ಭಾರತದ ಸಿನಿಮಾ ಇಂಡಸ್ಟ್ರಿ ಎಂದರೆ ಹಿಂದಿ ಸಿನಿಮಾ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವ ಕಾಲ ಒಂದಿತ್ತು. ಒಂದಾದ ಮೇಲೆ ಒಂದರಂತೆ ನೂರು ಕೋಟಿ ಕ್ಲಬ್ ಸಿನಿಮಾಗಳನ್ನು ತೆರೆಯ ಮೇಲೆ ತಂದ ಹಿಂದಿ ಇಂಡಸ್ಟ್ರಿ ದಕ್ಷಿಣ ಭಾರತದ ಸಿನಿಮಾ ಅಲೆಗಳು ಎಬ್ಬಿಸಿದ ಬಿರುಗಾಳಿಯಲ್ಲಿ ಕೊಚ್ಚಿ ಹೋಗುತ್ತ ಬಾಲಿವುಡ್ ಮೂವಿಗಳು ಒಂದಾದ ಮೇಲೆ ಒಂದರಂತೆ ಫ್ಲಾಪ್ ಆಗುತ್ತಿದೆ.
ಬಾಲಿವುಡ್ ಫ್ಲಾಪ್ ಆಗಲು ಕಾರಣಗಳು:
ಕಥೆಗಳ ಆಯ್ಕೆ – ಮೊದಲು ಹಿಂದಿಯಲ್ಲಿ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇಂದು ಕಥೆಗಳಿಗಿಂತ ಆಕ್ಟ್ರೆಸ್ಸಿಗೆ ಹೆಚ್ಚಿನ ಬೆಲೆಯನ್ನು ಕೊಡಲಾಗುತ್ತಿದೆ ಹಾಗಾಗಿ ಇಂದು ಯಾವುದೇ ಒಳ್ಳೆಯ ಕಥೆಗಳು ಕಾಣಿಸಿಕೊಳ್ಳುತ್ತಿಲ್ಲ ಎಂದು ಹಿಂದಿ ಮೂವಿ ನೋಡುವವರು ಕಡಿಮೆ ಮಾಡಿದ್ದಾರೆ .
ರಿಮೇಕ್ – ಬಾಲಿವುಡ್
ಮೂವೀಸ್ ಎಲ್ಲವೂ ಈಗ ರಿಮೇಕ್ ಮಾಡಲಾಗುತ್ತಿದೆ. ಯಾವ ಹೊಸ ಚಲನಚಿತ್ರವನ್ನು ವೀಕ್ಷಿಸಿದರು ಅದು ಬೇರೆ ಭಾಷೆಯ ಡಬ್ಬಿಂಗ್ ಆಗಿರುವುದೇ ಅದಕ್ಕೆ ಜನ ಇದನ್ನು ನೋಡಲು ಇಷ್ಟಪಡುತ್ತಿಲ್ಲ.
*ಖಾನ್ ಗಳ ವಿವಾದ
ಬಾಲಿವುಡ್ ನಲ್ಲಿ ಪ್ರಸಿದ್ಧಿ ಪಡೆದಿರುವ ಶಾರುಕ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಇವರೆಲ್ಲ ತಾವು ಸ್ಟಾರ್ ಎನ್ನುವುದನ್ನು ತಲೆಯಲ್ಲಿಟ್ಟುಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ಮಾಧ್ಯಮದ ಮುಂದೆ ನೀಡಿ ಅವರ ಮೇಲೆ ಬ್ಯಾಡ್ ಇಂಪ್ರೆಶನ್ ಬರುವ ಹಾಗೆ ಮಾಡಿಕೊಂಡು ಬಿಟ್ಟಿದ್ದಾರೆ.
ಕರೋನಾ ಪ್ರಭಾವ
ಕರೋನ ಬಂದ ಮೇಲೆ ಯಾರೂ ಥಿಯೇಟರಿಗೆ ಹೋಗದೆ, ಮನೆಯಲ್ಲಿ ಕುಳಿತುಕೊಂಡು ರಿಲೀಸ್ ಆದ ಮೂವಿ ಅನ್ನು ಓಟಿಪಿಯಲ್ಲಿ ನೋಡಲು ಆರಂಭಿಸಿದ್ದು ತಮಗೆ ಬೇಕಾದ ಸಮಯಕ್ಕೆ ಚಲನಚಿತ್ರವನ್ನು ಕಡಿಮೆ ಖರ್ಚಿನಲ್ಲಿ ನೋಡಿ ಮುಗಿಸುತ್ತಾರೆ ಇದು ಕೂಡ ಬಾಲಿವುಡ್ ಫ್ಲಾಪ್ ಆಗಲು ಮುಖ್ಯಕಾರಣವಾಗಿದೆ.
ಸ್ವಜನ ಪಕ್ಷಪಾತ
ಸೃಜನ ಪಕ್ಷಪಾತ ಬಾಲಿವುಡ್ ನಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಚಿತ್ರನಟ ನಟಿಯರು ಅವರ ಕುಟುಂಬದವರಿಗೆ ಹೆಚ್ಚಿನ ಅವಕಾಶ ಕೊಡುತ್ತಿದ್ದು ಇವರ ಮುಂದೆ ಪ್ರತಿಭಾವಂತರಿಗೆ ಅವಕಾಶ ಪಡೆದುಕೊಳ್ಳುವುದು ಕಷ್ಟವಾಗುತ್ತಿದೆ ಇದರಿಂದ ಪ್ರತಿಭೆಗಿಂತ ತಮ್ಮವರೇ ಬೆಳೆಯಬೇಕೆಂಬ ನಿಲುವು ಹೆಚ್ಚಾಗಿ ಕಾಣಿಸಿಕೊಂಡಿದ್ದು ಬಾಲಿವುಡ್ ಕ್ಷೀಣಿಸಲು ಪ್ರಮುಖ ಕಾರಣಗಳಲ್ಲಿ ಇದು ಕೂಡ ಒಂದಾಗಿದೆ.
ಡ್ರಗ್ಸ್ ಪಾರ್ಟಿ
ಬಾಲಿವುಡ್ ನಲ್ಲಿ ಪಾರ್ಟಿಗಳು ಹೆಚ್ಚಾಗುತ್ತಿದ್ದು ಅಲ್ಲಿ ಸೆಲೆಬ್ರಿಟಿಗಳೆಲ್ಲ ಡ್ರಗ್ಸ್ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿ ಎನಿಸುತ್ತಿದೆ. ಇದರಿಂದ ಸಿನಿ ಪ್ರಿಯರಿಗೆ ಬಾಲಿವುಡ್ ನಟರ ಮೇಲೆ ಒಳ್ಳೆಯ ಅಭಿಪ್ರಾಯ ಇಲ್ಲ.
ನಾಯಕಿಯರ ರಾಜಕೀಯ ಒಲವು
ಬಾಲಿವುಡ್ ಆಕ್ಟ್ರೆಸ್ಸ್ ಎಲ್ಲ ರಾಜಕೀಯದ ಕಡೆ ಒಲವು ತೋರುತ್ತಿದ್ದಾರೆ. ಅವರು ಸಿನಿಮಾ ಬಿಟ್ಟು ಈ ರೀತಿ ಬೇರೆ ಕಡೆ ವಿಚಾರಧಾರೆ ಹರಿಸುವುದರಿಂದ ಬಾಲಿವುಡ್ ನಲ್ಲಿ ಇರುವಿಕೆ ಕಡಿಮೆಯಾಗುತ್ತಿದೆ.
ಒಂದು ಒಳ್ಳೆಯ ಮೂವಿ ಮಾಡಬೇಕಾದರೆ ಅದರ ಮೇಕಿಂಗ್ ಗಿಂತ ಚಿತ್ರನಟರಿಗೆ ಜಾಸ್ತಿ ಹಣವನ್ನು ಬೇಡಿಕೆ ಮಾಡುತ್ತಿದ್ದಾರೆ. ಅದರಿಂದಾಗಿ ಒಳ್ಳೆ ಮೂವಿ ಮಾಡಲು ಪ್ರೊಡ್ಯೂಸರ್ ಗೆ ಸಾಧ್ಯವಾಗುತ್ತಿಲ್ಲ.
ಬಾಲಿವುಡ್ ಅವರಿಗೆ ಈಗಿಗ ಜಾಸ್ತಿಯಾಗಿ ಅಂಡರ್ವರ್ಡ್
ನವರ್ ಜೊತೆ ಲಿಂಕ್ ಇರುವುದು ಸುದ್ದಿಯಾಗುತ್ತಿದೆ. ಇದು ಕೂಡ ಬಾಲಿವುಡ್ ಹಿಂದೆ ಬಿಳಲು ಕಾರಣವಾಗಿದೆ.
ಭಾರತದಲ್ಲಿ ಎಲ್ಲರಿಗೂ ಹಿಂದಿ ಭಾಷೆ ಅರ್ಥವಾಗುವುದಿಲ್ಲ.ಅದಕ್ಕಾಗಿ ಬೇರೆ ಭಾಷೆಗಳಲ್ಲಿ ಹಿಂದಿ ಮೂವಿ ಡಬ್ಬಾಗುವವರೆಗೂ ಜನರು ಕಾದು ಕುಳಿತುಕೊಳ್ಳುತ್ತಾರೆ ಇದು ಕೂಡ ಬಾಲಿವುಡ್ ಡೌನ್ ಫಾಲ್ ಆಗುವುದಕ್ಕೆ ಕಾರಣವಾಗಿದೆ.
ಈ ಎಲ್ಲಾ ಸಮಸ್ಯೆಗಳನ್ನು ಸರಿ ಮಾಡಿಕೊಂಡು ಬಾಲಿವುಡ್ ಮುಂಚಿನಂತೆ ಆಗಬೇಕೆಂಬುದು ಪ್ರೇಕ್ಷಕರ ಆಸೆಯಾಗಿದೆ.