ಯೂಟ್ಯೂಬ್ನಲ್ಲಿ ನಾವು ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಬ್ಲಾಕ್ ಮಾಡಬಹುದಂತೆ. ಆದ್ರೆ ಅದಕ್ಕಾಗಿ ಕೆಲವೊಂದು ಟ್ರಿಕ್ಸ್ ಫಾಲೋ ಮಾಡಬೇಕಾಗುತ್ತದೆ.
ಇಂದಿನ ಕಾಲದಲ್ಲಿ ಟಿವಿಗಿಂತ ಮೊಬೈಲ್ ಬಳಕೆದಾರರೇ ಹೆಚ್ಚಾಗಿದ್ದು ಈ ಸೋಶಿಯಲ್ ಮೀಡಿಯಾಗಳು ಟಿವಿಗಿಂತ ಹೆಚ್ಚಿನ ಮನರಂಜನೆಯನ್ನು ನೀಡುವುದರಿಂದ ಎಲ್ಲರು ಮೊಬೈಲ್ ಅನ್ನೇ ನಂಬಿಕೊಂಡಿದ್ದಾರೆ ಎಂದು ಹೇಳಬಹುದು.
ಇತ್ತೀಚೆಗೆ ಸಾಕಷ್ಟು ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳು ಮೊಬೈಲ್ಗಳಲ್ಲಿ ಬಂದಿವೆ. ಅದರಲ್ಲಿ ಯೂಟ್ಯೂಬ್ ಸಹ ಒಂದಾಗಿದೆ ಯೂಟ್ಯೂಬ್ ಹಿಂದೆ ಜಾಹೀರಾತು ಇಲ್ಲದೆ ವೀಕ್ಷಕರಿಗೆ ವಿಡಿಯೋ ಸ್ಟ್ರೀಮಿಂಗ್ ಮಾಡುತ್ತಿತ್ತು. ಆದ್ರೆ ಈಗ ಹಾಗಲ್ಲ ಪ್ರತಿ ಸೆಕೆಂಡ್ಗೆ ಒಂದರಂತೆ ಜಾಹೀರಾತುಗಳು ಬರುತ್ತಿರುತ್ತದೆ.. ಆದರೆ ಈ ಯೂಟ್ಯೂಬ್ನಲ್ಲಿ ನಾವು ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಬ್ಲಾಕ್ ಮಾಡಬಹುದು. ಆದ್ರೆ ಅದಕ್ಕಾಗಿ ಕೆಲವೊಂದು ಟ್ರಿಕ್ಸ್ ಫಾಲೋ ಮಾಡಬೇಕು.
ಯೂಟ್ಯೂಬ್ನಂತೆಯೇ ಇತರೆ ಆ್ಯಪ್ಗಳನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ನೋಡುವಾಗ ನಿಮಗೆ ಆ್ಯಡ್ ಬಾರದೇ ಇರುವಂತೆ ಮಾಡಬೇಕೆಂದರೆ ಯೂಟ್ಯೂಬ್ನಂತೆಯೇ ಇರುವ ಇತರೆ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ. ಅದಕ್ಕಾಗಿ ಪ್ಲೇ ಸ್ಟೋರ್ನಲ್ಲಿ OGYoutube, DNS66, NewPipe, YT Vanced, Ad Clearನಂತಹ ಅಪ್ಲಿಕೇಶನ್ಗಳು ಲಭ್ಯವಿದೆ. ಈ ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ಮೂಲಕ ಜಾಹೀರಾತು ಮುಕ್ತವಾಗಿ ವಿಡಿಯೋಗಳನ್ನು ನೋಡಬಹುದಾಗಿದೆ.
ಈ ರೀತಿಯಲ್ಲಿ ಆ್ಯಡ್ ಬ್ಲಾಕ್ ಮಾಡಬಹುದು: ಇನ್ನು ನೀವು ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ನೋಡುವಾಗ ಜಾಹೀರಾತು ಬಾರದಂತೆ ಮಾಡಲು ಕೇವಲ ಒಂದು ಡಾಟ್ ಹಾಕುವ ಮೂಲಕ ಬ್ಲಾಕ್ ಮಾಡಬಹುದು. ನೀವು ನೋಡುವಂತಹ ವಿಡಿಯೋನ Youtube.com ನಂತರದಲ್ಲಿ ಬರುವ (/) ಈ ಚಿಹ್ನೆಯ ಮೊದಲು (.) ಈ ಚುಕ್ಕಿ ಹಾಕಿದ್ರೆ ಮುಂಬರುವ ಎಲ್ಲಾ ಆ್ಯಡ್ಗಳು ಬ್ಲಾಕ್ ಆಗುತ್ತದೆ.
ಇನ್ನು ಯೂಟ್ಯೂಬ್ನಲ್ಲಿ ಜಾಹೀರಾತು ಬಾರದಂತೆ ಮಾಡಬೇಕಾದ್ರೆ ಚಂದಾದಾರಿಕೆ ಮಾಡಿಕೊಳ್ಳಬಹುದು. ಇದು 1 ತಿಂಗಳ, 3 ತಿಂಗಳ ಹೀಗೆ ಹಲವಾರು ಅವಧಿಯನ್ನು ಹೊಂದಿರುತ್ತದೆ. ಈ ಮೂಲಕ ಯೂಟ್ಯೂಬ್ ನೀಡುವಂತಹ ಹಲವಾರು ಫೀಚರ್ಗಳ ಸೌಲಭ್ಯವನ್ನು ಪಡೆಯಬಹುದಾಗಿದೆ.
ಇನ್ನೂ ಆ್ಯಡ್ ಬ್ಲಾಕರ್ ಕೂಡ ಬಳಸಬಹುದು. ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ನೋಡುವಾಗ ಜಾಹೀರಾತು ಬಾರದ ಹಾಗೆ ಮಾಡಬೇಕೆಂದರೆ ಆ್ಯಡ್ ಬ್ಲಾಕರ್ಗಳನ್ನು ಬಳಸಬಹುದು. ಇದಕ್ಕೆ ಬ್ರೌಸರ್ನಲ್ಲಿ ಹಲವಾರು ಆ್ಯಡ್ ಬ್ಲಾಕರ್ ಸೈಟ್ಗಳು ಸಿಗುತ್ತವೆ. ಈ ಮೂಲಕ ಯೂಟ್ಯೂಬ್ನಲ್ಲಿ ಜಾಹೀರಾತಿಲ್ಲದೆ ಆರಾಮವಾಗಿ ವಿಡಿಯೋಗಳನ್ನುನೋಡಬಹುದಾಗಿದೆ.