ಈ ಸಲದ ಅಧಿಕಮಾಸವು ಜುಲೈ 18, 2023 ರಂದು ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 16, 2023 ರವರೆಗೆ ಇರುತ್ತದೆ ಎನ್ನಲಾಗಿದೆ.
ಈ ಅವಧಿಯನ್ನು ಭಗವಾನ್ ವಿಷ್ಣುವಿನ ಭಕ್ತಿಯ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಶಿವನನ್ನು ಹೆಚ್ಚಿನ ಜನರು ಪೂಜಿಸುತ್ತಾರೆ.
ಸೌರ ವರ್ಷದಲ್ಲಿ 365 ದಿನಗಳು ಮತ್ತು 6 ಗಂಟೆಗಳಿವೆ. ಅದೇ ಚಂದ್ರವರ್ಷದಲ್ಲಿ 354 ದಿನಗಳಿರುತ್ತವೆ. ಎರಡು ವರ್ಷಗಳ ನಡುವೆ, ಸುಮಾರು 11 ಹೆಚ್ಚುವರಿ ದಿನಗಳಿವೆ.
ಆದ್ದರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಮಾಸ ಬರುತ್ತದೆ. ಹಾಗಾಗಿ ಪ್ರತಿ ಮೂರು ವರ್ಷದಲ್ಲಿ ಒಮ್ಮೆ ಚಂದ್ರಮಾಸ ಬರುತ್ತದೆ. ಅದು ಹೆಚ್ಚುವರಿಯಾಗಿರುವುದಿಂದ ಅದನ್ನು ಅಧಿಕ ಮಾಸ ಎಂದು ಕರೆಯಲಾಗುತ್ತದೆ.
ಅಧಿಕ ಮಾಸದಲ್ಲಿ ಈ ಕೆಲಸಗಳನ್ನು ಮಾಡುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ.
ಮದುವೆಗೆ ಅವಕಾಶವಿಲ್ಲ: ಅಧಿಕ ಮಾಸದಲ್ಲಿ ಕೆಲವೊಂದು ಶಾಸ್ತ್ರೋಕ್ತ ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಅಧಿಕ ಮಾಸದಲ್ಲಿ ಮದುವೆಗೆ ಆಗುವುದು ಸರಿಅಲ್ಲ.
ವ್ಯವಹಾರಕ್ಕೂ ಒಳ್ಳೆಯದಲ್ಲ: ವ್ಯಾಪಾರ ವ್ಯವಹಾರಕ್ಕೂ ಅಧಿಕ ಮಾಸ ಒಳ್ಳೆಯದಲ್ಲ ಎನ್ನಲಾಗುತ್ತದೆ. ಹಾಗಾಗಿ ಆಗಸ್ಟ್ ತಿಂಗಳಲ್ಲಿ ಹೊಸ ಅಂಗಡಿ ಅಥವಾ ಕೆಲಸದ ಸ್ಥಳವನ್ನು ತೆರೆಯಲು ಮುಂದಾಗಬೇಡಿ.
ಆಸ್ತಿ ಖರೀದಿ ಬೇಡ: ಈ ಸಮಯದಲ್ಲಿ ಹೊಸ ಮನೆಗಳ ನಿರ್ಮಾಣ ಮತ್ತು ಆಸ್ತಿ ಖರೀದಿಗಳು ಅಮಂಗಳಕರವೆಂದು ಹೇಳಲಾಗುತ್ತದೆ.
ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹಿಂದೂ ಧರ್ಮದಲ್ಲಿ ಹೇಳಲಾಗುತ್ತದೆ.