ಯಾರನ್ನು ಕೇಳಿದರು ನಮ್ಮ ಕೂದಲು ಅತಿಯಾಗಿ ಉದುರುವ ಬಗ್ಗೆ ಹೇಳಿಕೊಳ್ಳುತ್ತಾರೆ. ಕೂದಲು ಉದುರುವುದು ಮತ್ತು ದುರ್ಬಲಗೊಳ್ಳುವುದು ಇಂದಿನ ಸಾಮಾನ್ಯ ಸಮಸ್ಯೆಯಾಗಿದೆ. ಏಕೆಂದರೆ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಎಲ್ಲವೂ ರಾಸಾಯನಿಕಗಳಿಂದ ಕೂಡಿದೆ. ಈ ಕಾರಣದಿಂದಾಗಿ, ಕ್ರಮೇಣ ನಿಮ್ಮ ಕೂದಲು ಹಾಳಾಗಲು, ಉದುರಲು ಮತ್ತು ಹಾನಿಗೊಳಗಾಗಲು ಪ್ರಾರಂಭಿಸುತ್ತದೆ.
ಈ ರೀತಿಯಾದ ರಾಸಾಯನಿಕ ಪದಾರ್ಥಗಳಿಂದ ಕೂಡಿದ ಶಾಂಪೋ, ಸೋಪ್ ಗಳನ್ನು ಬಳಸುವ ಬದಲು ಮನೆಯಲ್ಲಿಯೇ ಕೆಲವು ಪದಾರ್ಥಗಳಿಂದ ತಯಾರಿಸುವಂತಹ ಹರ್ಬಲ್ ಶಾಂಪೂ ಉಪಯೋಗಿಸುವುದರಿಂದ ನಮ್ಮ ಕೂದಲನ್ನು ಸಮೃದ್ಧಿಯಾಗಿ ಬೆಳೆಯುವಂತೆ ನೋಡಿಕೊಳ್ಳಬಹುದು.
ಮನೆಯಲ್ಲಿಯೇ ತಯಾರಿಸಬಹುದಾದ ಹರ್ಬಲ್ ಶಾಂಪೂ ಒಂದರ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ಅದನ್ನು ಬಳಸುವುದರಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ. ಗಿಡಮೂಲಿಕೆ ಶಾಂಪೂ ನಿಮ್ಮ ಕೂದಲನ್ನು ಉದ್ದ, ದಪ್ಪ ಮತ್ತು ಬಲವಾಗಿಸಲು ಸಹಾಯ ಮಾಡುತ್ತದೆ. ನಿಮ್ಮ ಸಾಮಾನ್ಯ ಶಾಂಪೂ ಬದಲಿಗೆ ಮನೆಯಲ್ಲಿ ತಯಾರಿಸಿದ ಗಿಡಮೂಲಿಕೆಗಳ ಶಾಂಪೂವನ್ನು ನೀವು ಬಳಸಿದರೆ, ಅದು ನಿಮ್ಮ ತಲೆಯನ್ನು ಆಂತರಿಕವಾಗಿ ಸ್ವಚ್ಛಗೊಳಿಸುತ್ತದೆ ಜೊತೆಗೆ ಬುಡದಿಂದಲೇ ಬಿಳಿಕೂದಲನ್ನು ಬರುವುದನ್ನು ತಪ್ಪಿಸಿ ಕಪ್ಪಾಗಿ ಬರುವ ಹಾಗೆ ನೋಡಿಕೊಳ್ಳುತ್ತದೆ.
ದಪ್ಪ ಕೂದಲಿಗೆ ಹರ್ಬಲ್ ಶಾಂಪೂ ಮಾಡಲು ಬೇಕಾಗುವ ಸಾಮಗ್ರಿಗಳು-
ಅಂಟುವಾಳ ಕಾಯಿ
ನೆಲ್ಲಿಕಾಯಿ
ಶಿಖಾಕಾಯಿ
ದಾಸವಾಳ ಎಲೆಗಳು
ತುಳಸಿ ಎಲೆಗಳು
ಅಲೋವೆರಾ
ಈ ಹರ್ಬಲ್ ಶಾಂಪೂ ಮಾಡುವುದು ಹೇಗೆ?
ಹರ್ಬಲ್ ಶಾಂಪೂ ತಯಾರಿಸಲು, ಮೊದಲು ಶಿಖಾಕಾಯಿ, ಅಂಟುವಾಳ ಕಾಯಿ ಮತ್ತು ನೆಲ್ಲಿಕಾಯಿಯನ್ನು ತೆಗೆದುಕೊಂಡು ಅದನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಅವುಗಳನ್ನು ನೀರಿನೊಂದಿಗೆ ಬಾಣಲೆಯಲ್ಲಿ ಹಾಕಿ, ಕುದಿಸಿ. ಬಳಿಕ ತಣ್ಣಗಾಗಲು ಬಿಡಿ. ಇದಾದ ನಂತರ ಆ ನೀರಲ್ಲಿ ಇರುವ ಅಂಟುವಾಳಕಾಯಿಯನ್ನು ಚೆನ್ನಾಗಿ ಹಿಸುಕಿದರೆ ಅದರಲ್ಲಿರುವ ಸೋಪಿನ ಅಂಶ ಹೊರಬಿಡುತ್ತದೆ. ಇದರ ನಂತರ, ಈ ಎಲ್ಲಾ ವಸ್ತುಗಳನ್ನು ಒಟ್ಟಿಗೆ ಬ್ಲೆಂಡರ್ನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಅದನ್ನು ಚೆನ್ನಾಗಿ ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ತೆಗೆದುಕೊಂಡು ತಲೆ ಸ್ನಾನ ಮಾಡುವಾಗ ಇದನ್ನು ಉಪಯೋಗಿಸಿದರೆ ನಿಮ್ಮ ಕೂದಲು ಹೇರಳವಾಗಿ ಬೆಳೆಯುತ್ತದೆ.
ನಿಮ್ಮ ಸಾಮಾನ್ಯ ಶಾಂಪೂ ಬದಲಿಗೆ ಈ ಸಿದ್ಧಪಡಿಸಿದ ಶಾಂಪೂವನ್ನು ಬಳಸಿ. ಇದು ನಿಮ್ಮ ನೆತ್ತಿಯನ್ನು ಶುದ್ಧೀಕರಿಸುವುದಲ್ಲದೆ, ಕೂದಲು ಕ್ರಮೇಣ ದಪ್ಪವಾಗಲು ಪ್ರಾರಂಭಿಸುವಲ್ಲಿ ಸಹಾಯ ಮಾಡುತ್ತದೆ.