ನಟಿ ಕಂಗನಾ ರಣಾವತ್ ಅವರ ಮುಂಬರುವ ಚಿತ್ರ ‘ತೇಜಸ್’ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಿದೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಪೋಸ್ಟರ್ ಜೊತೆಗೆ ರಿಲೀಸ್ ಡೇಟ್ ಹಂಚಿಕೊಂಡಿದ್ದಾರೆ.
ಕಂಗನಾ ರಣಾವತ್ ಈ ವರ್ಷ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕಂಗನಾ ‘ಟಿಕು ವೆಡ್ಸ್ ಶೇರು’ ಸಿನಿಮಾದ ಮೂಲಕ ಸುದ್ದಿಯಲ್ಲಿದ್ದರು.
ಇದೀಗ ನಟಿ ತಮ್ಮ ಮುಂಬರುವ ಚಿತ್ರದ ಬಿಡುಗಡೆ ದಿನಾಂಕವನ್ನು ಹೇಳಿಕೊಂಡಿದ್ದಾರೆ. ಕಂಗನಾ ರಣಾವತ್ ಅವರ ಮುಂಬರುವ ಚಿತ್ರ ‘ತೇಜಸ್’ ಸಿನಿಮಾದಲ್ಲಿ ತಮ್ಮ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕೂಡ ಹೇಳಿದ್ದಾರೆ. ಕಂಗನಾ ಅಭಿನಯದ ‘ತೇಜಸ್’ ಈ ವರ್ಷ ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ.
ಕಂಗನಾ ಚಿತ್ರದ ಕೆಲವು ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡ ಇವರು ಈ ಫೋಟೋಗಳಲ್ಲಿ ಅವರು ವಾಯುಪಡೆಯ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಅಕ್ಟೋಬರ್ 20 ರಂದು ಚಿತ್ರಮಂದಿರಗಳಿಗೆ ಬರಲಿದೆ. ರೋನಿ ಸ್ಕ್ರೂವಾಲಾ ಅವರ ತೇಜಸ್ ಕಥೆಯು ವಾಯುಪಡೆಯ ಪೈಲಟ್ ತೇಜಸ್ ಗಿಲ್ ಅವರ ಜೀವನ ಚರಿತ್ರೆಯನ್ನು ಈ ಸಿನಿಮಾ ಒಳಗೊಂಡಿದೆ.
ಪೈಲಟ್ ಅವತಾರದಲ್ಲಿ ಕಂಗಾನನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟನೆಯಲ್ಲಿ ಮಾಸ್ಟರ್ ಆಗಿರುವ ಕಂಗನಾ ಅಭಿನಯ ನೋಡಲು ಅಭಿಮಾನಿಗಳು ಅಷ್ಟೇ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.