ಹೆಚ್ ಡಿ ಎಫ್ ಸಿ ಬ್ಯಾಂಕಿನ ಹಿರಿಯ ಉದ್ಯೋಗಿ ತನ್ನ ಸಹೋದ್ಯೋಗಿಗಳನ್ನು ನಿಂದಿಸಿರುವ ಆರೋಪದ ಮೇಲೆ ಆತನನ್ನು ಅಮಾನತುಗೊಳಿಸಲಾಗಿದೆ.
ಹೌದು, ಪುಷ್ಪಲ್ ರಾಯ್ ಅಮಾನತುಗೊಂಡ ಉದ್ಯೋಗಿ. ರಾಯ್ ಸಹೋದ್ಯೋಗಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ವೇಳೆ ಮನಬಂದಂತೆ ಮಾತನಾಡಿ ಎಲ್ಲರನ್ನು ನಿಂದಿಸಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಚ್ ಡಿ ಎಫ್ ಸಿ ಕೊಲ್ಕತ್ತಾ ಬ್ರ್ಯಾಂಚಿನ ಕ್ಲಸ್ಟರ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವೀಡಿಯೊದಲ್ಲಿ, ರಾಯ್ ತಮ್ಮ ಸಹೋದ್ಯೋಗಿಗಳ ಮೇಲೆ ಕಿರುಚುವುದನ್ನು ಕಾಣಬಹುದು. ಮೀಟಿಂಗ್ ನಲ್ಲಿ ಇತರೆ ಉದ್ಯೋಗಿಗಳು ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ವಿಮಾ ಪಾಲಿಸಿಗಳನ್ನು ಮಾರಾಟ ಮಾಡದಿದ್ದಕ್ಕಾಗಿ ಅಧಿಕಾರಿ ತನ್ನ ಸಹೋದ್ಯೋಗಿಗಳಿಗೆ ಬಂಗಾಳಿ ಭಾಷೆಯಲ್ಲಿ ಕೂಗುತ್ತಿರುವುದು ಕೇಳಿಸುತ್ತದೆ.
ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹರಿಬಿಟ್ಟಿದ್ದು, ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ನೆಟ್ಟಿಗರು ಹಿರಿಯ ಉದ್ಯೋಗಿಯನ್ನು ಕಮೆಂಟ್ ಸೆಕ್ಷನ್ ನಲ್ಲಿ ತರಾಟೆಗೆ ತೆಗದುಕೊಂಡಿದ್ದಾರೆ.
https://twitter.com/Akshat_World/status/1665667662532456449?s=20