ಶಿವಮೊಗ್ಗ: ರಾಜ್ಯ ಸರಕಾರ ಜಾರಿಗೊಳಿಸಿದ ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಲ್ಲೆಯ 2.80 ಲಕ್ಷ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2ಸಾವಿರ ರೂ. ಹಣ ತಲುಪಿದೆ
ಸೋಮವಾರ ಸಂಜೆವರೆಗೆ 2.80 ಲಕ್ಷ ಮಹಿಳೆಯರಿಗೆ ಹಣ ತಲುಪಿಸಲಾಗಿದೆ. ತಾಂತ್ರಿಕ ದೋಷದ ಕಾರಣದಿಂದ ಕೆಲವೊಂದು ಖಾತೆಗಳಿಂದ ಹಣ ವಾಪಸು ಬರುತ್ತಿದೆ. ಅಂತಹ ಖಾತೆಗಳನ್ನು ಪರಿಶೀಲಿಸಿ ಸರಿಪಡಿಸಿ ಹಣ ಹಾಕಲಾಗುತ್ತಿದೆ. ಇನ್ನೊಂದು ವಾರದೊಳಗೆ ನೋಂದಾಯಿಸಿಕೊಂಡ ಎಲ್ಲಾ ಫಲಾನುಭವಿ ಮಹಿಳೆಯರಿಗೆ ಹಣ ತಲುಪುವ ಸಾಧ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಂತೋಷ್ ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳ ಆಧಾರದ ಮೇಲೆ ಗೃಹಲಕ್ಷ್ಮಿ ಯೋಜನೆಗೆ 4.23 ಲಕ್ಷ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಶೇ.86.38 (3.65ಲಕ್ಷ) ಮಹಿಳೆಯರು ನೋಂದಣಿ ಮಾಡಿಸಿದ್ದಾರೆ.