತೆ ಮತ್ತು ಹಸಿವಿನ ಮಟ್ಟವನ್ನು ಜಗತ್ತಿಗೆ ಸಾರಿದ ಕ್ಯಾಮೆರಾ ಸೆರೆ, ಇದೀಗ ಒಬ್ಬ ಮಾನವನ ವ್ಯಕ್ತಿತ್ವಕ್ಕೆ ಕೊಳ್ಳೆ ಇಡುವ ಸಾಧನವಾಗಿ ಮಾರ್ಪಟ್ಟಿದೆ.
ಪಾ. ವೆಂ. ಆಚಾರ್ಯರು ತಮ್ಮ ‘ಯುದ್ಧ’ ಎಂಬ ಕವನದಲ್ಲಿ ಹೀಗೊಂದು ಆಲೋಚನೆಯನ್ನು ಓದುಗರ ತಲೆಯಲ್ಲಿ ಹಾಕುತ್ತಾರೆ:
“ವಾಯುಯಾನವನು ನಿರ್ಮಿಸಿದ ವಿಜ್ಞಾನಿ,
ನಗರಗಳ ಸುಡಲೆಂದು ಬಗೆದೆಯಾ ನೀ?
ಆಕಾಶವಾಣಿಯನು ಕಂಡ ಮಾರ್ಕೊನಿ,
ವೈರವನು ಹರಡಲೆಂದಾಷಿಸಿದೆಯಾ ನೀ?” ಎಂದು.
ಸ್ನಾನ ಕೊಠಡಿಯಲ್ಲಿ ಮೊಬೈಲ್ ಕ್ಯಾಮೆರಾ ಸೆರೆ, ವ್ಯಕ್ತಿಯ ಬಂಧನ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಶಾಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಅಳವಡಿಕೆ, ವಿದ್ಯಾರ್ಥಿಗಳ ಅಮಾನತ್ತು. ಇವೆಲ್ಲಾ ಇತ್ತೀಚಿನ ದಿನಗಳಲ್ಲಿ ಸರಾಗವಾಗಿ ಸಮಾಜದಲ್ಲಿ ಪ್ರತಿಬಿಂಬಿಸುತ್ತಿರುವಾಗ, ಕ್ಯಾಮೆರಾ ಕಂಡು ಹಿಡಿದ ವಿಜ್ಞಾನಿ ವ್ಯಕ್ತಿ ವಿನಾಶದ ಕನಸ ಹೊತ್ತಿದ್ದನು ಎಂದು ಬಗೆದಿರುವೆಯಾ ನೀ ಎಂದು ಪಾ. ವೆ ರು ನುಡಿದಂತೆ ಭಾಸವಾಗುತ್ತದೆ.
ಇವೆಲ್ಲದರ ಮಧ್ಯೆ, ಮಹಿಳಾ ಖಾಸಗೀತನವೂ ರಾಜಕೀಯದ ಗಾಳಕ್ಕೆ ಸಿಲುಕಿ ನರಳುತ್ತಿರುವುದು ಖೇದಕರ ಸಂಗತಿ.
“ಯುಗ ಯುಗ ಗಳಿಂ ಕಲಿತು ಮನುಜನೇನಾದ?-
ಜ್ಞಾನಿಯಾಗಿಲ್ಲ ಬರೀ ತೀಕ್ಷ್ಣಮತಿಯಾದ,” ಎಂದು ಪಾ. ವೆ ರವರು ಮತ್ತೆ ಮತ್ತೆ ಗೊಣಗಿದಂತಾಗುತ್ತಿದೆ.
Your words are powerful! Society has no idea what’s coming if it keeps forgetting moral lessons. Thank you for reminding us about cruelty and its impact through great poetry.