ಮೈಸೂರು: ಅಮೃತ ವಿಶ್ವವಿದ್ಯಾಪೀಠಂ, ಮೈಸೂರು ಕ್ಯಾಂಪಸ್ನ “14ನೇ ಪದವಿ ಪ್ರದಾನ” ಸಮಾರಂಭವು ಇದೇ ಭಾನುವಾರ 6ನೇ ಅಕ್ಟೋಬರ್ 2024ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಮೈಸೂರಿನ ಬೋಗಾದಿಯ ಎರಡನೇ ಹಂತದಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನ ಆವರಣದಲ್ಲಿ ಆಯೋಜಿಸಲಾಗಿದೆ.
ಎಫ್ಎಫ್ಎಐ ಲಾಜಿಸ್ಟಿಕ್ಸ್ ಇಂಡಿಯಾ ಪ್ರೆöÊ. ಲಿ. ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಓ ಶ್ರೀ ಕಾರ್ತಿ ಭಾಸ್ಕರ್ ಅವರು ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ನೂತನ ಯುವ ಪದವೀಧರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಮೃತ ವಿಶ್ವವಿದ್ಯಾಪೀಠಂನ ಶೈಕ್ಷಣಿಕ ವಿಭಾಗದ ಡೀನ್ ಹಾಗೂ ಕುಲಪತಿಗಳ ಸಲಹಾ ಮಂಡಳಿಯ ಸದಸ್ಯರಾದ ಡಾ. ಸಸಾಂಗನ್ ರಾಮನಾಥನ್ ಅವರು ಸಮಾರಂಭದ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಾತಾ ಅಮೃತಾನಂದಮಯಿ ಮಠದ ಪ್ರಧಾನ ಕಾರ್ಯದರ್ಶಿಗಳಾಗಿರುವ ಸಂಪೂಜ್ಯ ಸ್ವಾಮಿ ಪೂರ್ಣಾಮೃತಾನಂದಪುರಿ ಅವರು ಆರ್ಶೀವಚನ ನೀಡಲಿದ್ದಾರೆ.
ಪಿಹೆಚ್ಡಿ, ಸ್ನಾತಕೋತ್ತರ ಪದವಿ ಹಾಗೂ ಪದವಿ ಕಾರ್ಯಕ್ರಮಗಳ 601 ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಸ್ವೀಕರಿಸಿಲಿದ್ದಾರೆ. ಒಟ್ಟು 66 ವಿದ್ಯಾರ್ಥಿಗಳು ರ್ಯಾಂಕ್ ಹಾಗೂ ಪದಕಗಳನ್ನು ಸ್ವೀಕರಿಸಲಿದ್ದಾರೆ.