ಎಲ್ಲಾ ಋತುವಿನಲ್ಲೂ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಈ ಸಮಸ್ಯೆಗಳಿಗೆ ಮಾರುಕಟ್ಟೆಗಳಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಬಳಸುವದಕ್ಕಿಂತ ಮನೆಮದ್ದುಗಳನ್ನು ಉಪಯೋಗಿಸುವುದು ಒಳ್ಳೆಯದು. ಇದರಲ್ಲಿ ನಿಂಬೆ ಮತ್ತು ಜೇನುತುಪ್ಪವನ್ನು ಕೂಡ ಬಳಸಬಹುದು.
ಜೇನುತುಪ್ಪ ಮತ್ತು ನಿಂಬೆ ಎರಡೂ ಕೂಡ ಹಲವು ವಿಧದಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದರೆ, ನಿಂಬೆ ಆ್ಯಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ.
ನಮ್ಮನ್ನು ಭಾದಿಸುವ ಹಲವು ರೀತಿಯ ಸೋಂಕುಗಳನ್ನು ತಡೆಗಟ್ಟಲು ಮತ್ತು ಕಾಯಿಲೆಯನ್ನು ಗುಣಪಡಿಸಲು ಈ ಎರಡೂ ವಸ್ತುಗಳನ್ನು ಹಿಂದಿನಿಂದಲೂ ಮನೆಮದ್ದಾಗಿ ಇವನ್ನು ಬಳಸಲಾಗುತ್ತಿದೆ. ಇದಲ್ಲದೆ ಜೇನುತುಪ್ಪ ಮತ್ತು ನಿಂಬೆ ಚರ್ಮಕ್ಕೂ ಕೂಡ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.
ಇವೆರಡೂ ಚರ್ಮದ ಸೋಂಕನ್ನು ಕಡಿಮೆ ಮಾಡುವುದರ ಜೊತೆಗೆ ಪಿಗ್ಮೆಂಟೇಷನ್ ಕಡಿಮೆ ಮಾಡಲು ಸಹಕಾರಿಯಾಗಿದೆ. ಇದಲ್ಲದೆ, ನಿಂಬೆಯಲ್ಲಿರುವ ವಿಟಮಿನ್ ಸಿ ಅಂಶ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಮುಖದಲ್ಲಿ ಕಂಡುಬರುವ ವಯಸ್ಸಾಗುವಿಕೆ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇತೀಚಿನ ದಿನಗಳಲ್ಲಿ ಸನ್ ಬರ್ನ್ ಸಮಸ್ಯೆ ಹೆಚ್ಚಾಗುತ್ತಿದೆ. ನಿಂಬೆ ಮತ್ತು ಜೇನುತುಪ್ಪ ಇವೆರಡೂ ಮುಖದ ಮೇಲೆ ಸನ್ಬರ್ನ್ ಸಮಸ್ಯೆ ಉಂಟಾದ ಭಾಗದಲ್ಲಿ ಇದನ್ನು ಬಳಸಿದರೆ ಬೇಗ ಗುಣಮುಖವಾಗುತ್ತದೆ. ಅದು ಹೇಗೆಂದರೆ ನಿಂಬೆಯಲಿನ್ಲ ವಿಟಮಿನ್ ಸಿ ಅಂಶ ಸನ್ಬರ್ನ್ ನ್ನು ತಡೆಯುತ್ತದೆ ಮತ್ತು ಜೇನುತುಪ್ಪವು ಚರ್ಮವನ್ನು ತಂಪಾಗಿರಿಸುತ್ತದೆ.
ಹೆಚ್ಚಿನವರಿಗೆ ಕಣ್ಣಿನ ಸುತ್ತಲೂ ಡಾರ್ಕ್ ಸರ್ಕಲ್ ಸಮಸ್ಯೆ ಕಾಡುತ್ತಿರುತ್ತದೆ. ಇದು ಅತಿಯಾದರೆ ಸೌಂದರ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಸಮಸ್ಯೆಯನ್ನು ಕಡಿಮೆ ಮಾಡಲು ನೀವು ನಿಂಬೆ ಮತ್ತು ಜೇನುತುಪ್ಪದ ಪೇಸ್ಟ್ ನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿಕೊಳ್ಳಬಹುದು. ಇದು ಕಪ್ಪು ವರ್ತುಲಗಳನ್ನು ಕಡಿಮೆ ಮಾಡುವುದರ ಜೊತೆಗೆ ಮುಖವನ್ನು ತೇವಾಂಶಭರಿತವಾಗಿ ಇರಿಸುತ್ತದೆ.
ಒಣ ತ್ವಚೆಯ ಸಮಸ್ಯೆಗೆ ಜೇನುತುಪ್ಪ ಮತ್ತು ನಿಂಬೆ ಬಳಸಬಹುದು. ನಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕ ಗುಣ ಚರ್ಮದಲ್ಲಿ ಕಾಲಜಿನ್ ಅಂಶವನ್ನು ಉತ್ತೇಜಿಸುತ್ತದೆ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಜೇನುತುಪ್ಪವು ಚರ್ಮವನ್ನು ತೇವಗೊಳಿಸುತ್ತದೆ. ಇವೆರಡರ ಪೇಸ್ಟ್ ನ್ನು ಮುಖಕ್ಕೆ ಹಚ್ಚುವುರಿಂದ ಚರ್ಮದಲ್ಲಿ ಕಾಣಿಸಿಕೊಳ್ಳುವ ಸುಕ್ಕುಗಳನ್ನು ಕೂಡಾ ನಿವಾರಣೆ ಮಾಡಬಹುದಾಗಿದೆ.
ಈ ಎರಡೂ ವಸ್ತುಗಳು ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಮೊಡವೆಗಳ ಕಲೆ ಗುರುತುಗಳನ್ನು ಕಡಿಮೆ ಮಾಡಲು ಕೂಡ ಸಹಕಾರಿಯಾಗಿದೆ. ಒಟ್ಟಿನಲ್ಲಿ ಇವೆರಡರಲ್ಲೂ ಔಷಧೀಯ ಗುಣವಿದೆ ಎಂದು ಹೇಳಬಹುದು.