ನಾವೆಲ್ಲ ಟಿವಿ ನೋಡುವಾಗ ಎಷ್ಟೋ ಕಾರ್ಯಕ್ರಮದ ನಡುವೆ ಬರುವ ಜಾಹೀರಾತು ನೋಡುವಾಗಲೆಲ್ಲ ಹಿಡಿ ಶಾಪ ಹಾಕಿದ್ದು ಇದೆ. ಎಷ್ಟು ಹೊತ್ತಿಗೆ ಈ ಜಾಹೀರಾತು ಮುಗಿಯುತ್ತೆ ಅನ್ನೋ ಕಾತರ.ಹಾಗೆ ಕೆಲವೊಮ್ಮೆ ಕಾರ್ಯಕ್ರಮಕ್ಕಿಂತ ಜಾಸ್ತಿ ಆಡ್ಗಳದ್ದೇ ಹಾವಳಿ. ಹಾಗಾದ್ರೆ ಕಾರ್ಯಕ್ರಮಗಳಿಗೆ ಈ ಜಾಹೀರಾತು ಯಾಕೆ ಅಗತ್ಯ. ಯಾವುದರ ಆಧಾರದ ಮೇಲೆ ಜಾಹೀರಾತು ಹಾಕ್ತಾರೆ. ಇಲ್ಲಿದೆ ಅದರ ಕಂಪ್ಲೀಟ್ ವಿವರಣೆ ಇಲ್ಲಿದೆ.
ಅಷ್ಟಕ್ಕೂ ಜಾಹೀರಾತು ಹಾಕೋದು ಒಂದು ಕಾರ್ಯಕ್ರಮದ ಜನಪ್ರಿಯತೆಯ ಮೇಲೆ ಅನ್ವಯವಾಗುತ್ತದೆ. ಉದಾಹರಣೆಗೆ ಒಂದು ರಿಯಾಲಿಟಿ ಶೋ ತುಂಬಾ ಜನಮನ್ನಣೆ ಗಳಿಸಿದೆ ಮತ್ತು ಎಲ್ಲಾ ಟ್ರೋಲ್ಸ್ ಪೇಜ್ ಮತ್ತು ಸೋಶಿಯಲ್ ಮೀಡಿಯಾ ದಲ್ಲಿ ಅದರದ್ದೇ ಚರ್ಚೆ ಆಗುತ್ತಿದೆ ಅಂದ್ರೆ ಜಾಹೀರಾತು ಕಂಪನಿಗಳು ಅದರಲ್ಲಿ ಹೂಡಿಕೆ ಮಾಡಲು ತಾ ಮುಂದು ನಾ ಮುಂದು ಎಂದು ಬರುತ್ತೆ. ಹಾಗೆ 30 ಸೆಕೆಂಡ್ಸ್ ಜಾಹೀರಾತಿಗೆ ಇಂತಿಷ್ಟು ಹಣ ಪಾವತಿಸುತ್ತಾರೆ.
ಹಾಗಾದರೆ ಒಂದು ಕಾರ್ಯಕ್ರಮದಜನಪ್ರಿಯತೆಯನ್ನು ಹೇಗೆ ಅಳೆಯುತ್ತಾರೆ.
ಕಾರ್ಯಕ್ರಮದ ಜನಪ್ರಿಯತೆ ಟಿರ್ ಪಿ ಮೇಲೆ ನಿಂತಿದೆ. ಅಂದ್ರೆ ಟೆಲಿವಿಶನ್ ರೇಟಿಂಗ್ ಪಾಯಿಂಟ್ ಎಂದರ್ಥ. ಈ ಟಿರ್ ಪಿ ಯನ್ನ ಹೇಗೆ ನಿರ್ಧಾರ ಮಾಡ್ತಾರೆ ಅಂತ ಒಂದು ಉದಾಹರಣೆ ಮೂಲಕ ನೋಡೋಣ.
ಸುಮಾರ್ 7 ಗಂಟೆ ಸಂಜೆ ಗೆ ಒಂದು ಧಾರಾವಾಹಿ ಬಹಳ ಜನಪ್ರಿಯತೆ ಪಡೆದುಕೊಂಡಿದೆ ಅಂದುಕೊಳ್ಳೋಣ. ಅದರ ಟಿ ರ್ ಪಿ ರೇಟಿಂಗ್ 10 ರಲ್ಲಿ 8 ಅಂದ್ರೆ, ಸುಮಾರ್ 10 ಪರ್ಸೆಂಟ್ ಮನೆಗಳಲ್ಲಿ 8 ಪರ್ಸೆಂಟ್ ಮನೆಗಳಲ್ಲಿ ಈ ಧಾರಾವಾಹಿ ವೀಕ್ಷಿಸುತ್ತಾರೆ ಅಂದುಕೊಳ್ಳೋಣ. ಸೊ ಅದರ ಮೇಲೆ ಜಾಹೀರಾತು ಕಂಪನಿಗಳು ಹೂಡಿಕೆ ಮಾಡುತ್ತವೆ. ಹಾಗೆಯೇ ಟಿರ್ ಪಿ ಕುಸಿದರೆ ಜಾಹೀರಾತು ಕಂಪನಿಗಳು ಮೆಲ್ಲಗೆ ಜಾರಿಕೊಳ್ಳುತ್ತವೆ.
ಹಾಗದ್ರೆ ಟಿರ್ ಪಿ ರೇಟಿಂಗ್ ನಮ್ಮ ನಿಮ್ಮ ಮನೆಗಳಿಂದ ಕೌಂಟ್ ಆಗುತ್ತವೆಯೇ?
ಇಲ್ಲಾ.. ಕೆಲವೊಂದು ರಾಂಡೋಮ್ ಸ್ಯಾಂಪಲ್ ಮನೆಗಳಿಗೆ ಟಿರ್ ಪಿ ಬಾಕ್ಸ್ ಹಾಕಲಾಗುತ್ತದೆ. ಮತ್ತೆ ಈ ಬಾಕ್ಸ್ ತುಂಬಾ ಕಾಸ್ಟ್ಲಿ. ಹಾಗೆಯೇ ಅದರ ಮೇಲೆ ಕಾರ್ಯಕ್ರಮದ ಜನಪ್ರಿಯತೆ ಅಳೆಯಲಾಗುತ್ತದೆ