ಬೆಂಗಳೂರು : ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನೆರವಾಗುವ ದೇಶದ ಅತಿದೊಡ್ಡ ಲಾಭರಹಿತ ಸಂಸ್ಥೆಯಾದ ಎಸ್ಎಂಇ ಫೋರಂ ಇಂಡಿಯಾ (ಐಎಸ್ ಎಫ್), ಅಮೆಜಾನ್ ನಂತಹ ಇ -ಕಾಮರ್ಸ್ನೊಂದಿಗೆ ಕೆಲಸ ಮಾಡಲು “ಎಂಟು ವಾರಗಳಲ್ಲಿ ರಫ್ತು ಪ್ರಾರಂಭಿಸಿ” ಎಂಬ ವಿನೂತನ ಕಾರ್ಯಕ್ರಮವನ್ನು ಇಂದು ಪ್ರಾರಂಭಿಸಿದೆ. ಮೇಕ್ ಇನ್ ಇಂಡಿಯಾ ಉತ್ಪನ್ನಗಳನ್ನು ಉತ್ತೇಜಿಸಲು ಐಎಸ್ಎಫ್ನ ಪ್ರಮುಖ ಪರಿಕಲ್ಪನೆಯಾದ ‘ಇಂಡಿಯಾ ಎಕ್ಸ್ ಪೋರ್ಟ್ಸ್’ ಅಡಿಯಲ್ಲಿ ಪ್ರಾರಂಭಿಸಲಾದ ಈ ಕಾರ್ಯಕ್ರಮವನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯ ಹಮ್ಮಿಕೊಂಡಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಬಿಜಿನೆಸ್ ಬಿಯಾಂಡ್ ಬಾರ್ಡರ್ಸ್ 2024 ಸಮ್ಮೇಳನದಲ್ಲಿ ಎಂಎಸ್ಎಂಇಗಳು ಮತ್ತು ಉದ್ಯಮದ ಪ್ರಮುಖರ ಉಪಸ್ಥಿತಿಯಲ್ಲಿ ಈ ಯೋಜನೆಯನ್ನು ಘೋಷಿಸಿದರು.
ಭಾರತೀಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಜಾಗತಿಕ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಒದಗಿಸುವ ಸಲುವಾಗಿ ಈ “ಎಂಟು ವಾರಗಳಲ್ಲಿ ರಫ್ತು ಪ್ರಾರಂಭಿಸಿ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ಅವಕಾಶಗಳನ್ನು ಅನ್ವೇಷಿಸಲು ಮತ್ತು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಬಯಸುವ ಎಂಎಸ್ಎಂಇಗಳಿಗೆ ಈ ಮೂಲಕ ಸಮಗ್ರ ಮಾರ್ಗದರ್ಶನ, ಸಂಪನ್ಮೂಲಗಳು ಮತ್ತು ನೆಟ್ವರ್ಕಿಂಗ್ ಅವಕಾಶಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಎಂಎಸ್ಎಂಇಗಳಿಗೆ ಜಾಗತಿಕ ವ್ಯಾಪಾರದ ಅವಕಾಶಗಳನ್ನು ಉತ್ತೇಜಿಸುಲ ಐಎಸ್ಎಫ್ ನ ಬದ್ಧತೆಗೆ ಈ ಯೋಜನೆ ಸಾಕ್ಷಿಯಾಗಿದೆ. ಜೊತೆಗೆ ಯೋಜನೆಯು ಆರ್ಥಿಕತೆಯನ್ನು ಉತ್ತೇಜಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಉದ್ಯಮಗಳನ್ನು ಬೆಳೆಸುವ ಭಾರತ ಸರ್ಕಾರದ ಉದ್ದೇಶದ ಜೊತೆಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದ ಗೌರವಾನ್ವಿತ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, “ವಿಕಸಿತ ಭಾರತ 2047 ರ ದೃಷ್ಟಿಗೆ ಕೊಡುಗೆ ನೀಡುವಲ್ಲಿ ಎಂಎಸ್ಎಂಇಗಳು ಬಹಳ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತವಾಗುವತ್ತ ಪಯಣ ಎಂಎಸ್ಎಂಇಗಳ ಯಶಸ್ಸು ನಮ್ಮ ರಾಷ್ಟ್ರಕ್ಕೆ ಬಹಳ ಅತ್ಯಗತ್ಯ. ಇಂದಿನ ಹೆಚ್ಚು ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯ ಹೊಂದುವುದು ಮತ್ತು ಅಭಿವೃದ್ಧಿ ಸಾಧಿಸುವುದು ಮುಖ್ಯವಾಗಿದೆ ಮತ್ತು ನಮ್ಮ ಉತ್ಪನ್ನಗಳು ಅಂತರರಾಷ್ಟ್ರೀಯ ರಫ್ತು ಗುಣಮಟ್ಟದ ಮಾನದಂಡಗಳಿಗೆ ಹೊಂದಿಕೆಯಾಗುವುದು ಅವಶ್ಯವಾಗಿದೆ. ಇಂಡಿಯಾ ಎಸ್ಎಂಇ ಫೋರಮ್ನಂತಹ ವೇದಿಕೆಗಳ ಮೂಲಕ ಅದರ ಪಾಲುದಾರರಾದ ಅಮೆಜಾನ್, ಯುಪಿಎಸ್ ಇತ್ಯಾದಿಗಳ ಸಹಯೋಗದಲ್ಲಿ ಇಂದು ಪ್ರಾರಂಭಿಸಲಾದ ಹೊಸ ಯೋಜನೆ ಮೂಲಕ ನಮ್ಮ ಉದ್ಯಮಿಗಳು ಜಾಗತಿಕ ಮಾರುಕಟ್ಟೆಗಳ ಸಂಪರ್ಕ ಪಡೆಯುತ್ತಾರೆ. ಜೊತೆಗೆ ಬೆಳವಣಿಗೆ ಮತ್ತು ಸಹಯೋಗಕ್ಕೆ ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದಾಗಿದೆ. ಈ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳೋಣ ಮತ್ತು ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಸಾಧನೆಗೆ ಶ್ರಮಿಸುವುದನ್ನು ಮುಂದುವರಿಸೋಣ”ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಇಂಡಿಯಾ ಎಂಎಸ್ಎಂಇ ಫಾರಂ ನ ಅಧ್ಯಕ್ಷ ಶ್ರೀ ವಿನೋದ್ ಕುಮಾರ್ ಅವರು, “ಎಂಟು ವಾರಗಳಲ್ಲಿ ರಫ್ತು ಪ್ರಾರಂಭಿಸಿ” ಎನ್ನುವ ನವೀನ ಕಾರ್ಯಕ್ರಮವನ್ನು ಭಾರತೀಯ ಎಂಎಸ್ಎಂಇ ಉದ್ಯಮಗಳು ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಮತ್ತು ಕೇವಲ ಎಂಟು ವಾರಗಳಲ್ಲಿ ರಫ್ತುಗಳನ್ನು ಹೆಚ್ಚಿಸಲು ಸಕ್ರಿಯಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆ ಅವಕಾಶಗಳನ್ನು ಅನ್ವೇಷಿಸಲು ಮತ್ತು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಎಂಎಸ್ಎಂಇ ಗಳಿಗೆ ಇದು ಸಮಗ್ರ ಮಾರ್ಗದರ್ಶನ, ಸಂಪನ್ಮೂಲಗಳು ಮತ್ತು ನೆಟ್ವರ್ಕಿಂಗ್ ಅವಕಾಶಗಳನ್ನು ಉಚಿತವಾಗಿ ನೀಡುತ್ತದೆ. ಈ ಉಪಕ್ರಮವು ಎಂಎಸ್ಎಂಇಗಳಿಗೆ ಜಾಗತಿಕ ವ್ಯಾಪಾರದ ಅವಕಾಶಗಳನ್ನು ಉತ್ತೇಜಿಸಲು ಐಎಸ್ಎಫ್ ನ ಬದ್ಧತೆಯನ್ನು ತೋರಿಸುತ್ತದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಮೂಲಕ ಉದ್ಯಮಗಳನ್ನು ಸಬಲೀಕರಣಗೊಳಿಸುವ ಭಾರತ ಸರ್ಕಾರದ ವಿಶಾಲ ದೃಷ್ಟಿಗೆ ಹೊಂದಿಕೆಯಾಗುತ್ತದೆ’ ಎಂದರು.
ಇಂಡಿಯಾ ಎಸ್ಎಂಇ ಫೋರಮ್ ನ ಅಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ, “ಇ-ಕಾಮರ್ಸ್ ದೇಶದಲ್ಲಿ ಗೇಮ್ ಚೇಂಜರ್ ರೀತಿ ಆಗಿದೆ. ಸಾಂಪ್ರದಾಯಿಕ ವ್ಯಾಪಾರ ಅಡೆತಡೆಗಳನ್ನು ಮುರಿದು ಸಣ್ಣ ಉದ್ಯಮಗಳು ಸಹ ಅಂತರಾಷ್ಟ್ರೀಯ ಗ್ರಾಹಕರನ್ನು ಸುಲಭವಾಗಿ ತಲುಪಲು ಇದು ಅನುವು ಮಾಡಿಕೊಡುತ್ತದೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಳ್ಳುವ ಮೂಲಕ, ಎಂಎಸ್ಎಂಇಗಳು ಸಾಂಪ್ರದಾಯಿಕ ರಫ್ತಿನ ಹಲವು ಲಾಜಿಸ್ಟಿಕಲ್ ಸವಾಲುಗಳನ್ನು ಎದುರಿಸಬಹುದು. ಜಾಗತಿಕ ವ್ಯಾಪಾರವನ್ನು ಹಿಂದೆಂದಿಗಿಂತಲು ಹೆಚ್ಚಾಗಿ ಪ್ರವೇಶಿಸಬಹುದು.
‘ಎಂಟು ವಾರಗಳಲ್ಲಿ ರಫ್ತು ಪ್ರಾರಂಭಿಸಿ’ ಉಪಕ್ರಮವು ಭಾರತೀಯ ಎಂಎಸ್ಎಂಇಗಳನ್ನು ಜಾಗತಿಕ ವ್ಯಾಪಾರದ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸುವ ಒಂದು ಆಂದೋಲನವಾಗಿದೆ. ಅಗತ್ಯ ಪರಿಕರಗಳು, ಜ್ಞಾನ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಪ್ರವೇಶದೊಂದಿಗೆ ಅವುಗಳನ್ನು ಸಜ್ಜುಗೊಳಿಸುವ ಮೂಲಕ, ನಾವು ಈ ವ್ಯವಹಾರಗಳನ್ನು ಸ್ವಾವಲಂಬಿಯಾಗಲು, ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಭಾರತದ ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಲು ನೆರವಾಗುತ್ತದೆ. ಸರಿಯಾದ ಬೆಂಬಲದೊಂದಿಗೆ, ಭಾರತೀಯ ಎಂಎಸ್ಎಂಇ ಗಳು ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯವನ್ನು ಹೊಂದಿವೆ’ ಎಂದರು.
ಈ ಸಮಾರಂಭದಲ್ಲಿ ವಿದೇಶಿ ವ್ಯಾಪಾರದ ಜಂಟಿ ಮಹಾನಿರ್ದೇಶಕರಾದ ಡೊನಾ ಘೋಷ್ ಮತ್ತು ಅಮೆಜಾನ್ ಇಂಡಿಯಾದ ಜಾಗತಿಕ ವ್ಯಾಪಾರದ ಮುಖ್ಯಸ್ಥ ಭೂಪೇನ್ ವಾಕಂಕರ್ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಯುಪಿಎಸ್ನ ಬ್ರಿಟ್ಟೋ ಪ್ರೇಮಕುಮಾರ್, ಯೆಸ್ ಬ್ಯಾಂಕ್ನ ಶ್ರೀ ಗಣೇಶ್ ಯೋಗೇಶ್ ಪೈ ಸೇರಿದಂತೆ ಉದ್ಯಮದ ಪ್ರಮುಖರು , ರೇಮಂಡ್ನಲ್ಲಿ ಎಕ್ಸಿಮ್ ಮತ್ತು ಲಾಜಿಸ್ಟಿಕ್ಸ್ ಮುಖ್ಯಸ್ಥ ಸಂಪತ್ ರಾಘವನ್. 300 ಕ್ಕೂ ಹೆಚ್ಚು ಎಂಎಸ್ ಎಂಇಗಳು ಭಾಗವಹಿಸಿದ್ದವು.
ಬಿಸಿನೆಸ್ ಬಿಯಾಂಡ್ ಬಾರ್ಡರ್ಸ್ 2024 ಸಮ್ಮೇಳನ ಆಕರ್ಷಕವಾದ ಕಾರ್ಯಾಗಾರ , ಬಿ – ಟು – ಬಿ ದೇಶಗಳ ಸಭೆ ಆಯೋಜಿಸಲಾಗಿತ್ತು. ಕಾಮರ್ಸ್ ರಫ್ತುಗಳನ್ನು ವೇಗಗೊಳಿಸುವುದು ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು.