ನವದೆಹಲಿ: ಕಳೆದ ಜುಲೈ 20 ರಂದು ಗೋರಕ್ಷಕ ಮೋನು ಮಾನೇಸರ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಹರ್ಯಾಣದ ನುಹ್ನಲ್ಲಿ ವಿಎಚ್ಪಿ ಆಯೋಜಿಸಿದ್ದ ಬ್ರಿಜ್ಮಂಡಲ್ ಧಾರ್ಮಿಕ ಯಾತ್ರೆಯ ಮೇಲೆ ದಾಳಿ ಮಾಡುವ ಯೋಜನೆಯನ್ನು ಮಾಡಿಕೊಳ್ಳಲಾಯಿತು ಎಂದು ಸೋಮವಾರದಿಂದ ನುಹ್ ಮತ್ತು ಗುರುಗ್ರಾಮ್ನಿಂದ ವರದಿಯಾದ ವ್ಯಾಪಕ ಗಲಭೆ ಮತ್ತು ಹಿಂಸಾಚಾರದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ ವರದಿಯ ಪ್ರಕಾರ ಗೋವು ಕಳ್ಳಸಾಗಣೆದಾರರು ಎಂಬ ಶಂಕೆಯ ಮೇರೆಗೆ ಅಪಹರಿಸಿ ಹತ್ಯೆಗೈದ ಜುನೈದ್ ಮತ್ತು ನಾಸಿರ್ ಹತ್ಯೆಯಲ್ಲಿ ಮೋನು ಆರೋಪಿ ಅಲ್ಲದಿದ್ದರೂ , ಮೋನು ಬಹಿರಂಗವಾಗಿ ಧಾರ್ಮಿಕ ಮೆರವಣಿಗೆಯಲ್ಲಿ ಭಾಗವಹಿಸಲಿರುವ ಬಗ್ಗೆ ಮೇವಾತ್ನ ಸ್ಥಳೀಯ ಮುಸ್ಲಿಂ ಗುಂಪುಗಳು ಆಕ್ರೋಶಗೊಂಡಿದ್ದವು. ಸ್ಥಳೀಯ ಬಜರಂಗದಳದ ನಾಯಕ ಬಿಟ್ಟು ಬಜರಂಗಿಯ ಎರಡನೇ ವಿಡಿಯೋದಲ್ಲಿ ಧೈರ್ಯವಿದ್ದರೆ ಯಾತ್ರೆಯನ್ನು ನಿಲ್ಲಿಸಿ ಎಂದು ಸವಾಲು ಹಾಕಿದ್ದು ಸ್ಥಳೀಯ ಮುಸ್ಲಿಂ ಸಮುದಾಯದ ಕೋಪವನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಜುಲೈ 21 ಮತ್ತು 23 ರ ನಡುವೆ, ನುಹ್ನಲ್ಲಿನ ಸ್ಥಳೀಯ ಗುಂಪುಗಳು ಸಭೆಗಳನ್ನು ನಡೆಸಿತು ಮತ್ತು ಯಾತ್ರೆಯ ಮೇಲೆ ದಾಳಿ ಮಾಡಲು ಯೋಜನೆಯನ್ನು ರೂಪಿಸಿತು, ಅವರು ಮೋನು ಭಾಗವಹಿಸುತ್ತಾರೆ ಎಂದು ನಂಬಿದ್ದರು. ಈ ಸಭೆಗಳಲ್ಲಿ ಭಾಗವಹಿಸಿದ ಜನರು ವಾಟ್ಸಾಪ್ ಗುಂಪುಗಳನ್ನು ರಚಿಸಿಕೊಂಡದ್ದಲ್ಲದೆ ಮೆರವಣಿಗೆಯ ಮೇಲೆ ಎಸೆಯಲು ಕಲ್ಲುಗಳು ಮತ್ತು ಗಾಜಿನ ಬಾಟಲಿಗಳನ್ನು ಸಂಗ್ರಹಿಸಲು ಪ್ರತಿ ಗ್ರೂಪ್ ಲೀಡರ್ ನ್ನು ನೇಮಿಸಿಕೊಂಡು ಜವಾಬ್ದಾರಿಗಳನ್ನು ನಿಯೋಜಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ,
ಅಂತಹ ಒಂದು ಸಭೆಯಲ್ಲಿ ಭಾಗವಹಿಸಿದ್ದಾಗಿ ಹೇಳಿಕೊಂಡ ಸ್ಥಳೀಯ ನುಹ್ ನಿವಾಸಿಯೊಬ್ಬ ಕಲ್ಲುಗಳು ಮತ್ತು ಗಾಜಿನ ಬಾಟಲಿಗಳನ್ನು ಸಂಗ್ರಹಿಸುವುದು ಸುಲಭ ಎಂದು ಹೇಳಿದರು, ಏಕೆಂದರೆ ಈ ಎರಡೂ ವಸ್ತುಗಳು ಈ ಪ್ರದೇಶದಲ್ಲಿ ಹೇರಳವಾಗಿವೆ. “ಇಲ್ಲಿನ ಸ್ಥಳೀಯ ಅಂಗಡಿಗಳು ಗಾಜಿನ ತಂಪು ಪಾನೀಯ ಬಾಟಲಿಗಳನ್ನು ಮಾತ್ರ ಮಾರಾಟ ಮಾಡುತ್ತವೆ. ಹಾಗಾಗಿ ಅವುಗಳನ್ನು ಜೋಡಿಸುವುದು ಸಮಸ್ಯೆಯಾಗಿರಲಿಲ್ಲ. ಇಲ್ಲಿನ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಕಲ್ಲುಗಳನ್ನು ಸಂಗ್ರಹಿಸಲು ಮುಂಚಿತವಾಗಿ ತಿಳಿಸಲಾಗಿತ್ತು,” ಎಂದು ಹೆಸರು ಬಹಿರಂಗಪಡಿಸಲಿಚ್ಚಿಸಿದ ಒರ್ವ ನಿವಾಸಿ ತಿಳಿಸಿದ.
ಅನಾಮಧೇಯರಾಗಿ ಮಾತನಾಡಿದ ಸಿಂಗರ್ ಗ್ರಾಮದ ನಿವಾಸಿಯೊಬ್ಬ ಅವರು ದಾಳಿಗೆ ಗುಂಪನ್ನು ಸಜ್ಜುಗೊಳಿಸಲು ಮೋಟಾರ್ಬೈಕ್ಗಳನ್ನು ಸಹ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು. “ನಾವು 200 ಕ್ಕೂ ಹೆಚ್ಚು ಬೈಕ್ಗಳನ್ನು ನಿರ್ವಹಿಸಿದ್ದೇವೆ ಮತ್ತು ಪೊಲೀಸರಿಂದ ಕ್ರಮವನ್ನು ತಪ್ಪಿಸಲು ಅವುಗಳ ನಂಬರ್ ಪ್ಲೇಟ್ ಗಳಿಗೆ ಕಪ್ಪು ಬಣ್ಣ ಬಳಿದಿದ್ದೇವೆ. ಸುಮಾರು 3,000 ಗಾಜಿನ ಬಾಟಲಿಗಳನ್ನು ಜೋಡಿಸಿದ್ದೆವು. ಅವುಗಳಲ್ಲಿ ಹೆಚ್ಚಿನವು ಸ್ಪೋಟಕಗಳಂತೆ ಎಸೆಯಲು ಉದ್ದೇಶಿಸಿದ್ದರೆ, ಅವುಗಳಲ್ಲಿ ಕೆಲವು ಪೆಟ್ರೋಲ್ನಿಂದ ಕೂಡ ತುಂಬಿಸಲಾಗಿತ್ತು. ಈ ವಸ್ತುಗಳನ್ನು ನಂತರ ಮೆರವಣಿಗೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಹೊರಟಿದ್ದ ವಿವಿಧ ಗುಂಪುಗಳಿಗೆ ಕಳುಹಿಸಲಾಯಿತು,” ಎಂದು ಆತ ಹೇಳಿದ.
ಇಬ್ಬರು ಮುಸ್ಲಿಂ ದನದ ವ್ಯಾಪಾರಿಗಳ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಮೋನು ವಿರುದ್ಧ ಪ್ರಕರಣ ದಾಖಲಿಸಿದಾಗಿನಿಂದ ಮೋನು ತಲೆಮರೆಸಿಕೊಂಡಿದ್ದಾನೆ ಮತ್ತು ಗಲಭೆ ಮತ್ತು ಇತರ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಹರಿಯಾಣದ ಪಟೌಡಿಯಲ್ಲಿ ಈತನ ವಿರುದ್ದ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹರಿಯಾಣ ಪೊಲೀಸರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮೋನು ಮಾನೇಸರ್ ಯಾವಾಗ ಮತ್ತು ಎಲ್ಲಿ ತನ್ನ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ ಮತ್ತು ಅವುಗಳನ್ನು ಎಲ್ಲಿಂದ ಅಪ್ಲೋಡ್ ಮಾಡಿದ್ದಾರೆ ಎಂದು ನಮಗೆ ತಿಳಿದಿಲ್ಲ ಎಂದು ಅವರು ಹೇಳಿದರು.
ಮೋನು ಮಾನೇಸರ್ನನ್ನು ಬಂಧಿಸಲು ಈ ಹಿಂದೆ ರಾಜಸ್ಥಾನ ಮತ್ತು ಹರಿಯಾಣ ಪೊಲೀಸರು ಮನೇಸರ್ ಗ್ರಾಮದ ಅವರ ಮನೆ ಮತ್ತು ಇತರ ಸಂಭಾವ್ಯ ಅಡಗುತಾಣಗಳ ಮೇಲೆ ಹಲವಾರು ದಾಳಿಗಳನ್ನು ನಡೆಸಿದ್ದರು. ಆದಾಗ್ಯೂ, ಅವರು ಈ ಸ್ಥಳಗಳಲ್ಲಿ ಎಂದಿಗೂ ಕಂಡುಬಂದಿಲ್ಲ. ಎರಡು ಕೊಲೆಗಳಲ್ಲಿ ಅವರ ಹೆಸರು ಕಾಣಿಸಿಕೊಂಡಾಗ ಫೆಬ್ರವರಿಯಿಂದ ಅವರು ಭೂಗತರಾಗಿದ್ದರು. ಆತನನ್ನು ಹಿಡಿಯಲು ನಮ್ಮ ತಂಡಗಳು ಇನ್ನೂ ಪ್ರಯತ್ನ ನಡೆಸುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ಹರಿಯಾಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೋನು ವಿರುದ್ಧ ಪೊಲೀಸ್ ನಿಷ್ಕ್ರಿಯತೆ ಮತ್ತು ಬಜರಂಗದಳದ ಸದಸ್ಯರು ಪೋಸ್ಟ್ ಮಾಡಿದ ಬೆದರಿಕೆ ವೀಡಿಯೊಗಳ ಬಗ್ಗೆ ನುಹ್ನಲ್ಲಿ ಗ್ರಾಮಸ್ಥರಲ್ಲಿ ಕೋಪವಿದೆ ಎಂದು ಮತ್ತೋರ್ವ ಗ್ರಾಮಸ್ಥ ಹೇಳಿದ್ದಾರೆ. ಜುಲೈ 31 ರಂದು ಯಾತ್ರೆಯ ದಿನದಂದು ಸುಮಾರು 300 ಗ್ರಾಮಸ್ಥರು ನಲ್ಹಾರ್ ಮಹಾದೇವ ಮಂದಿರದ ಸುತ್ತಲಿನ ಬೆಟ್ಟಗಳ ಮೇಲೆ ಬಾಟಲಿಗಳು ಮತ್ತು ಕಲ್ಲುಗಳ ಪೆಟ್ಟಿಗೆಗಳೊಂದಿಗೆ ಜಮಾಯಿಸಿದ್ದರು.
ಸೋಮವಾರ ನುಹ್ನ ಹೆಚ್ಚುವರಿ ಉಸ್ತುವಾರಿ ವಹಿಸಲಾದ ಭಿವಾನಿ ಪೊಲೀಸ್ ಮುಖ್ಯಸ್ಥ ನರೇಂದ್ರ ಬಿಜ್ರಾನಿಯಾ, ಕಳೆದ ವಾರ ನುಹ್ ಪೊಲೀಸರಿಗೆ ನೀಡಿದ ಗುಪ್ತಚರ ವರದಿಯು ಕೆಲವು ಅಶಾಂತಿಯ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಹೇಳಿದರು. “ಪೊಲೀಸರು ಸಿದ್ಧರಾಗಿದ್ದರು. ಆದರೆ ಈ ರೀತಿಯ ಹಿಂಸಾಚಾರವನ್ನು ನಿರೀಕ್ಷಿಸಿರಲಿಲ್ಲ. ಹಿಂಸಾಚಾರದ ಹಿಂದಿರುವವರು ಎಂದು ಹೇಳಿಕೊಳ್ಳುವವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ವಿವಿಧ ಪ್ರದೇಶಗಳ ಶಂಕಿತರನ್ನು ಬಂಧಿಸಲು ತಂಡಗಳು ದಾಳಿ ನಡೆಸುತ್ತಿವೆ. ದೇವಾಲಯದ ರಸ್ತೆಯ ಉದ್ದಕ್ಕೂ ಇರುವ ಮನೆಗಳ ಮೇಲೆ ಭಾರೀ ಪ್ರಮಾಣದಲ್ಲಿ ಕಲ್ಲುಗಳು ಮತ್ತು ಇತರ ಸ್ಫೋಟಕಗಳನ್ನು ಸಂಗ್ರಹಿಸಲಾಗಿತ್ತು. ಈವರೆಗೆ ಬಂಧಿತರಾಗಿರುವವರು ಬಹಿರಂಗಪಡಿಸಿರುವ ಮಾಹಿತಿಯನ್ನು ದೃಢೀಕರಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ,” ಎಂದು ಹೇಳಿದರು.