ಕಳೆದ 6 ವರ್ಷಗಳಿಂದ ಸೋಲುಗಳನ್ನೇ ಕಂಡಿದ್ದ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಗೆ ಈಗ ರಿಲೀಫ್ ಸಿಕ್ಕಿದೆ.
ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿದ್ದು, ಇನ್ನು ಶಾರುಖ್ ಸಿನಿಮಾಗಳು ಗಳಿಕೆಯಲ್ಲಿ ಕೂಡ ಹೊಸ ದಾಖಲೆಯನ್ನು ಬರೆಯುತ್ತಿವೆ. ಹೌದು, ಬಾಲಿವುಡ್ ನ ನಂಬರ್ 1 ಸ್ಟಾರ್ ಆಗಿ ಈಗ ಬಾಕ್ಸ್ ಆಫೀಸ್ ನಲ್ಲಿಯೂ ನಂಬರ್ 1 ಆಗಿದ್ದಾರೆ.
ಇದೀಗ ಶಾರುಖ್ ಖಾನ್ರ ಜವಾನ್ ಸಿನಿಮಾ ಆ ದಾಖಲೆಯನ್ನು ಹಿಮ್ಮೆಟ್ಟಿ ಮುನ್ನಗ್ಗಿದ್ದಾರೆ. ಆ ಮೂಲಕ ಹಿಂದಿಯಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಖ್ಯಾತಿಗೆ ‘ಜವಾನ್’ ಪಾತ್ರವಾಗಿದೆ. ‘ಜವಾನ್’ ಸಿನಿಮಾ ಅತ್ಯಂತ ಕಡಿಮೆ ಅವಧಿಯಲ್ಲಿ ಹಿಂದಿಯ ಅತಿ ಹೆಚ್ಚು ಹಣ ಗಳಿಸಿದೆ.
ಬಿಡುಗಡೆಯಾದ 22 ದಿನಗಳಲ್ಲಿ 515 ಕೋಟಿ ಹಣ ಗಳಿಸಿದೆ. ಈ ಹಿಂದೆ ಇನ್ಯಾವುದೇ ಹಿಂದಿ ಸಿನಿಮಾ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತ ಕಲೆ ಹಾಕಿರಲಿಲ್ಲ.
ಬಾಹುಬಲಿ 2’ ಸಿನಿಮಾ 510 ಕೋಟಿ ರೂಪಾಯಿ ಹಣ ಗಳಿಸಿತ್ತು. ಈ ದಾಖಲೆಯನ್ನು ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಇತ್ತೀಚೆಗಷ್ಟೆ ಮುರಿದು 513 ಕೋಟಿ ಹಣ ಗಳಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಸಿನಿಮಾ 515 ಕೋಟಿ ಗಳಿಸಿ ‘ಪಠಾಣ್’ ಸಿನಿಮಾದ ದಾಖಲೆ ಮುರಿಯಿತು. ಅದಾದ ಬಳಿಕ ಮತ್ತೆ ಶಾರುಖ್ ಖಾನ್ ರ ಜವಾನ್ ನಂಬರ್ 1 ಸ್ಥಾನ ಪಡೆದಿದೆ.