ಯಾವುದೇ ಋತುವಿನಲ್ಲಿಯೂ ಸಿಗುವಂತಹ ಹಣ್ಣೆಂದರೆ ಬಾಳೆಹಣ್ಣು. ಬಾಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಬಾಳೆಹಣ್ಣಿನ ಸಿಪ್ಪೆಯಲ್ಲಿಯೂ ಹಲವಾರು ಔಷಧೀಯ ಗುಣಗಳಿವೆ. ಇದರಿಂದ ಏನೆಲ್ಲಾ ಲಾಭ ಇದೆ ನೋಡಿ..
• ಬಾಳೆಹಣ್ಣಿನ ಸಿಪ್ಪೆ ಚರ್ಮದ ಮೇಲಿನ ಸುಕ್ಕುಗಳು, ಕಲೆಗಳು ತೆಗೆಯುತ್ತದೆ.
• ರಾತ್ರಿ ಮಲಗುವ ಮುನ್ನ ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಹಚ್ಚಿ ಬೆಳಗ್ಗೆ ನೀರಿನಿಂದ ತೊಳೆಯಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಮೊಡವೆಗಳನ್ನು ಕಡಿಮೆ ಮಾಡಬಹುದು.
• ಬಾಳೆಹಣ್ಣಿನ ಸಿಪ್ಪೆಯನ್ನು ರುಬ್ಬಿಕೊಂಡು, ಅದಕ್ಕೆ ನಿಂಬೆರಸ ಮತ್ತು ಮೊಸರು ಬೆರೆಸಿ ಮುಖಕ್ಕೆ ಹಚ್ಚಿದರೆ ಸುಕ್ಕು ಕಡಿಮೆಯಾಗುತ್ತದೆ.
• ಬಾಳೆಹಣ್ಣಿನ ಸಿಪ್ಪೆ ಮತ್ತು ಒಂದು ಚಿಕ್ಕ ಬಾಳೆಹಣ್ಣನ್ನು ರುಬ್ಬಿಕೊಳ್ಳಿ. ಇದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ ಮುಖದ ಮೇಲಿನ ಕಲೆಗಳು ಕ್ರಮೇಣ ನಿವಾರಣೆಯಾಗುತ್ತವೆ.
• ಪ್ರತಿದಿನ ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ಹಾಕಿ ಚೆನ್ನಾಗಿ ಉಜ್ಜಿಕೊಳ್ಳಿ. ಇದರಿಂದ ಹಲ್ಲುಗಳು ಹೊಳೆಯುತ್ತವೆ.
• ಸೋರಿಯಾಸಿಸ್ ಉಂಟಾದ ಜಾಗಕ್ಕೆ ಬಾಳೆಹಣ್ಣಿನ ಸಿಪ್ಪೆ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.
• ಕ್ರಿಮಿ ಕೀಟಗಳು ಕಚ್ಚಿದ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿ.