ಕ್ರಿಕೆಟ್ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್, ಕ್ರಿಕೆಟ್ ನಿವೃತ್ತಿ ಘೋಷಿಸಿ 10 ವರ್ಷಗಳಾಗಿವೆ. ಆದರೂ ಅವರ ಬ್ರ್ಯಾಂಡ್ ವ್ಯಾಲ್ಯೂ ಕುಸಿದಿಲ್ಲ.
ಭಾರತದ ದಿಗ್ಗಜ ಕ್ರಿಕೆಟಿಗ ತೆಂಡೂಲ್ಕರ್ ಅವರು ಭಾರತದ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ.ಅವರ ನಿವ್ವಳ ಆಸ್ತಿ ಮೌಲ್ಯ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗಿಂತಲೂ ಹೆಚ್ಚು. ಸೋಷಿಯಲ್ ಮೀಡಿಯಾದಲ್ಲೂ ಹಣ ಸಂಪಾದಿಸುತ್ತಿರುವ ಸಚಿನ್, ಹಲವಾರು ಕಂಪನಿಗಳ ರಾಯಭಾರಿಯೂ ಆಗಿ ಹೆಸರು ಮಾಡಿದ್ದಾರೆ.
ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಒಬ್ಬರಾದ ತೆಂಡೂಲ್ಕರ್ ಒಟ್ಟು ಆಸ್ತಿ 1,350 ಕೋಟಿ ರೂಪಾಯಿ ಇದೆ. ಇವರು ಜಾಗತಿಕ ಶ್ರೀಮಂತ ಕ್ರಿಕೆಟಿರ್ಗಳಲ್ಲಿ ಒಬ್ಬರಾಗಿದ್ದಾರೆ.
2019ರ ಅವಧಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಬ್ರ್ಯಾಂಡ್ ಮೌಲ್ಯವು ಶೇ.15.8ರಷ್ಟು ಏರಿಕೆ ಕಂಡಿತ್ತು. ಈ ಮೂಲಕ 2019ರ ಡಫ್ ಮತ್ತು ಫೆಲ್ಪ್ಸ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದ ಏಕೈಕ ನಿವೃತ್ತ ಸೆಲೆಬ್ರಿಟಿ ಎನಿಸಿದ್ದರು. 2020ರಲ್ಲಿ ತೆಂಡೂಲ್ಕರ್ರ ನಿವ್ವಳ ಮೌಲ್ಯ 834 ಕೋಟಿ ಇತ್ತು. 2021ರಲ್ಲಿ 1,080 ಕೋಟಿ, ಪ್ರಸ್ತುತ 1,350 ಕೋಟಿಗೆ ತಲುಪಿದೆ ಎನ್ನುವ
ಸುದ್ದಿ ಇದೆ.
ಬಿಎಂಡಬ್ಲ್ಯೂ ಸೇರಿದಂತೆ ಪ್ರಮುಖ ಪ್ರತಿಷ್ಠಿತ ಕಂಪನಿಗಳ ರಾಯಭಾರಿಯೂ ಆಗಿರುವ ಸಚಿನ್ ತೆಂಡೂಲ್ಕರ್, ಇದರಿಂದಲೇ 20 ರಿಂದ 22 ಕೋಟಿ ಸಂಪಾದಿಸುತ್ತಾರೆ. 2016ರಲ್ಲಿ ಬಟ್ಟೆ ಉದ್ಯಮಕ್ಕೂ ಕಾಲಿಟ್ಟಿದ್ದರು ಎಂಬುದು ವಿಶೇಷ. ಟ್ರೂ ಬ್ಲೂ ಬ್ರ್ಯಾಂಡ್ ಮೂಲಕ ಬಟ್ಟೆ ಉದ್ಯಮ ನಡೆಸುವ ಲಿಟಲ್ ಮಾಸ್ಟರ್, 2019ರಲ್ಲಿ ಟ್ರೂ ಬ್ಲೂ ಅನ್ನು ಯುಎಸ್ ಮತ್ತು ಇಂಗ್ಲೆಂಡ್ನಲ್ಲಿ ಕೂಡ ವಿಸ್ತರಿಸಿದ್ದಾರೆ.
ಅಲ್ಲದೆ, ಆಹಾರ ಉದ್ಯಮದಲ್ಲೂ ಸಚಿನ್ ಕಾಲಿಟ್ಟಿದ್ದಾರೆ. ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ರೆಸ್ಟೋರೆಂಟ್ಗಳನ್ನು ಹೊಂದಿದ್ದಾರೆ. ಸಚಿನ್ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಅದರ ಅಂದಾಜು ವೆಚ್ಚ 100 ಕೋಟಿ ಇರಬಹುದು.
ಇಂಗ್ಲೆಂಡ್ನ ಲಂಡನ್ನಲ್ಲೂ ಸಚಿನ್ ಅವರಿಗೆ ಸ್ವಂತ ಮನೆಯಿದೆ. ಲೆಕ್ಕವಿಲ್ಲದಷ್ಟು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಸಚಿನ್ 20 ಕೋಟಿಗೂ ಹೆಚ್ಚು ಮೌಲ್ಯದ 10 ಕಾರುಗಳಿವೆ. ಒಟ್ಟಿನಲ್ಲಿಸಚಿನ ಶ್ರೀಮಂತ ಕ್ರಿಕೆಟಿಗ …