ಬೆಂಗಳೂರು: ವಿಶ್ವದ ಪ್ರಮುಖ ಏರ್ ಕಂಪ್ರೆಸರ್ ತಯಾರಕರಲ್ಲಿ ಒಂದಾಗಿರುವ ಎಲ್ಜಿ ಈಕ್ವಿಪ್ಮೆಂಟ್ಸ್ (ಬಿಎಸ್ಇ: 522074 ಎನ್ಎಸ್ಇ: ಎಲ್ಜೀಈಕ್ವಿಪ್), ಇಂದು ಭಾರತದ ರಾಜಸ್ಥಾನದಲ್ಲಿರುವ ಜೈಪುರ್ ಎಕ್ಸಿಬಿಷನ್ ಆಂಡ್ ಕನ್ವೆನ್ಷನ್ ಸೆಂಟರ್(ಜೆಇಸಿಸಿ)ನಲ್ಲಿ ನಡೆದ ಇಂಡಿಯಾ ಸ್ಟೋನ್ಮಾರ್ಟ್ 2024ರ 12ನೇ ಆವೃತ್ತಿಯ ಸಮಾವೇಶದಲ್ಲಿ ಗೇಮ್-ಚೇಂಜ್ ಮಾಡುವ ಪಿಜಿ 550-215 ಟ್ರಾಲಿ-ಮೌಂಟೆಡ್ ಪೋರ್ಟಬಲ್ ಸ್ಕ್ರೂ ಏರ್ ಕಂಪ್ರೆಸ್ಸರ್ ಅನ್ನು ಪರಿಚಯಿಸಿದೆ. ಎಲ್ಜಿ ಬೂತ್ 6ರಲ್ಲಿ, ಹೊರಾಂಗಣ ಯಂತ್ರೋಪಕರಣಗಳ ಪ್ರದೇಶ ಬಿಯಲ್ಲಿ, ಗಣಿಗಾರಿಕೆ ಉದ್ಯಮಕ್ಕಾಗಿ ಇರುವ ಎಲ್ಜಿಯ ವಿದ್ಯುತ್-ಚಾಲಿತ ಪಿಜಿ110 ಇ, ಪಿಜಿ 55 ಇ, ಮತ್ತು ಪಿಜಿ 75 ಇ ಪೋರ್ಟೆಬಲ್ ಏರ್ ಕಂಪ್ರೆಸರ್ಗಳನ್ನು ಪ್ರದರ್ಶಿಸಲಾಯಿತು. ಇಂಟರ್ನ್ಯಾಷನಲ್ ಸ್ಟೋನ್ ಇಂಡಸ್ಟ್ರಿ ಟ್ರೇಡ್ ಫೇರ್ನ 2024ರ ಆವೃತ್ತಿಯು ಪ್ರಪಂಚದಾದ್ಯಂತ ಇರುವ ಸ್ಟೋನ್ ಇಂಡಸ್ಟ್ರಿಗಳ(ಕಲ್ಲು ಉದ್ಯಮದಿಂದ) 30,000 ಕ್ಕೂ ಹೆಚ್ಚು ಸಂದರ್ಶಕರು ಮತ್ತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.
ಹೊಸದಾಗಿ ಪರಿಚಯಿಸಲಾದ ಪಿಜಿ 550-215 ಅನ್ನು ನಿರ್ಮಾಣ(ಕನ್ ಸ್ಟ್ರಕ್ಷನ್) ಮತ್ತು ಗಣಿಗಾರಿಕೆ ವಲಯಗಳಲ್ಲಿನ ಗ್ರಾಹಕರಿಗೆ ಉತ್ತಮ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಲಾಭದಾಯಕತೆಯನ್ನು ಒದಗಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಕಂಪ್ರೆಸರ್ ನ 3-ಹಂತದ ಏರ್ ಫಿಲ್ಟ್ರೇಷನ್ ವ್ಯವಸ್ಥೆಯು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸುವಂತೆ ಮಾಡುತ್ತದೆ. ಜೊತೆಗೆ ಸಂಯೋಜಿತ ನಿಯಂತ್ರಣ ಫಲಕ(ಇಂಟಿಗ್ರೇಟೆಡ್ ಕಂಟ್ರೋಲ್ ಪ್ಯಾನೆಲ್)ವು ಸುಧಾರಿತ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಡ್ರಿಲ್ಲರ್-ಸ್ನೇಹಿ ಕಾರ್ಯಾಚರಣೆಗಳನ್ನು ಸಾಧ್ಯವಾಗಿಸುತ್ತದೆ. ದೊಡ್ಡ ಬಾಗಿಲುಗಳು ಮತ್ತು ದೃಢವಾದ ಮೇಲಾವರಣವನ್ನು ಒಳಗೊಂಡಿರುವ ಕಂಪ್ರೆಸರ್ ನ ವಿನ್ಯಾಸವು ಸುಲಭ ನಿರ್ವಹಣೆ, ವರ್ಧಿತ ಬಾಳಿಕೆ ಒದಗಿಸುತ್ತದೆ ಮತ್ತು ವಿಪರೀತ ಹವಾಮಾನ ಪರಿಸ್ಥಿತಿಗಳಿಂದ ರಕ್ಷಣೆ ನೀಡುತ್ತದೆ.
ಹೆಚ್ಚುವರಿಯಾಗಿ, ಎಲ್ಜಿಯ ಪ್ಯಾನ್-ಇಂಡಿಯಾ ನೆಟ್ವರ್ಕ್ ಸೇವಾ ಕೇಂದ್ರಗಳು ಮತ್ತು ತರಬೇತಿ ಪಡೆದ ಸೇವಾ ತಂತ್ರಜ್ಞರು ಪ್ರತಿ ಗ್ರಾಹಕರಿಗೆ ನಿರರ್ಗಳ ಕಾರ್ಯಾಚರಣೆಗಳನ್ನು ಒದಗಿಸುತ್ತಾರೆ.ಪಿಜಿ 110 ಇ, 55 ಇ, ಮತ್ತು 7ಇ E ಸರಣಿಯ ವಿದ್ಯುತ್-ಚಾಲಿತ ಕಂಪ್ರೆಸರ್ಗಳನ್ನು ಪ್ರದರ್ಶನದಲ್ಲಿ ಇಡಲಾಗಿದ್ದು, ವಿದ್ಯುತ್ ಲಭ್ಯವಿರುವ ಮತ್ತು ಎಮಿಷನ್-ಮುಕ್ತ ಪ್ರಕ್ರಿಯೆಗಳು ಅಗತ್ಯವಿರುವ ಅಮೃತಶಿಲೆ, ಗ್ರಾನೈಟ್ ಮತ್ತು ನೀಲಿ ಲೋಹದ ಕ್ವಾರಿಗಳಾದ್ಯಂತ ಪ್ರಮಾಣಿತ ಒತ್ತಡದ ಅನ್ವಯಿಕೆ(ಸ್ಟಾಂಡರ್ಡ್ ಪ್ರೆಷರ್ ಅಪ್ಲಿಕೇಷನ್)ಗಳಲ್ಲಿ ವ್ಯಾಪಕವಾಗಿ ಅಳವಡಿಸಲಾಗಿದೆ.
ನಿರ್ಮಾಣ ಮತ್ತು ಗಣಿಗಾರಿಕೆ ಉದ್ಯಮದ ಗ್ರಾಹಕರಿಗೆ ಉನ್ನತ-ಕಾರ್ಯಕ್ಷಮತೆಯ ಪೋರ್ಟೆಬಲ್ ಕಂಪ್ರೆಸ್ಡ್ ಏರ್ ಸೊಲ್ಯೂಷನ್ಸ್(ಪರಿಹಾರೋತ್ಪನ್ನ)ಗಳನ್ನು ತಲುಪಿಸಲು ಎಲ್ಜಿ ಬದ್ಧವಾಗಿದೆ. ಉನ್ನತ ಗ್ರಾಹಕ ಬೆಂಬಲ ಮತ್ತು ಕಂಪ್ರೆಸ್ಡ್ ಏರ್ ತಂತ್ರಜ್ಞಾನದಲ್ಲಿ 63 ವರ್ಷಗಳ ಅನುಭವದೊಂದಿಗೆ, ಎಲ್ಜಿ ಇಂದು 120ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸ್ತುತವಾಗಿದೆ. ಡ್ರೈಯರ್ಗಳು, ಫಿಲ್ಟರ್ಗಳು ಮತ್ತು ಡೌನ್ಸ್ಟ್ರೀಮ್ ಬಿಡಿಭಾಗಗಳಿಗೆ ಆಯಿಲ್ ಫ್ರೀ ರೆಸಿಪ್ರೊಕೇಟಿಂಗ್ ಕಂಪ್ರೆಸರ್ಗಳು ಮತ್ತು ಸೆಂಟ್ರಿಫ್ಯೂಗಲ್ ಕಂಪ್ರೆಸರ್ಗಳು, ಆಯಿಲ್-ಲೂಬ್ರಿಕೇಟೆಡ್ ಮತ್ತು ಆಯಿಲ್-ಫ್ರೀ ರೋಟರಿ ಸ್ಕ್ರೂ ಕಂಪ್ರೆಸರ್ಗಳು, ಆಯಿಲ್- ಲೂಬ್ರಿಕೇಟೆಡ್ ಮತ್ತು ಆಯಿಲ್-ಕಂಪ್ರೆಸ್ಡ್ ಏರ್ ಪರಿಹಾರೋತ್ಪನ್ನಗಳ ಸಂಪೂರ್ಣ ಶ್ರೇಣಿಯನ್ನು ನೀಡುತ್ತದೆ. ಅತ್ಯಾಧುನಿಕ ಉತ್ಪಾದನಾ ಘಟಕಗಳು ಮತ್ತು 400+ ಕಂಪ್ರೆಸ್ಡ್ ಏರ್ ಸಿಸ್ಟಮ್ ಉತ್ಪನ್ನಗಳ ಪೋರ್ಟ್ಫೋಲಿಯೊದೊಂದಿಗೆ, ಎಲ್ಜಿ ವಿಶ್ವಾದ್ಯಂತ 2+ ಮಿಲಿಯನ್ ಇನ್ ಸ್ಟಾಲೇಷನ್ ಗಳನನ್ನು ಸಾಧಿಸುವ ಮೂಲಕ ವಿಶ್ವಾಸಾರ್ಹತೆ, ದಕ್ಷತೆ ಮತ್ತು ವೆಚ್ಚ-ಪರಿಣಾಮಕಾರಿತ್ವವನ್ನು ಮರು ವ್ಯಾಖ್ಯಾನಿಸುತ್ತದೆ.