ಭಾರತದ ಕರ್ನಾಟಕ ರಾಜ್ಯದಲ್ಲಿ ಉಡುಪಿ ಜಿಲ್ಲೆ ಇದ್ದು ಇಲ್ಲಿನ ಸುಂದರವಾದ ದೃಶ್ಯಗಳು ಜನಪ್ರಿಯವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಆದಾಗ್ಯೂ, ಪಾಂಚಜನ್ಯ ನೌಕಾಯಾನ ವಿಹಾರ ನೀಡುವ ಅಸಾಧಾರಣವಾದ ಅನುಭವದ ಬಗ್ಗೆ ಅನೇಕ ಜನರಿಗೆ ಇನ್ನು ತಿಳಿದಿಲ್ಲ. ಪಾಂಚಜನ್ಯ ಕ್ರೂಸ್ ಸುತ್ತಲೂ ನೀರು, ಹಚ್ಚ ಹಸಿರಿನ ಮರಗಳು ಮತ್ತು ಎಂದಿಗೂ ಕೊನೆಕಾಣದ ನೀಲಿ ಆಕಾಶ, ಬೋಟ್ ರೈಡಿಂಗ್ ಉಡುಪಿ ಜಿಲ್ಲೆಯ ಪ್ರವಾಸದ ಅನುಭವಕ್ಕೆ ಅದ್ಭುತ ಸೇರ್ಪಡೆಯಾಗಿದೆ.
ಬೋಟ್ಹೌಸ್ ಹೋಗಬೇಕು ಎನಿಸಿದರೆ ಉಡುಪಿಗೆ ಹೋದರೆ ಸಾಕು ಬೋಟ್ಹೌಸ್ನ ರೋಮಾಂಚಕ ಅನುಭವವನ್ನು ಪಡೆಯಬಹುದು. ಸಂಗಾತಿಯೊಂದಿಗೆ ಪ್ರಶಾಂತವಾದ ಕಡಲತೀರದಲ್ಲಿ ವಾಸ್ತವ್ಯ ಹೂಡಬಹುದು. ನಕ್ಷತ್ರಪುಂಜಗಳ ಮಧ್ಯೆ ಮಗುವಿನಂತೆ ನಿದ್ರಿಸಬಹುದು. ಬೋಟ್ಹೌಸ್ ಕೋಡಿ ಬೆಂಗ್ರೆ ಕಡಲತೀರದ ಮೂಲಕ ಡೆಲ್ಟಾ ಬೀಚ್ ನ್ನು ಸುತ್ತಿಸಿ ಕರೆತರಲಾಗುತ್ತದೆ. ತುಂಬಾ ಹೆಸರುವಾಸಿಯಾಗಿರುವ ಈ ಕಡಲತೀರವು ಅತ್ಯಂತ ರಮಣೀಯವಾಗಿದೆ. ಇನ್ನು, ಪ್ರವಾಸಿಗರು ಹತ್ತಿರದ ಮ್ಯಾಂಗ್ರೋವ್ಗಳಿಗೆ ದೋಣಿ ವಿಹಾರಗಳನ್ನು ಕೂಡ ಮಾಡಬಹುದು.
ಮುಳುಗುವ ಮರಳನ್ನು ಹೊಂದಿರುವ ಕಾರಣ ಕಡಲತೀರದಲ್ಲಿ ಈಜಲು ಬಿಡುವುದಿಲ್ಲ. ಆದರೆ ಕಲಡತೀರದ ಅದ್ಭುತವಾದ ಸೂರ್ಯಾಸ್ತದ ದೃಶ್ಯವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬಾರದು ಎಂದು ವಿಹಾರ ಮಾಡಿ ಬಂದವರು ಹೇಳುತ್ತಾರೆ.
ನೀವು ಉಡುಪಿ ಬೋಟ್ಹೌಸ್ನ ಅನುಭವವನ್ನು ಪಡೆಯಲು ಪ್ಯಾಕೇಜ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಸಾಕಷ್ಟು ಪ್ಯಾಕೇಜ್ಗಳಿವೆ. ಹಗಲಿನ ಪ್ಯಾಕೇಜ್, ರಾತ್ರಿಯ ಪ್ಯಾಕೇಜ್ ಅಥವಾ ಒಂದು ದಿನದ ಪ್ಯಾಕೇಜ್ ಇನ್ನು ಹೆಚ್ಚಿನವು. ಅವುಗಳಲ್ಲಿ ನಿಮ್ಮ ಅಗತ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು ನೀವು ಬುಕ್ಕಿಂಗ್ ಸಹ ಮಾಡಬಹುದು.
ಈ ಕೋಡಿ ಬೆಂಗ್ರೆ ಉಡುಪಿಯಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಅಲ್ಲಿಂದ ಈ ಬೋಟ್ ಹೌಸ್ ಪ್ರಾರಂಭವಾಗುತ್ತದೆ. ಆದಷ್ಟು ನೀವು ಅಕ್ಟೋಬರ್ ಇಂದ ಏಪ್ರಿಲ್ ವರೆಗಿನ ಸಮಯದಲ್ಲಿ ಬೋಟ್ಹೌಸ್ ಪ್ಲಾನಿಂಗ್ ಮಾಡುವುದು ಒಳ್ಳೆಯದು. ಇಲ್ಲಿನ ಬೋಟ್ಹೌಸ್ಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದ ಕಾರಣ ನೀವು ಮೊದಲೇ ಬುಕ್ ಮಾಡಬೇಕಾಗುತ್ತದೆ.
ಇಡೀ ರಾತ್ರಿಯೆಲ್ಲಾ ಉಡುಪಿಯ ಬೋಟ್ಹೌಸ್ನಲ್ಲಿ ಕಳೆಯುವ ಅಗತ್ಯವಿಲ್ಲ. ಅಲ್ಪಾವಧಿಗೆ ನೀವು ಹೌಸ್ಬೋಟ್ನ ರೋಮಾಂಚಕ ಅನುಭವ ಪಡೆಯಬಹುದು. ಅಲ್ಲದೆ, ಕೇರಳ ಬೋಟ್ ಹೌಸ್ ಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಅಗ್ಗ ಎಂದೇ ಹೇಳಲಾಗುತ್ತದೆ. ಪ್ಯಾಕೇಜ್ನ ಪ್ರಕಾರ ನೀವು ಹೋದರೆ ಬೆಳಗಿನ ಉಪಹಾರ, ಸ್ನಾಕ್ಸ್, ಪಾನೀಯಗಳನ್ನು ಪಡೆಯುತ್ತಿರಿ. ನೀವು ಬೋಟ್ಹೌಸ್ನಲ್ಲಿ ಚಲಿಸುವಾಗ ಸುತ್ತಮುತ್ತಲಿನ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.
ಬೋಟ್ಹೌಸ್ನ ಅನುಭವ ನಿಜಕ್ಕೂ ಸಖತ್ ಮಜಾ ನೀಡುತ್ತದೆ. ಕುಟುಂಬ ಅಥವಾ ಸಂಗಾತಿಯೊಂದಿಗೆ ಹೋದರೆ ವಿಭಿನ್ನ ಅನುಭವವನ್ನು ಅನುಭವಿಸಬಹುದು.
ಅಲ್ಲದೆ, ಬೋಟ್ಹೌಸ್ ಅನ್ನು ನೀವು ಚಲಿಸಬಹುದು ಅಥವಾ ಫಿಶಿಂಗ್ನಂತಹ ಚಟುವಟಿಕೆಗಳನ್ನು ಇಲ್ಲಿ ಕಲೆಯಬಹುದಾಗಿದೆ. ಒಟ್ಟಿನಲ್ಲಿ ಒಮ್ಮೆ ಬೋಟ್ ಹೌಸ್ ನ ಅನುಭವ ಪಡೆಯಿರಿ.