ಬೆಂಗಳೂರು : ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಇಂಟರ್ ಮೀಡಿಯೆಟ್, ಲೈಟ್ ಆಂಡ್ ಮೀಡಿಯಂ ಕಮರ್ಷಿಯಲ್ ವೆಹಿಕಲ್ (ಐಎಲ್ಎಂಸಿವಿ) ವಿಭಾಗದಲ್ಲಿ 15 ಲಕ್ಷ ವಾಹನಗಳನ್ನು ಮಾರಾಟ ಮಾಡಿರುವ ಮಹತ್ವದ ಸಾಧನೆ ಮಾಡಿರುವುದಾಗಿ ಇಂದು ಘೋಷಿಸಿದೆ. ಈ ಮೂಲಕ ದೇಶದಲ್ಲಿ ಈ ಸಾಧನೆ ಮಾಡಿರುವ ಏಕೈಕ ಟ್ರಕ್ ತಯಾರಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಟಾಟಾ ಮೋಟಾರ್ಸ್ ಪಾತ್ರವಾಗಿದೆ.
ಈ ಮಹತ್ವದ ಸಾಧನೆಯ ನೆನಪಿಗಾಗಿ ಟಾಟಾ ಮೋಟಾರ್ಸ್ ಸಂಸ್ಥೆಯು ಟಾಟಾ ಎಸ್ಎಫ್ಸಿ 407 ಗೋಲ್ಡ್, ಟಾಟಾ ಎಲ್ಪಿಟಿ, ಟಾಟಾ ಎಸ್ಎಫ್ಸಿ 709 ಜಿ, ಟಾಟಾ ಎಲ್ಪಿಟಿ 1109 ಜಿ, ಟಾಟಾ ಎಲ್ಪಿಕೆ 1112 ಮತ್ತು ಟಾಟಾ ಎಲ್ಪಿಕೆ 1416 ಶ್ರೇಣಿಯ ಟ್ರಕ್ಗಳು ಮತ್ತು ಟಿಪ್ಪರ್ ಗಳ ಹೊಸ ವೇರಿಯೆಂಟ್ ಗಳನ್ನು ಬಿಡುಗಡೆ ಮಾಡಿದೆ. ಜೊತಗೆ ಕಂಪನಿಯು ಮೊದಲ ಬಾರಿಗೆ ಟ್ರಕ್ ಖರೀದಿಸುವ ಗ್ರಾಹಕರಿಗಾಗಿ ಎಲ್ಲಾ ಐಎಲ್ಎಂಸಿವಿ ಟ್ರಕ್ ಗಳ ಮೇಲೆ ಆಕರ್ಷಕ ಹಣಕಾಸು ಸೌಲಭ್ಯ ಯೋಜನೆ ಹಾಗೂ 6 ವರ್ಷಗಳ ವಿಸ್ತೃತ ವಾರಂಟಿ ಆಫರ್ ಅನ್ನು ಒದಗಿಸುತ್ತಿದೆ.
ಐಎಲ್ಎಂಸಿವಿ ವಿಭಾಗದಲ್ಲಿ 4 ರಿಂದ 19 ಟನ್ಗಳವರೆಗಿನ ಒಟ್ಟು ವಾಹನ ತೂಕವನ್ನು ಹೊಂದಿರುವ ಟ್ರಕ್ಗಳಿವೆ. ಈ ಟ್ರಕ್ ಗಳು ಕೃಷಿ, ಇ-ಕಾಮರ್ಸ್, ನಿರ್ಮಾಣ ಕ್ಷೇತ್ರ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ. ಈ ವಿಭಾಗದಲ್ಲಿ ವ್ಯಾಪಕ ಶ್ರೇಣಿಯ ಉನ್ನತ ಮತ್ತು ಇಂಧನ ದಕ್ಷ ಉತ್ಪನ್ನಗಳನ್ನು ಒದಗಿಸುವ ಮೂಲಕ ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಕಡಿಮೆ ನಿರ್ವಹಣಾ ವೆಚ್ಚ ಮತ್ತು ಹೆಚ್ಚು ಸಮಯ ಕಾರ್ಯ ನಿರ್ವಹಿಸುವ ಪ್ರಯೋಜನವನ್ನು ಒದಗಿಸುತ್ತದೆ. ಇದರಿಂದ ಹೆಚ್ಚು ಲಾಭ ಉಂಟಾಗುವಂತೆ ಮಾಡುತ್ತದೆ.
ಈ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ನ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಶ್ರೀ. ರಾಜೇಶ್ ಕೌಲ್ ಅವರು, “15 ಲಕ್ಷ ಮಾರಾಟದ ಮೈಲಿಗಲ್ಲು ತಲುಪಿರುವುದು ನಮಗೆ ಬಹಳ ಹೆಮ್ಮೆ ತಂದಿದೆ. ಇದು ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ನಿಷ್ಠೆಗೆ ಸಾಕ್ಷಿಯಾಗಿದೆ. ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ಉಂಟು ಮಾಡುವ ಹೊಸ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಈ ಸಾಧನೆಯು ಮತ್ತಷ್ಟು ಗಟ್ಟಿಗೊಳಿಸಿದೆ. ನಾವು ಇದೀಗ ಬಿಡುಗಡೆ ಮಾಡಿರುವ ನಮ್ಮ ಹೊಸ ವೇರಿಯೆಂಟ್ ಗಳು ಮತ್ತು ವಿಸ್ತೃತ ವಾರಂಟಿ ಆಫರ್ ಅನ್ನು ಗ್ರಾಹಕರಿಗೆ ಹೆಚ್ಚು ಲಾಭ ಒದಗಿಸಲು ಮತ್ತು ದೀರ್ಘಾವಧಿಯ ಮಾನಸಿಕ ಶಾಂತಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಗ್ರಾಹಕರ ನಿರೀಕ್ಷೆಗಳಿಗಿಂತ ನಾವು ಯಾವತ್ತೂ ಮುಂದಿರುತ್ತೇವೆ ಎನ್ನುವುದನ್ನು ಸಾರಿದ್ದೇವೆ. ನಾವು ಮುಂದೆಯೂ ಗ್ರಾಹಕ- ಸ್ನೇಹಿ ಸೇವೆ ಒದಗಿಸುವ ಕಡೆಗೆ ಗಮನ ಕೇಂದ್ರೀಕರಿಸುತ್ತೇವೆ, ಅವರು ದೀರ್ಘಾವಧಿಯ ಬೆಳವಣಿಗೆ ಮತ್ತು ಯಶಸ್ಸು ಸಾಧಿಸುವಲ್ಲಿ ಅವರಿಗೆ ಅತ್ಯುತ್ತಮ ಪಾಲುದಾರರಾಗಿ ಜೊತೆ ಇರುತ್ತೇವೆ” ಎಂದು ಹೇಳಿದರು.
ಸಮಗ್ರ ಸಾರಿಗೆ ಉತ್ಪನ್ನಗಳ ಪೂರೈಕೆದಾರರಾಗಿರುವ ಟಾಟಾ ಮೋಟಾರ್ಸ್ ನ ವಾಣಿಜ್ಯ ವಾಹನಗಳು ಅತ್ಯಾಧುನಿಕ ಫೀಚರ್ ಗಳು, ಸಮರ್ಥ ಪವರ್ ಟ್ರೇನ್ಗಳು ಮತ್ತು ಅತ್ಯುತ್ತಮ ಪ್ರಯೋಜನಗಳನ್ನು ಹೊಂದಿವೆ. ಐಎಲ್ಎಂಸಿವಿ ಪೋರ್ಟ್ಫೋಲಿಯೋದಲ್ಲಿ ಎಲ್ ಪಿ ಟಿ, ಎಸ್ ಎಫ್ ಸಿ, ಸಿಗ್ನಾ ಮತ್ತು ಅಲ್ಟ್ರಾ ಶ್ರೇಣಿಯಂತಹ ಬಹು ಕ್ಯಾಬಿನ್ ಆಯ್ಕೆಗಳು ಲಭ್ಯವಿದೆ. ಜೊತೆಗೆ ವಿವಿಧ ರೀತಿಯ ಡೆಕ್ ಗಾತ್ರ ಮತ್ತು ದೇಹದ ಸ್ಟೈಲ್ ಅನ್ನು ಹೊಂದಿವೆ. ಟಾಟಾ ಮೋಟಾರ್ಸ್ ನ ಉತ್ಪನ್ನಗಳು ಸಂಪೂರ್ಣಸೇವಾ 2.0 ಯೋಜನೆಯ ಬೆಂಬಲ ಪಡೆಯಲಿದ್ದು, ಈ ಯೋಜನೆಯಲ್ಲಿ ಬ್ರೇಕ್ ಡೌನ್ ಅಸಿಸ್ಟೆನ್ಸ್, ವಾರ್ಷಿಕ ನಿರ್ವಹಣಾ ಒಪ್ಪಂದಗಳು (ಎಎಂಸಿ) ಮತ್ತು ನಿಜವಾದ ಬಿಡಿಭಾಗಗಳ ಲಭ್ಯತೆ ಸೇರಿದಂತೆ ವಾಹನದ ಸಮಗ್ರ ನಿರ್ವಹಣೆ ಮಾಡಬಹುದಾಗಿದೆ. ಜೊತೆಗೆ ಟಾಟಾ ಮೋಟಾರ್ಸ್ ವಾಹನಗಳು ಕನೆಕ್ಟೆಡ್ ವೆಹಿಕಲ್ ಪ್ಲಾಟ್ ಫಾರ್ಮ್ ಆದ ಫ್ಲೀಟ್ ಎಡ್ಜ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಅದು ವಾಹನವು ಹೆಚ್ಚು ಸಮಯ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ನಿರ್ವಹಣಾ ವೆಚ್ಚವನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ದೇಶದಾದ್ಯಂತ ಟಾಟಾ ಮೋಟಾರ್ಸ್ ತನ್ನ ವಾಹನಗಳು ಹೆಚ್ಚು ಸಮಯ ಕಾರ್ಯನಿರ್ವಹಿಸುವಂತೆ ಮಾಡಲು 2500ಕ್ಕೂ ಹೆಚ್ಚು ಮಾರಾಟ ಮತ್ತು ಸರ್ವೀಸ್ ಟಚ್ ಪಾಯಿಂಟ್ ಗಳನ್ನು ಹೊಂದಿದೆ.