ಆಹಾರ ಉದ್ಯಮದಲ್ಲಿ ಹೊಸ ಹೊಸ ಅನ್ವೇಷಣೆಗಳೂ ನಡಿಯುತ್ತಲೇ ಇರುತ್ತವೆ. ದೊಡ್ಡ ದೊಡ್ಡ ಹೊಟೇಲ್ ಉದ್ಯಮದವರು ಇದಕ್ಕೆ ಹೆಚ್ಚಿನ ಪ್ರೋತ್ಸಹವನ್ನು ನೀಡುತ್ತಿರುತ್ತಾರೆ. ಇದು ಒಂದು ಉದ್ದೇಶಿತ ಯೋಜನೆಯಾಗಿರುತ್ತದೆ.
ದಕ್ಷಿಣ ಭಾರತದ ದೋಸೆ ಯಾರಿಗೆ ಗೊತ್ತಿಲ್ಲ ಹೇಳಿ. ತುಂಬಾನೇ ವೆರೈಟಿ ಇರುವ ಆಹಾರ ತಿಂಡಿಯಾಗಿದೆ. ನೀರು ದೋಸೆ, ಸೆಟ್ ದೋಸೆ, ರವಾ ದೋಸೆ, ಪ್ಲೇಯಿನ್ ದೋಸೆ, ಈರುಳ್ಳಿ ದೋಸೆ, ಅವಲಕ್ಕಿ ದೋಸೆ, ಗೋದಿ ದೋಸೆ, ಕುಚ್ಚಲಕ್ಕಿ ದೋಸೆ, ರಾಗಿ ದೋಸೆ ಹೀಗೆ ಒಂದಿಷ್ಟು ದೋಸೆಗಳನ್ನು ನಮ್ಮ ಮನೆಗಳಲ್ಲಿ ಮಾಡುತ್ತಾರೆ. ಇನ್ನು ಕೆಲವು ಹೊಸ ಅನ್ವೇಷಣೆಯ ಪರಿಣಾಮ ಎನ್ನಬಹುದು. ಇದನ್ನು ತಿನ್ನಲು ಚಟ್ನಿ, ಸಾಂಬರ್, ಪಲ್ಯಗಳ ಒಟ್ಟಿಗೆ ಬಡಿಸಲಾಗುತ್ತದೆ.
ಮಸಾಲಾ ದೋಸೆಯ ಇತಿಹಾಸ ಯಾರದರು ಬಲ್ಲಿರ?
ಮಂಗಳೂರಿನ ಪ್ರತಿಷ್ಠಿತ ಹೊಟೇಲ್ ಒಂದರ ಅನ್ವೇಷಣೆಯಾಗಿದೆ. ಸಾಮಾನ್ಯ ಗಾತ್ರದ ದೋಸೆಗಿಂತ ಕೊಂಚ ದೊಡ್ಡದಾದ ದೋಸೆಯೊಂದನ್ನು ಮಾಡಿ ಅದರಲ್ಲಿ ಬಟಾಟೆ ಪಲ್ಯ (ಬಾಜಿ) ಯನ್ನು ಇಟ್ಟು, ದೋಸೆಯನ್ನು ಮಡಚಿ ಸವಿಯಲು ನೀಡಲಾರಂಭಿಸಿದರು. ಇನ್ನು ಚಟ್ನಿಯಲ್ಲಿ ಲೆಕ್ಕಕ್ಕೆ ಸಿಗದು ಅಷ್ಟು ವೆರೈಟಿ ಇದೆ. ಇದರಲ್ಲಿ ಕೆಲವು ಮನೆಯಿಂದ, ಇನ್ನು ಕೆಲವು ಹೊಟೇಲ್ ಉದ್ದಿಮೆಗಳ ಕೃಪೆಯಿಂದ ಹುಟ್ಟಿಕೊಂಡಿದೆ. ಎಲ್ಲವು ಗ್ರಾಹಕನ್ನು ಒಲಿಸಿಕೊಳ್ಳಲು ಸಲುವಾಗಿ.
ವಿವಿಧ ಪ್ಲೇವರ್ ನ ಐಸ್ ಕ್ರೀಮ್ಗೆ ವಿವಿಧ ಹಣ್ಣಿನ ತುಂಡುಗಳನ್ನು ಸೇರಿಸಿ ಗಾಹಕರಿಗೆ ಗಡ್ಬಡ್ ಹೆಸರಿನಲ್ಲಿ ನೀಡಲಾಗುವುದು. ಅದ್ಭುತ ತಂತ್ರಗಾರಿಕೆ ಎಂದೆನಿಸುತ್ತದೆ.
ಆಹಾರ ಉದ್ಯಮದ ವ್ಯವಹಾರಿಕ ತಂತ್ರ ಎನ್ನಬಹುದು. ತಮ್ಮ ಗ್ರಾಹಕರನ್ನು ಆಕರ್ಷಿಸಲು ದಿನ ನಿತ್ಯ ಏನಾದರು ಹೊಸತು ಪರಿಚಯಿಸಬೇಕು ಈ ಮೂಲಕ ನಮ್ಮ ವ್ಯವಹಾರವನ್ನು ವೃದ್ಧಿಗೊಳಿಸಬೇಕು. ಇದುವೇ ಬಿಸಿನೆಸ್. ನಮ್ಮ ಅವಶ್ಯಕತೆಯೇ ಉದ್ದಿಮೆಗಳಿಗೆ ವ್ಯವಹಾರ.