ಕೆಆರ್ಜಿ ಸ್ಟುಡಿಯೋಸ್ ಕ್ರಿಕೆಟ್ ಬಗೆಗಿನ ಸಿನಿಮಾ ಮಾಡಲು ಮುಂದಾಗಿದ್ದು, ‘ಕಿರಿಕೇಟ್ 11’ ಅನ್ನು ಘೋಷಣೆ ಮಾಡಿದೆ. ಕೆಆರ್ಜಿ ಸ್ಟುಡಿಯೋಸ್ನ ನಾಲ್ಕನೇ ಸಿನಿಮಾ ಚಿತ್ರದಲ್ಲಿ ಡ್ಯಾನಿಶ್ ಸೇಟ್ ಮತ್ತು ನವೀನ್ ಶಂಕರ್ ನಟಿಸಿದ್ದಾರೆ.
’ಗುಳ್ಟು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟ ನವೀನ್ ಶಂಕರ್ಗೆ ಆ ನಂತರದ ‘ಧರಣಿ ಮಂಡಲ ಮಧ್ಯದೊಳಗೆ’, ‘ಹೊಂದಿಸಿ ಬರೆಯಿರಿ’, ‘ಹೊಯ್ಸಳ’ ಸಿನಿಮಾಗಳಲ್ಲಿ ನಟಿಸಿದ್ದು ’ಕಿರಿಕೇಟ್ 1’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ನವೀನ್ ಶಂಕರ್ ಜತೆಗೆ ಇಂಪ್ರಾಬ್ ಕಾಮಿಡಿ ಕಲಾವಿದ, ನಿರೂಪಕ, ನಟ, ಬರಹಗಾರ ದಾನಿಶ್ ಸೇಠ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ದಾನಿಶ್ ಸೇಠ್ ಈಗಾಗಲೇ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಾನಿಶ್ ಸೇಠ್ ಐಪಿಎಲ್ ಮತ್ತು ವಿಶ್ವಕಪ್ನಿಂದಲೇ ತಮ್ಮ ಅಭಿಮಾನಿಗಳನ್ನು ಪಡೆದುಕೊಂಡವರು. ಈಗ ಅದೇ ಹೆಸರಿನ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.
‘ಕಿರಿಕೇಟ್ 11’ ಸಿನಿಮಾವನ್ನು ಬೆಂಗಳೂರಿನವರೇ ಆದ ಮನೋಜ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಸ್ಟ್ಯಾಂಡಪ್ ಕಮಿಡಿಯನ್ ಆಗಿರುವ ಸುಮನ್ ಕುಮಾರ್, ಸೂಪರ್ ಹಿಟ್ ವೆಬ್ ಸರಣಿಗಳಾದ ಫರ್ಜಿ, ಫ್ಯಾಮಿಲಿ ಮ್ಯಾನ್ ಗಳಲ್ಲಿ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಫ್ಯಾಮಿಲಿಮ್ಯಾನ್ನ ಮತ್ತೋರ್ವ ಬರಹಗಾರ ಮನೋಜ್ಕುಮಾರ್ ಕಲೈವಣ್ಣನ್ ಈ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದಾರೆ.ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದು, ಈ ಚಿತ್ರವನ್ನು ಕಾರ್ತಿಕ್ ಗೌಡ, ವಿಜಯ್ ಸುಬ್ರಮಣ್ಯಂ ಮತ್ತು ಯೋಗಿ ಜಿ ರಾಜ್ ಅವರು ನಿರ್ಮಿಸುತ್ತಿದ್ದಾರೆ.
ಕರ್ನಾಟಕದ ಹೆಮ್ಮೆಯ ಆಟಗಾರರಾಗಿರುವ ಕೆಎಲ್ ರಾಹುಲ್ ಜೀವನವನ್ನು ಕಿರಿಕೇಟ್ 11 ಸಿನಿಮಾ ಮೂಲಕ ತೆರೆಗೆ ತರಲಾಗುತ್ತಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ಕೆಎಲ್ ರಾಹುಲ್ ಆಗಲಿ ಅಥವಾ ಚಿತ್ರತಂಡವಾಗಲಿ ಇದು ಕೆಎಲ್ ರಾಹುಲ್ ಅವರದ್ದೇ ಜೀವನ ಆಧರಿಸಿದ ಸಿನಿಮಾ ಎಂದು ಅಧಿಕೃತವಾಗಿ ಹೇಳಿಲ್ಲ.