ಜೀತದಾಳು ಪದ್ಧತಿಯ ಬಗ್ಗೆ ಸಾಕಷ್ಟು ಒದ್ದಿದ್ದು ಕೇಳಿದ್ದು ಇದೆ. ಆದರೆ ಈಗೀನ ಕಾಲದಲ್ಲಿಯು ಇನ್ನು ಅಸ್ತಿತ್ವದಲ್ಲಿ ಇದೆ ಎಂದರೆ ಇದು ನಾಚಿಕೆಯ ವಿಷಯ. ಇತ್ತಿಚೆಗಷ್ಟೆ ಹಾಸನ ಜಿಲ್ಲೆಯ ಚೆಲುವನ ಹಳ್ಳಿಯಲ್ಲಿ ಭೂಮಾಲಿಕರ ಮುಷ್ಟಿಯಲ್ಲಿದ್ದ 18 ಬಂಧಿತ ಕಾರ್ಮಿಕರನ್ನು ರಕ್ಷಿಸಲಾಯಿತ್ತು.
ಆರೋಪಿ ಮುನೇಶ್ ರೈಲ್ವೆ ಮತ್ತು ಬಸ್ಸು ನಿಲ್ದಾಣಗಳಿಂದ ಕೆಲಸ ಮತ್ತು ಉತ್ತಮ ಊಟ ಸೌಲಭ್ಯದ ನೀಡುವುದಾಗಿ ಆಸೆ ತೋರಿಸಿ ನಿರ್ಗತಿಕರನ್ನು ತಂದು ತನ್ನ ಜಾಮೀನಿನಲ್ಲಿ ದುಡಿಸಿಕೊಳ್ಳುತ್ತಿದ್ದ. ಮುನೇಶ್ ಪ್ರತಿದಿನ ಕಾರ್ಮಿಕರನ್ನು ಸ್ವತಃ ತಾನೇ ಜಮೀನಿಗೆ ಕರೆದುಕೊಂಡು ಹೋಗುತ್ತಿದ್ದ ಮತ್ತು ಸರಿಯಾಗಿ ಊಟ ತಿಂಡಿ ನೀಡದ್ದೆ ತೋಟದ ಮನೆಯಲ್ಲಿ ಕೂಡಿಹಾಕುತ್ತಿದ್ದ.
ಪೊಲೀಸ್ ಇಲಾಖೆ ಖಚಿತ ಮಾಹಿತಿಯಿಂದ ತೋಟದ ಮನೆಗೆ ದಾಳಿ ನಡೆಸಿ ಅಷ್ಟು ಜನ ಕಾರ್ಮಿಕರನ್ನು ರಕ್ಷಿಸಲಾಯಿತ್ತು. ಇಲಾಖೆಯ ಮಾಹಿತಿಯ ಪ್ರಕಾರ ಇಂತದೇ ಪ್ರಕರಣಕ್ಕೆ ಆರೋಪಿಯನ್ನು ಈ ಹಿಂದೆನೂ ಬಂಧಿಸಲಾಗಿತ್ತು ಇದು ನಾಲ್ಕನೇ ಬಾರಿ ಎಂದು ಹೇಳಿಕೆ ನೀಡಿದ್ದಾರೆ.
ಈ ವಿಷಯ ಸುದ್ದಿಯಾಗುತ್ತಿದಂತೆ ಎಲ್ಲರ ಗಮನವನ್ನು ಸೆಳೆಯಿತ್ತು. ಪ್ರಜಾಪ್ರಭುತ್ವದ ನಾಡಿನಲ್ಲಿ ಜೀತದಾಳು ಪದ್ಧತಿ ಇನ್ನು ಜೀವಂತವಾಗಿರುವುದು ನಮ್ಮ ವ್ಯವಸ್ಥ್ತೆಯು ನಾಚೀಕೆ ಪಡುವಂತಾಗಿದೆ.
ಜೀತ ಪದ್ಧತಿಯ ಕಾಯ್ದೆ 1976ರ ಅನ್ವಯ ದಿನಾಂಕ 25-10-1975 ರಿಂದ ಜೀತ ಪದ್ಧತಿಯನ್ನು ರಾಷ್ಟçದಾದ್ಯಂತ ರದ್ದುಪಡಿಸಲಾಗಿದೆ. ಜೀತ ಮಾಡುವ ಯಾವುದೇ ಹೊಣೆಯಿಂದ ಮುಕ್ತರನ್ನಾಗಿ ಮಾಡಿದೆ. ಆದುದರಿಂದ ಯಾರಾದರೂ ಜೀತ ಪದ್ಧತಿ ಮೇರೆಗೆ ಸಾಲ ಕೊಡುವುದು ಅಥವಾ ಯಾರನ್ನಾದರೂ ಜೀತದಾಳಾಗಿ ಅಥವಾ ಬೇರೆ ರೀತಿಯ ಬಲತ್ಕಾರದಿಂದ ದುಡಿಮೆ ಮಾಡಲು ಇರಿಸಿಕೊಳ್ಳುವುದು ಕಾನೂನಿನಡಿ ಅಪರಾಧ. ಇಂತಹ ಅಪರಾಧಗಳಿಗೆ ಕಾಯ್ದೆಯಡಿ ಸೆರೆಮನೆವಾಸ ಮತ್ತು ಜುಲ್ಮಾನೆ ದಂಡ ವಿಧಿಸುವ ಅವಕಾಶಗಳಿರುತ್ತವೆ.
ಇಂತಹ ಒಂದು ಪ್ರಬಲವಾದ ಕಾಯ್ದೆ ಇದ್ದು ವ್ಯವಸ್ಥೆಯ ಮೂಗಿನ ಅಡಿಯಲ್ಲಿ ಇತರದ ಕೃತ್ಯ ನಡೆದಿರುವುದು ಆರ್ಶರ್ಯಕ್ಕೆ ಕಾರಣವಾಗಿದೆ. ಇನ್ನು ಗಮನಿಸ ಬೇಕಾದಂತಹ ಮುಖ್ಯ ಅಂಶ ಮಾಜಿ ಪ್ರಧಾನಿ ದೇವೆಗೌಡರು ಮತ್ತು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರ ಹುಟ್ಟು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ದೇಶ, ರಾಜ್ಯ ನಾಗಲೋಟದಿಂದ ದಿನದಿನಕ್ಕೆ ಬೆಳೆಯುತ್ತಿದೆ ಅಭಿವೃದ್ದಿಯತ್ತ ಸಾಗುತ್ತಿದೆ. ಜನರ ಯೋಚನೆಗಳು ಕಾರ್ಯಗಳು ಬದಲಾಗುತ್ತಿದೆ ಎಂಬ ನಂಬಿಕೆಯಲ್ಲಿದ್ದವರಿಗೆ ಇದು ಒಂದು ಆಘಾತಕಾರಿ ಸುದ್ದಿಯಾಗಿದೆ. ಒಬ್ಬ ಮನುಷ್ಯ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಲು ಸಾಧ್ಯವೆ. ಬಡವರ ಬೆವರಲ್ಲಿ ಅರಮನೆಯನ್ನು ಕಟ್ಟಿ ಐಷಾರಾಮಿ ಜೀವನ ನಡೆಸುವ ಇಂತಹ ಭೂಮಾಲಿಕರಿಗೆ ದಿಕ್ಕಾರವಿರಲಿ.