ಕೊನೆಯವರೆಗೂ ನಿಮ್ಮ ಮೂಳೆಗಳು ಗಟ್ಟಿ ಇರಬೇಕು ಎಂದರೆ ಕ್ಯಾಲ್ಸಿಯಂ ತುಂಬಾ ಅವಶ್ಯಕವಾಗಿರುತ್ತದೆ. ನಮ್ಮ ಮೂಳೆಗಳ ಹಾಗೂ ಹಲ್ಲುಗಳಿಗೆ ಬಲ ಸಿಕ್ಕುವುದು ಕ್ಯಾಲ್ಸಿಯಂನಿಂದಲೇ.
ಅಷ್ಟೇ ಅಲ್ಲದೆ ಕ್ಯಾಲ್ಸಿಯಂ ಎಂಬ ಖನಿಜಾಂಶ ನಮ್ಮ ದೇಹದಲ್ಲಿ ವಿವಿಧ ಕಾರ್ಯ ಚಟುವಟಿಕೆಗಳಿಗೆ ನೆರವಾಗುತ್ತದೆ. ಮಾಂಸ ಖಂಡಗಳ ಕಾಂಟ್ರಾಕ್ಷನ್, ನರಮಂಡಲ ವ್ಯವಸ್ಥೆ, ರಕ್ತ ಹೆಪ್ಪುಗಟ್ಟುವುದು, ಜೀವಕೋಶ ಗಳ ಸಂವಹನ ಎಲ್ಲದಕ್ಕೂ ಕ್ಯಾಲ್ಸಿಯಂ ಅಗತ್ಯವಿರುತ್ತದೆ.
ಒಂದು ವೇಳೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಅದರಿಂದ ಮೂಳೆಗಳು ದುರ್ಬಲ ಗೊಳ್ಳುತ್ತವೆ ಮತ್ತು ಚಿಕ್ಕ ವಯಸ್ಸಿಗೆ ಮೂಳೆ ಮುರಿದು ಕೊಳ್ಳುವುದು ಮತ್ತು ಆಸ್ಟಿಯೋಪೋರೋಸಿಸ್ ಅಂತಹ ಸಮಸ್ಯೆಗಳು ಕಂಡು ಬರಲು ಕಾರಣವಾಗುತ್ತವೆ.
ಚಿಕ್ಕ ವಯಸ್ಸಿನಿಂದ ಹಾಲು ಕುಡಿದು ಕೊಂಡು ಬೆಳೆದಿರುತ್ತೇವೆ. ಆದರೆ ಕೆಲವರಿಗೆ ಹಾಲು ಅಲರ್ಜಿ ಆಗಿರುತ್ತವೆ. ಅಂತಹವರಿಗಾಗಿ ಕ್ಯಾಲ್ಸಿಯಂ ಪ್ರಮಾಣವನ್ನು ಹೊಂದಿರುವ ಇತರ ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೇವೆ.
ಕಾಟೇಜ್ ಚೀಸ್ಚೀಸ್:
ಕಾಟೇಜ್ ಚೀಸ್ಚೀಸ್ ತನ್ನಲ್ಲಿ ಹಲವು ಬಗೆಯ ಪೌಷ್ಟಿಕ ಅಂಶಗಳನ್ನು ಒಳಗೊಂಡಿದ್ದು ಸೋಡಿಯಂ, ಕ್ಯಾಲ್ಸಿಯಂ, ಪ್ರೋಟೀನ್, ಜಿಂಕ್ ಮತ್ತು ವಿಟಮಿನ್ ಎ ಒಳಗೊಂಡಿದೆ. ಮೂಳೆಗಳನ್ನು ಶಕ್ತಿಯುತವಾಗಿ ಮಾಡುವುದರ ಜೊತೆಗೆ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ.
ಕೇವಲ 100 ಗ್ರಾಂ ಪನೀರ್ ನಿಮಗೆ 42% ಕ್ಯಾಲ್ಸಿಯಂ ನೀಡುತ್ತದೆ ಮತ್ತು ಇದನ್ನು ಪ್ರತಿ ದಿನ ಸೇವಿಸಿದರೆ ನಿಮ್ಮ ಮೂಳೆಗಳ ಆರೋಗ್ಯ ಉತ್ತಮಗೊಳ್ಳುತ್ತದೆ. ಒಂದು ವೇಳೆ ನಿಮಗೆ ಹಾಲು ಇಷ್ಟವಿಲ್ಲದಿದ್ದರೆ, ಚೀಸ್ ನ್ನು ಉಪಯೋಗಿಸಬಹುದು.
ಬಾದಾಮಿ:
ಬಾದಾಮಿ ಒಂದು ಆರೋಗ್ಯಕರವಾದದಾಗಿದ್ದು, ಇದರ ಸೇವನೆಯಿಂದ ನಿಮ್ಮ ಸಂಪೂರ್ಣ ಆರೋಗ್ಯ ಉತ್ತಮಗೊಳ್ಳುತ್ತದೆ. ಒಂದು ಹಿಡಿ ಬಾದಾಮಿ ಬೀಜಗಳು ತಿಂದರೆ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸಿಗುತ್ತದೆ. ಕ್ಯಾಲ್ಸಿಯಂ ಜೊತೆಗೆ ಬಾದಾಮಿ ಬೀಜಗಳಲ್ಲಿ ವಿಟಮಿನ್ ಇ, ಮೆಗ್ನೀಷಿಯಂ, ನಾರಿನ ಅಂಶ ಮತ್ತು ಪ್ರೋಟೀನ್ ಸಹ ಇದೆ.
ಜೀರ್ಣಾಂಗ ವ್ಯವಸ್ಥೆಗೆ ಇದು ಉತ್ತಮ ಎಂದು ಪರಿಗಣಿಸಲಾಗಿದೆ.
ಮೊಸರು:
ಮೊಸರು ಒಂದು ಡೈರಿ ಪದಾರ್ಥ. ಇದರಲ್ಲಿ ಅಪಾರ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ನೀವು ಪ್ರತಿದಿನ ಮೊಸರನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೂ ಕೂಡ ನಿಮಗೆ ಮೂಳೆಗಳ ಸಮಸ್ಯೆ ಕಡಿಮೆಯಾಗುತ್ತದೆ. ಮೊಸರು ಒಂದು ಪ್ರೊ ಬಯೋಟಿಕ್ ಆಹಾರವಾಗಿದ್ದು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ನಿಮ್ಮ ಆಹಾರ ಪದ್ಧತಿಯಲ್ಲಿ ಮೊಸರನ್ನು ಸೇರಿಸಿಕೊಂಡು ಸೇವನೆ ಮಾಡುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಮತ್ತು ಆರೋಗ್ಯಕರವಾದ ಜೀರ್ಣ ವ್ಯವಸ್ಥೆ ನಿಮ್ಮದಾಗುತ್ತದೆ.
ಸೋಯಾ ಹಾಲು:
ಯಾರಿಗೆ ಹಸುವಿನ ಹಾಲು, ಅಷ್ಟಾಗಿ ಇಷ್ಟವಾಗುವುದಿಲ್ಲ ಅಂತಹವರು ಸೋಯಾ ಹಾಲು ಸೇವನೆ ಮಾಡಬಹುದು. ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿದ್ದು, ಮೂಳೆಗಳ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಪ್ರೊಟೀನ್ ಮತ್ತು ನಾರಿನ ಅಂಶ ಕೂಡ ಹೆಚ್ಚಾಗಿರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ವೃದ್ಧಿಸುವಲ್ಲಿ ಸಹಿಯಕ.
ಹಸಿರು ಎಲೆ ತರಕಾರಿಗಳು:
ನೀವು ಸೇವನೆ ಮಾಡುವ ಪಾಲಕ್ ಸೊಪ್ಪು, ದಂಟು, ಮೆಂತ್ಯ ಸೊಪ್ಪು ಇವುಗಳಲ್ಲಿ ಪೊಟ್ಯಾಶಿಯಂ, ಕಬ್ಬಿಣ, ಮತ್ತು ವಿಟಮಿನ್ ಸಿ ಹೆಚ್ಚಾಗಿದ್ದು ಜೊತೆಗೆ ಕ್ಯಾಲ್ಸಿಯಂ ಸಿಗುತ್ತದೆ. ನಿಮ್ಮ ಆಹಾರ ಪದ್ಧತಿಯಲ್ಲಿ ಇವುಗಳನ್ನು ಸೇರಿಸಿ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ ಮೂಳೆಗಳ ಆರೋಗ್ಯಕ್ಕೂ ಸಹಾಯವಾಗುತ್ತದೆ. ಮಾಂಸ ಖಂಡಗಳು ಸಹ ಆರೋಗ್ಯವಾಗಿರಲು ಇದರ ಸೇವನೆ ನೆರವಾಗುತ್ತದೆ.
ಒಟ್ಟಿನಲ್ಲಿ ಹಾಲು ಕುಡಿಯದಿರುವರು ಇವೆಲ್ಲ ಪದಾರ್ಥಗಳನ್ನು ಸೇವಿಸಿ ಕ್ಯಾಲ್ಸಿಯಂ ನ್ನು ಪಡೆದುಕೊಳ್ಳಬಹುದು.