ಒಂದು ದಿನ ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ತಲೆ ಅನಿಯಂತ್ರಿತವಾಗಿ ಸುತ್ತಿ, ಇಡೀ ಜಗತ್ತೇ ಗಿರಗಿರನೇ ತಿರುಗುತ್ತಿರುವಂತೆ ಭಾಸವಾಗುವುದನ್ನು ಊಹಿಸಿಕೊಳ್ಳಿ. ಕೆಲವರಿಗೆ ಈ ಭಾವವು ಕೇವಲ ಒಂದು ಕ್ಷಣದ ಅನುಭವವಷ್ಟೇ-ಅದು ಅವರ ನಿತ್ಯಜೀವನದ ಭಾಗವಾಗಿರುತ್ತದೆ.ಸಮತೋಲನದ ದೈಹಿಕ ಸಂವೇದನೆಯ ಮೇಲೆ ಪ್ರಭಾವ ಬೀರುವ ಪರಿಸ್ಥಿತಿಯಾದ ವರ್ಟಿಗೊ, ಯಾರಿಗಾದರೂ ಬರಬಹುದು, ಆದರೂ ಈ ಪರಿಸ್ಥಿತಿ ಕುರಿತಾದ ಜಾಗೃತಿ ಇನ್ನೂ ಸೀಮಿತವಾಗಿಯೇ ಇದೆ.
ಜಾಗತಿಕವಾಗಿ, ವರ್ಟಿಗೊ 10 ಜನರಲ್ಲಿ ಒಬ್ಬರನ್ನು(1) ಅವರ ಜೀವನದ ಯಾವುದೋ ಒಂದು ಹಂತದಲ್ಲಿ ಬಾಧಿಸುತ್ತಿದ್ದು, ಭಾರತದಲ್ಲಿ ಸರಿಸುಮಾರು 70 ದಶಲಕ್ಷ ಮಂದಿ ಈ ಪರಿಸ್ಥಿತಿಯ ಪ್ರಭಾವಕ್ಕೊಳಗಾಗಿದ್ದಾರೆ. IQVIA ದ ಸಹಯೋಗದೊಂದಿಗೆ ಇತ್ತೀಚೆಗೆ ಅಬಾಟ್ ನಡೆಸಿದ ಸರ್ವೇಕ್ಷಣೆಯೊಂದು, ಭಾರತದಲ್ಲಿ ಅನೇಕ ಮಂದಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ವರ್ಟಿಗೋದೊಂದಿಗೆ ಜೀವಿಸುತ್ತಿದ್ದು, ತಿಂಗಳಿಗೆ ಒಂದು ಅಥವಾ ಎರಡು ಬಾರಿ ಇದನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದೆ. ಇದು ಪುನರಾವರ್ತನೆಯಾಗುತ್ತಿದ್ದರೂ, ಅನೇಕ ವ್ಯಕ್ತಿಗಳು ತಮ್ಮ ರೋಗಲಕ್ಷಣಗಳನ್ನು ತಳ್ಳಿಹಾಕುತ್ತಿದ್ದಾರೆ ಅಥವಾ ತೀರಾ ಅತ್ಯಾವಶ್ಯಕವಾದಾಗ ಮಾತ್ರ ವೈದ್ಯಕೀಯ ನೆರವು ಪಡೆದುಕೊಳ್ಳುತ್ತಿದ್ದಾರೆ.
ಅಬಾಟ್ ಇಂಡಿಯಾದ ವೈದ್ಯಕೀಯ ನಿರ್ದೇಶಕ ಡಾ. ಜಿಜೋ ಕರಣ್ಕುಮಾರ್, “ಸರಿಯಾದ ಬೆಂಬಲ ಪಡೆದುಕೊಳ್ಳಲು ಅಗತ್ಯವಾದ ಅಗತ್ಯವಾದ ಜ್ಞಾನ ಮತ್ತು ಸಾಧನದೊಂದಿಗೆ ವರ್ಟಿಗೋದ ಬಗ್ಗೆ ಜಾಗೃತಿ ಹೆಚ್ಚಿಸುವುದು ಬಹಳ ಮುಖ್ಯ. ಅಬಾಟ್ ಮತ್ತು IQVIA ನಡೆಸಿದ ಸರ್ವೇಕ್ಷಣೆಯ ಪ್ರಕಾರ, ಸುತ್ತುತ್ತಿರುವ ಭಾವದ ಜೊತೆಗೆ ವರ್ಟಿಗೋ ಇರುವ ರೋಗಿಗಳು ಅನುಭವಿಸುವ ಸಾಮಾನ್ಯ ಲಕ್ಷಣಗಳು, ತಲೆನೋವು(54%), ತಲೆ ಭಾರವಾಗುವಿಕೆ(41%) ಮತ್ತು ಕುತ್ತಿಗೆ ನೋವು(28%) ಮುಂತಾದವನ್ನು ಒಳಗೊಂಡಿದೆ. ಇದು ಅವರುಗಳ ವೈಯಕ್ತೀಕ ಜೀವನದಲ್ಲಿ ಸವಾಲುಗಳನ್ನು ಏರ್ಪಡಿಸಿ, ಅವರು ಅತಿಮುಖ್ಯವಾದ ಸಂದರ್ಭಗಳನ್ನು ತಪ್ಪಿಸಿಕೊಳ್ಳುವಂತೆ ಅಥವಾ ರದ್ದುಗೊಳಿಸುವಂತೆ ಮಾಡುತ್ತದೆ ಮತ್ತು ಅವರು ತಮ್ಮ ಕುಟುಂಬದವರ ಜೊತೆಗೆ ಕಳೆಯುವ ಸಮಯವನ್ನೂ ಕಡಿಮೆ ಮಾಡುತ್ತದೆ. ಆರಂಭಿಕ ರೋಗಪತ್ತೆ ಮತ್ತು ಸರಿಯಾದ ಚಿಕಿತ್ಸಾ ಬೆಂಬಲವನ್ನು ಪ್ರೋತ್ಸಾಹಿಸುವ ಮೂಲಕ, ರೋಗಿಗಳು ವರ್ಟಿಗೋದ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ, ಸಮತೋಲನದ ಹಾಗೂ ಆರೋಗ್ಯಕರ ಜೀವನ ಸಾಧಿಸಲು ನೆರವಾಗುತ್ತದೆ.” ಎಂದು ಹೇಳುತ್ತಾರೆ.
ವರ್ಟಿಗೋದ ತಲೆತಿರುಗುವಿಕೆಯನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳುವುದು
ತಲೆತಿರುಗುವುದು, ತಲೆ ಹಗುರಾಗುವಿಕೆ, ಅಸ್ಥಿರತೆ, ಅಸಮತೋಲನದ ಭಾವ, ದುರ್ಬಲ ಅಥವಾ ತಲೆಸುತ್ತುತ್ತಿರುವಂತಹ ಬಂದು ಹೋಗುವಂತಹ ಭಾವವಾಗಿದೆ. ಇದರ ಜೊತೆಗೆ, ವೆರ್ಟಿಗೋ ಅನುಭವಿಸುತ್ತಿರುವಾಗ, ನಿಮ್ಮ ಸುತ್ತಲಿನ ಪರಿಸರವೂ ತಿರುಗುತ್ತಿರುವಂತಹ ಭಾವ ಏರ್ಪಟ್ಟಾಗ ನಿಮಗೆ ಸಮತೋಲನ ತಪ್ಪುತ್ತಿದೆ ಎಂದು ಭಾಸವಾಗುತ್ತದೆ. ಬಹಳ ಮಂದಿ ಇದನ್ನು ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು, ರಕ್ತದೊತ್ತಡ ತಗ್ಗಿರುವುದು, ನಿರ್ಜಲೀಕರಣ ಅಥವಾ ಒತ್ತಡದ ಲಕ್ಷಣವೆಂದು ತಿಳಿದುಕೊಂಡು ಬಿಡುತ್ತಾರೆ. ಅಬಾಟ್ ಮತ್ತು IQVIA ನಡೆಸಿದ ಸರ್ವೇಕ್ಷಣೆಯು, ವರ್ಟಿಗೋ ಇರುವ ವ್ಯಕ್ತಿಗಳ ಪೈಕಿ 44% ಮಂದಿ, ಕನಿಷ್ಟ ವಾರದಲ್ಲಿ ಒಂದು ಬಾರಿಯಾದರೂ ಸುತ್ತಲಿನ ವಸ್ತುಗಳ ಸುತ್ತುವಿಕೆಯ ಅನುಭವದೊಂದಿಗೆ ವರ್ಟಿಗೋ ಅನುಭವಿಸುತ್ತಾರೆ ಎಂಬುದನ್ನು ಎತ್ತಿತೋರಿಸಿದೆ. ಈ ಚಕ್ಕರ್ ನ ತೀವ್ರತೆ ಅಥವಾ ವರ್ಟಿಗೋದ ಸುತ್ತುವಿಕೆಯು ಭಿನ್ನ ಭಿನ್ನವಾಗಿದ್ದರೂ, ಅದನ್ನು ತಳ್ಳಿಹಾಕದಿರುವುದು ಬಹಳ ಮುಖ್ಯ. ಇದನ್ನು ಆರಂಭದಲ್ಲೇ ಪರಿಹರಿಸಿಕೊಳ್ಳುವುದರಿಂದ, ಸಮಯಕ್ಕೆ ಸರಿಯಾದ ರೋಗಪತ್ತೆ ಮತ್ತು ಚಿಕಿತ್ಸೆ ಸಾಧ್ಯವಾಗಿ ಮುಂದೆ ಬರುವ ಸಮಸ್ಯೆಗಳನ್ನು ತಪ್ಪಿಸಲು ನೆರವಾಗುತ್ತದೆ.
ಬೆಂಗಳೂರಿನ ಮೆಡಿನೋ ಸ್ಪೆಶಾಲಿಟಿ ಕ್ಲಿನಿಕ್ನ ಸಮಾಲೋಚಕ ನ್ಯೂರಾಲಜಿಸ್ಟ್ ಡಾ.ಪಿ.ಆರ್. ಕೃಷ್ಣನ್, “ಭಾರತದಲ್ಲಿ ವರ್ಟಿಗೋ ಅತ್ಯಂತ ಸಾಮಾನ್ಯವಾಗುತ್ತಿದೆ, ಆದರೂ ಅನೇಕ ವ್ಯಕ್ತಿಗಳು ರೋಗಲಕ್ಷಣಗಳನ್ನು ಗುರುತಿಸದೆ ಇರುವುದರಿಂದ, ರೋಗಪತ್ತೆ ಮತ್ತು ಚಿಕಿತ್ಸೆ ವಿಳಂಬವಾಗುತ್ತಿದೆ. ಅನೇಕ ಜನರಿಗೆ ವರ್ಟಿಗೊವನ್ನು ಗುರುತಿಸುವುದೇ ತಿಳಿದಿಲ್ಲ. ಅಂದರೆ, ಸುತ್ತುತ್ತಿರುವಂತಹ ಭಾವ ಮತ್ತು ಅಸ್ಥಿತರೆ ಹಾಗೂ ವಾಕರಿಗೆ ಮುಂತಾದ ತತ್ಸಂಬಂಧಿತ ಲಕ್ಷಣಗಳು. ತಲೆತಿರುಗುವಿಕೆಯಿಂದಾಗಿ ಉಂಟಾಗುವ ಚಕ್ಕರ್ ಮತ್ತು ವರ್ಟಿಗೋದಿಂದ ಉಂಟಾಗುವ ಚಕ್ಕರ್ ನಡುವಿನ ವ್ಯತ್ಯಾಸದ ಕುರಿತಾದ ಜಾಗೃತಿ ಸರಿಯಾದ ರೋಗಪತ್ತೆ ಮತ್ತು ಚಿಕಿತ್ಸಾ ಬೆಂಬಲ ಪಡೆದುಕೊಳ್ಳಲು ನೆರವಾಗಬಲ್ಲದು.” ಎಂದು ಹೇಳುತ್ತಾರೆ.
ವರ್ಟಿಗೋವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು
ವರ್ಟಿಗೋವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳುವುದಕ್ಕೆ ನೆರವಾಗುವ ಕೆಲವು ಸರಳ ಕ್ರಮಗಳನ್ನು ಇಲ್ಲಿ ತಿಳಿಸಲಾಗಿದೆ:
ಆರಂಭಿಕ ರೋಗಪತ್ತೆಗಾಗಿ ವೈದ್ಯರನ್ನು ಭೇಟಿಯಾಗುವುದು: ನೀವು ವರ್ಟಿಗೋ ಅಥವಾ ತತ್ಸಂಬಂಧಿತ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ವೈದ್ಯರನ್ನು ಭೇಟಿಯಾಗಿ ಅವರು ಸೂಚಿಸಿದ ಚಿಕಿತ್ಸೆಗಳು ಮತ್ತು ಔಷಧಗಳನ್ನು ಅನುಸರಿಸುವುದು ಬಹಳ ಮುಖ್ಯ. ಭವಿಷ್ಯತ್ತಿನ ಸಮಸ್ಯೆಗಳನ್ನು ಪರಿಹರಿಸಲು ಆರಂಭಿಕ ರೋಗಪತ್ತೆ ಅತಿಮುಖ್ಯ. ನಿಯಮಿತವಾದ ತಪಾಸಣೆಗಳನ್ನು ಕೈಗೊಳ್ಳುವುದರಿಂದ ಲಕ್ಷಣಗಳ ಮೇಲುಸ್ತುವಾರಿ ಮಾಡಿ, ಅಗತ್ಯ ಕಂಡಂತೆಲ್ಲಾ ಚಿಕಿತ್ಸಾ ಯೋಜನೆಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ನೆರವಾಗುತ್ತದೆ.
ಸರಿಯಾದ ಚಿಕಿತ್ಸೆಯೊಂದಿಗೆ ವರ್ಟಿಗೋ ನಿರ್ವಹಿಸಿ: ವೆಸ್ಟಿಬ್ಯುಲರ್ ಪುನರ್ವಸತಿ ಚಿಕಿತ್ಸೆ, ಔಷಧಗಳು ಹಾಗೂ ಕೆಲವೊಂದು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸಾ ಪರಿಹಾರಗಳ ಮೂಲಕ ವರ್ಟಿಗೋವನ್ನು ನಿಭಾಯಿಸಬಹುದು. ವೈದ್ಯರನ್ನು ಭೇಟಿ ಮಾಡುವುದರಿಂದ, ನಿಮ್ಮ ಪರಿಸ್ಥಿತಿಯ ವಿಧಕ್ಕೆ ಅತ್ಯಂತ ಸೂಕ್ತವಾದ ಚಿಕಿತ್ಸಾ ಯೋಜನೆಯನ್ನು ತೀರ್ಮಾನಿಸುವುದಕ್ಕೆ ನೆರವಾಗುತ್ತದೆ. ವರ್ಟಿಗೋ ಕೋಚ್ ಆಪ್(Vertigo Coach App)ನಂತಹ ವರ್ಟಿಗೋ ನಿರ್ವಹಣೆ ಕುರಿತಾದ ಸಮಗ್ರ ಮಾಹಿತಿ ಒದಗಿಸುವ ಆಪ್, ಜನರು, ಮಾತ್ರೆ ತೆಗೆದುಕೊಳ್ಳುವುದಕ್ಕೆ ನೆನಪು ಮಾಡುವುದು, ಜೀವನಶೈಲಿ ಸಲಹೆಗಳು ಹಾಗೂ ಅವರು ತಮ್ಮ ವೆಸ್ಟಿಬ್ಯುಲರ್(ನಮ್ಮ ತಲೆಯನ್ನು ಅದರ ಜಾಗದಲ್ಲೇ ಸಮತೋಲನಗೊಳಿಸಿ ಚಲಿಸುವ ಭಾವ ಏರ್ಪಡಿಸುವ ಒಂದು ಸಂವೇದನಾ ವ್ಯವಸ್ಥೆ)ಸಿಸ್ಟಮ್ಅನ್ನು ತರಬೇತುಗೊಳಿಸಿಕೊಳ್ಳುವುದಕ್ಕೆ ನೆರವಾಗುವುದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ವ್ಯಾಯಾಮಗಳಿರುವ ವೀಡಿಯೋಗಳು ಮುಂತಾದ ಸೇವೆಗಳ ನೆರವಿನಿಂದ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸರಿಯಾದ ಮಾರ್ಗದಲ್ಲಿ ಇರುವಾಗುತ್ತದೆ.
ನಿದ್ರಿಸುವ ಭಂಗಿಯನ್ನು ಗರಿಷ್ಟಗೊಳಿಸಿಕೊಳ್ಳುವುದು: ನಿಮ್ಮ ಬೆನ್ನ ಮೇಲೆ ಮತ್ತು ನಿಮ್ಮ ತಲೆಯನ್ನು ಎತ್ತರದಲ್ಲಿಟ್ಟುಕೊಂಡು ಮಲಗುವುದರಿಂದ ವರ್ಟಿಗೋ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಲು ನೆರವಾಗಬಹುದು. ಪಕ್ಕಕ್ಕೆ ತಿರುಗಿ ಮಲಗುವುದರಿಂದ ವರ್ಟಿಗೋ ಎಪಿಸೋಡ್ಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಹಾಗೆ ಮಲಗುವುದನ್ನು ತಪ್ಪಿಸಿ.
ಚಟುವಟಿಕೆಯಿಂದಿರುವುದು: ಯೋಗ ಹಾಗೂ ನಡಿಗೆ ಮುಂತಾದ ಹಗುರ ವ್ಯಾಯಾಮಗಳು ಸಮತೋಲನ ಹೆಚ್ಚಿಸಿ ವರ್ಟಿಗೋ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುತ್ತವೆ.
ಸಮತೋಲನ ನಮ್ಮ ದಿನನಿತ್ಯ ಜಿವನದ ಮೂಲಭೂತ ಅಂಶ ಹಾಗೂ ವರ್ಟಿಗೋ ಸಮತೋಲನ ಜಾಗೃತಿ ವಾರ(15-21 ಸೆಪ್ಟೆಂಬರ್), ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಕಾಲ ನೆನಪಿನ ಅಂಶವಾಗಿದೆ. ಜಾಗೃತಿಯನ್ನು ಹೆಚ್ಚಿಸಿ, ಆರಂಭಿಕ ರೋಗಪತ್ತೆಯನ್ನು ಪ್ರೋತ್ಸಾಹಿಸುವ ಮತ್ತು ವರ್ಟಿಗೋ ಅನುಭವಿಸುತ್ತಿರುವವರಿಗೆ ಬೆಂಬಲ ಒದಗಿಸುವ ಮೂಲಕ, ನಾವು ಆ ವ್ಯಕ್ತಿಗಳು ಸಮತೋಲನ ಕಾಯ್ದುಕೊಂಡು ಸಂಪೂರ್ಣ ಜೀವನ ನಡೆಸಲು ಸಬಲಗೊಳಿಸಬಹುದು.