ದಿನದ 24 ಗಂಟೆಗಳು ಕೂಡ ದಣಿವಿಲ್ಲದೆ ಕಾರ್ಯ ನಿರ್ವಹಿಸುತ್ತದೆ.ನಮ್ಮ ದೇಹದ ಪ್ರಮುಖ ಅಂಗಾಂಗಳಲ್ಲಿ ಒಂದಾದ ಲಿವರ್ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ದೇಹದ ಲಿವರ್ನಲ್ಲಿ ಸಮಸ್ಯೆಗಳು ಕಂಡು ಬಂದರೆ, ಪ್ರಾಣಕ್ಕೆ ಆಪತ್ತು ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ.
ನಮಗೆಲ್ಲಾ ಗೊತ್ತೇ ಇರುವ ಹಾಗೆ, ದೇಹದ ಒಳಭಾಗ ದಲ್ಲಿ ಕಂಡುಬರುವ ಪ್ರಮುಖ ಅಂಗಾಂಗಗಳು, ನೇರವಾಗಿ ನಮ್ಮ ಕಣ್ಣಿಗೆ ಕಾಣಿಸದೆ ಇರುವುದರಿಂದ, ಇವುಗಳಲ್ಲಿ ಕಂಡುಬರುವ ಸಮಸ್ಯೆಗಳನ್ನು ಸುಲಭವಾಗಿ ಪತ್ತೆಹಚ್ಚುವುದು ಸಾಧ್ಯವಿಲ್ಲ.
ಹೀಗಾಗಿ ಇಂತಹ ಅಂಗಾಂಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ. ಇದರಲ್ಲಿ ಪ್ರಮುಖ ವಾಗಿ ನಮ್ಮ ದೇಹದ ಅತ್ಯಂತ ದೊಡ್ಡದಾದ ಅಂಗ ಎಂದು ಕರೆಯಲಾಗುವ ಲಿವರ್ ಆರೋಗ್ಯಕ್ಕೆ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳಬೇಕು.
ಹೀಗಾಗಿ ಇದಕ್ಕೆ ಹೊಂದಿಕೆ ಆಗಬಲ್ಲ ಕೆಲವೊಂದು ನೈಸರ್ಗಿಕ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮವಾಗಿದೆ.
ಹಸಿರೆಲೆ ತರಕಾರಿಗಳು
ಹಸಿರೆಲೆ ತರಕಾರಿಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇವು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ.
ಪ್ರಮುಖವಾಗಿ ನಮ್ಮ ದೇಹದ ಪ್ರಮುಖ ಅಂಗವಾದ ಲಿವರ್ ಅಥವಾ ಯಕೃತ್ ಭಾಗವನ್ನು ಆರೋಗ್ಯಕರ ವಾಗಿ ಕಾಪಾಡುತ್ತವೆ. ಉದಾಹರಣೆಗೆ ಎಲೆಕೋಸು, ಬ್ರೊಕೋಲಿ, ಕ್ಯಾರೆಟ್, ಬಸಳೆ, ಹರಿವೆ, ಪಾಲಕ್ ಸೊಪ್ಪು ಇತ್ಯಾದಿಗಳು ಎಂದು ಹೇಳಬಹುದು.
ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸಿ
ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಹಸಿ ಬೆಳ್ಳುಳ್ಳಿ, ಜಗಿದು ತಿಂದರೆ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ ಎಂದು ಹೇಳಲಾ ಗುತ್ತದೆ. ಅಂತೆಯೇ ದೈನಂದಿನ ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸಿದರೆ, ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡಿ, ದೇಹದ ಲಿವರ್ ಭಾಗ ಹಾಳಾಗದಂತೆ ನೋಡಿ ಕೊಳ್ಳುತ್ತದೆ.
ಬೆರ್ರಿ ಹಣ್ಣುಗಳು
ಆಂಟಿ ಆಕ್ಸಿಡೆಂಟ್ ಅಂಶಗಳು ಯಥೇಚ್ಛವಾಗಿ ಕಂಡು ಬರುವ ಬೆರ್ರಿ ಹಣ್ಣುಗಳು, ದೇಹದ ಲಿವರ್ ಆರೋಗ್ಯವನ್ನು ವೃದ್ಧಿಸಲು ನೆರವಾಗುತ್ತವೆ.
ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಹಣ್ಣುಗಳು
ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಹಣ್ಣುಗಳಾದ ಮೂಸಂಬಿ, ಕಿತ್ತಳೆ, ಅನಾನಸ್, ಸೀಬೆಹಣ್ಣು, ಸ್ಟ್ರಾಬೆರಿ ಹಣ್ಣುಗಳು, ಹಾಗೂ ಪಪ್ಪಾಯಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ, ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಜೀರಿಗೆ ಕಾಳುಗಳು
ನೋಡಲು ಪುಟ್ಟದಾಗಿ ಕಾಣುವ ಜೀರಿಗೆ ಕಾಳುಗಳು, ಲಿವರ್ ಆರೋಗ್ಯವನ್ನು ಕಾಪಾಡಲು ಸಹಾಯಕ್ಕೆ ಬರುತ್ತವೆ.
ಇದಕ್ಕಾಗಿ ದಿನಾ ಒಂದು ಲೋಟ ಜೀರಿಗೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಹಾಗೂ ದೈನಂದಿನ ಆಹಾರ ಪದಾರ್ಥಗಳಲ್ಲಿ ಜೀರಿಗೆಯನ್ನು ಬಳಸಲು ಮರೆಯದಿರಿ.
ಬೀಟ್ರೂಟ್ ಸೇವನೆ ಮಾಡಿ
ನೋಡಲು ರಕ್ತದ ಬಣ್ಣದಲ್ಲಿ ಕಾಣುವ ಬೀಟ್ರೂಟ್, ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖವಾಗಿ ಯಕೃತ್ತು ಭಾಗದಲ್ಲಿ ಕಂಡುಬರುವ ಉರಿಯೂತವನ್ನು ಕಡಿಮೆ ಮಾಡಿ, ದೇಹದಲ್ಲಿ ಶೇಖರಣೆಗೊಂಡಿರುವ, ವಿಷತ್ಯಾಜ್ಯಗಳನ್ನು ಹೋಗಲಾಡಿಸುತ್ತದೆ.
ನೆನೆಸಿಟ್ಟ ಬಾದಾಮಿ ಸೇವಿಸಿ
ಲಿವರ್ ಆರೋಗ್ಯಕ್ಕೆ ಡ್ರೈಫ್ರೂಟ್ಸ್ ಸೇವನೆ ಆರೋಗ್ಯಕರ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಗೆ ಸುಮಾರು ಮೂರು-ನಾಲ್ಕು ನೆನೆಸಿಟ್ಟ ಬಾದಾಮಿ ಬೀಜಗಳನ್ನು ಸಿಪ್ಪೆ ತೆಗೆದು ತಿನ್ನುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.