ದಿನವಿಡೀ ಕೆಲಸ ಮಾಡಿ ಸುಸ್ಥಾದರೆ ರಾತ್ರಿ ಮಾಡುವ ನಿದ್ದೆಯಿಂದ ದೇಹ ಮತ್ತು ಮನಸ್ಸು ಎರಡಕ್ಕೂ ರಿಲ್ಯಾಕ್ಸ್ ಸಿಗುತ್ತದೆ. ಈ ಕಾರಣದಿಂದಲೇ ರಾತ್ರಿ ನಿದ್ದೆ ಪ್ರತಿಯೊಬ್ಬನಿಗೂ ಬಹಳ ಮುಖ್ಯವಾಗಿರುತ್ತದೆ.
ಒಬ್ಬ ಆರೋಗ್ಯವಂತ ಮನುಷ್ಯ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ಹೆಚ್ಚಿನ ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಕೆಲವರಿಗೆ ರಾತ್ರಿ ಪದೇ ಪದೇ ಎಚ್ಚರವಾಗುತ್ತಿರುತ್ತದೆ. ರಾತ್ರಿ ಗಾಢ ನಿದ್ದೆ ಕೂಡ ಸರಿಯಾಗಿ ಬರುವುದಿಲ್ಲ. ಒಮ್ಮೆ ಎಚ್ಚರವಾದರೆ ಮತ್ತೆ ನಿದ್ದೆ ಬರುವುದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಮತ್ತೆ ನಿದ್ದೆ ಬರುವುದಿಲ್ಲ. ಹಾಗಿದ್ದರೆ ಈ ಸಮಸ್ಯೆಯನ್ನು ಹೇಗೆ ತಪ್ಪಿಸಬಹುದು ಎಂಬುದೆ ಎಲ್ಲರಿಗೂ ತಿಳಿಯದಾಗಿದೆ.
ಸಾಮಾನ್ಯವಾಗಿ ರಾತ್ರಿ ನಿದ್ದೆ ಬರುವುದಿಲ್ಲ. ಪದೇ ಪದೇ ಎಚ್ಚರವಾಗುತ್ತದೆ ಎನ್ನುವ ಮಾತನ್ನು ಜನ ಹೇಳುತ್ತಿರುವುದನ್ನು ಕೇಳುತ್ತೇವೆ. ಆದರೆ, ಇದಕ್ಕೆ ಏನು ಕಾರಣ ಎನ್ನುವುದನ್ನು ಮಾತ್ರ ಹುಡುಕುವ ಗೋಜಿಗೆ ಹೋಗುವುದಿಲ್ಲ. ರಾತ್ರಿ ಹೀಗೆ ಅಚಾನಕಾಗಿ ನಿದ್ದೆಯಿಂದ ಎಚ್ಚರಗೊಳ್ಳುವುದು, ಮತ್ತೆ ನಿದ್ದೆ ಬಾರದಿರುವುದು ಈ ಸಮಸ್ಯೆಗೆ ನಾವು ಸೇವಿಸುವ ಆಹಾರವೇ ಕಾರಣವಾಗಿರುತ್ತದೆ. ರಾತ್ರಿ ನೆಮ್ಮದಿಯ ನಿದ್ದೆಗೆ ಜಾರಲು ಮಾತು ಗಾಢ ನಿದ್ದೆ ಆನಂದಿಸಲು ಕೆಲವು ರೀತಿಯ ಕಾಳಜಿ ವಹಿಸಿದರೆ ಸರಿಯಾದ ನಿದ್ರೆಯನ್ನು ಮಾಡಬಹುದು.
ರಾತ್ರಿ ಮಲಗುವ ಸಮಯದಲ್ಲಿ, ಕಾರ್ಬೋಹೈಡ್ರೇಟ್ಗಳು ಸಮೃದ್ಧವಾಗಿರುವಂತಹ ಯಾವುದೇ ಆಹಾರವನ್ನು ಸೇವಿಸಬಾರದು. ಅನ್ನ, ಚಿಪ್ಸ್, ಆಲೂಗಡ್ಡೆ, ಬಾಳೆಹಣ್ಣು, ಪಾಸ್ಟಾ ಮುಂತಾದ ಆಹಾರವನ್ನು ರಾತ್ರಿ ಹೊತ್ತು ಸೇವಿಸಬಾರದು. ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕವಾಗಿರುವ ಆಹಾರ ಪದಾರ್ಥಗಳು ನಿದ್ರೆಗೆ ಅಡ್ಡಿಯುಂಟು ಮಾಡುತ್ತದೆ. ರಾತ್ರಿ ವೇಳೆ ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕವಾಗಿರುವ ಆಹಾರ ಸೇವಿಸಿದರೆ ಪದೇ ಪದೇ ಎಚ್ಚರವಾಗುತ್ತಿರುತ್ತದೆ ಎಂದೂ ಸಂಶೋಧನೆ ಪ್ರಕಾರ ಹೇಳಲಾಗುತ್ತದೆ.
ನಮ್ಮಲ್ಲಿ ಅನೇಕ ಮಂದಿ ಚಹಾ ಮತ್ತು ಕಾಫಿಯನ್ನು ಪದೇ ಪದೇ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಆದರೆ ಈ ಹವ್ಯಾಸವೇ ನಿಮ್ಮ ನಿದ್ರೆಗೆ ಭಂಗ ತರಬಹುದು. ಏಕೆಂದರೆ ಚಾ ಮತ್ತು ಕಾಫಿಯಲ್ಲಿ ಕೆಫೀನ್ ಪ್ರಮಾಣ ಅಧಿಕವಾಗಿರುತ್ತದೆ. ಇದು ರಾತ್ರಿಯ ಗಾಢ ನಿದ್ದೆಗೆ ಅಡ್ಡಿಯುಂಟು ಮಾಡುತ್ತದೆ. ಹೀಗಾಗಿ ಮಲಗುವುದಕ್ಕಿಂತ ಕನಿಷ್ಠ 2-3 ಗಂಟೆಗಳ ಮೊದಲು ಚಹಾ ಅಥವಾ ಕಾಫಿ ಕುಡಿಯಬಾರದು.
ಈ ಜಂಜಾಟದ ಬದುಕಿನಲ್ಲಿ ಪ್ರತಿ ಕ್ಷಣವೂ ಒತ್ತಡವೇ. ಟೆನ್ಷನ್ ಇಲ್ಲದೆ ಬದುಕುವುದು ಸಾಧ್ಯವೇ ಇಲ್ಲ. ಹಾಗಂತ ಪ್ರತಿಯೊಂದು ವಿಷಯದಲ್ಲಿಯೂ ಒತ್ತಡ ತೆಗೆದುಕೊಂಡರೆ, ಒತ್ತಡ ನಿಮ್ಮ ಮನಸನ್ನು ಹಾಳುಮಾಡುತ್ತದೆ. ಅಲ್ಲದೆ ಟೆನ್ ಶನ್ ಹೆಚ್ಚಾದಾಗ ಅದರಿಂದ ಮಾನಸಿಕ ಆರೋಗ್ಯದ ಮೇಲೆ ಕೂಡಾ ಪರಿಣಾಮ ಉಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ಯಾವುದೇ ಒತ್ತಡ ಉಂಟಾದರೂ ಕೂಡ ಅದನ್ನು ತಾಳ್ಮೆಯಿಂದ ಪರಿಹರಿಸಿಕೊಂಡು ತಮ್ಮ ಆರಸೆಹಿಸಿಕೊಂಡು ಖುಷಿಖುಷಿಯಾಗಿ ಬದುಕಲು ಪ್ರಯತ್ನಪಟ್ಟರೆ ನಮಗೆ ಉತ್ತಮ ನಿದ್ರೆ ಕೂಡ ಬರುತ್ತದೆ.