ರಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ ಚಿತ್ರವು ದೆಹಲಿಯಲ್ಲಿ 13ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಕಿರಣ್ರಾಜ್ ಅವರು ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಲು ಉತ್ಸಾಹಕರಾಗಿದ್ದಾರೆ.
ಜೂನ್ 10 ಕ್ಕೆ ಕಿರಣ್ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾ (10 ಜೂನ 2022)ಬಿಡುಗಡೆಯಾಗಿ ಒಂದು ವರ್ಷವಾಗಲಿದೆ. ಚಿತ್ರತಂಡ ವಾರ್ಷಿಕೋತ್ಸವವನ್ನು ಆಚರಿಸಲು ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಂಡಿದೆ. ಈಗಲೂ ಚಿತ್ರ ಹಾಟ್ ಟಾಪಿಕ್ ಆಗಿ ಮುಂದುವರಿಯುತ್ತಿದ್ದು, ಮತ್ತೊಂದು ಹೊಸ ಸುದ್ದಿ ಎಂದರೆ ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರವು ದೆಹಲಿಯಲ್ಲಿ 13ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅಧಿಕೃತವಾಗಿ ಆಯ್ಕೆಯಾಗಿರುವುದು.
ಇದರ ಜೊತೆಗೆ, ಚಾರ್ಲಿ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಕಿರಣ್ರಾಜ್ ಅವರು ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಎಂಬ ಪ್ರಶಸ್ತಿಯನ್ನು ಸ್ವೀಕರಿಸಲು ಆತುರದಲ್ಲಿದ್ದಾರೆ.