ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಜೊತೆ ಜನ ಸೇರಿರೋದನ್ನ ಪ್ರಶ್ನಿಸಿ ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಗುಂಡಾಗಿರಿ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಲು ಬಂದಾಗ ಘಟನೆ ನಡೆದಿದೆ.
ಈ ವೇಳೆ ಪೊಲೀಸರೊಂದಿಗೆ ಮಾತಿನಚಕಮಕಿ ನಡೆಸಿದ ಬಿಜೆಪಿ ಕಾರ್ಯಕರ್ತ ಪೊಲೀಸ್ ಅಧಿಕಾರಿಯನ್ನ ತಳ್ಳಾಡಿ ಪುಂಡಾಟ ಜೊತೆಗೆ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದಾನೆ.
ಬಿಜೆಪಿ ಕಾರ್ಯಕರ್ತರ ಸಂದೀಪ್ ಎಕ್ಕೂರು ಹಾಗೂ ಕಾರ್ಯಕರ್ತರಿಂದ ಮಾತಿನ ಚಕಮಕಿ, ಚಿತ್ರೀಕರಣ ಮಾಡಿದ ಮಾಧ್ಯಮದವ ಮೇಲೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ನಗರದ ಕಂಕನಾಡಿ ಕಪಿತಾನಿಯೋ ಶಾಲಾ ಮತಗಟ್ಟೆ ಬಳಿ ಈ ಘಟನೆ ನಡೆದಿದೆ.