ಮರಾಠಿ ಮತ್ತು ಕೊಂಕಣಿಯ ಮಿಶ್ರಿತ ಕತ್ಕಾರಿ ಭಾಷೆಯನ್ನು ಮಾತನಾಡುವ ಮಹಾರಾಷ್ಟ್ರದ ಜನಾಂಗವು ಕತ್ಕಾರಿ ಜನಾಂಗವೆಂದೇ ಹೆಸರುವಾಸಿ. ಒಂದಾನೊಂದು ಕಾಲದಲ್ಲಿ ಮಾಹಾರಾಷ್ಟ್ರದ ಪಶ್ಚಿಮ ಘಟ್ಟದ ಕಾಡಿನಲ್ಲಿ ಕತ್ಕಾರಿಗಳು ವಾಸಿಸುತ್ತಿದ್ದರು.
ಆಧುನಿಕ ಕಾಲಘಟ್ಟದಲ್ಲಿ ಭಿನ್ನ ಭಿನ್ನ ವಾಗಿ ಹೋಗಿರುವ ಕತ್ಕಾರಿಗಳು, ತಮ್ಮ ದೈನಂದಿನ ಆಗುಹೋಗುಗಳಿಗೆ ಮತ್ತೊಬ್ಬರನ್ನು ಅವಲಂಭಿತರಾಗಿದ್ದಾರೆ. ಈ ಸಮುದಾಯವನ್ನು ಗ್ರಾಮ ಸಮಾಜದ ಸದಸ್ಯತ್ವದಿಂದ ಬಲವಾಗಿ ಹೊರಗಿಡಲಾಗಿದೆ. ಅಸ್ಪೃಶ್ಯತತೆ, ಅಪರಾಧದ ಆರೋಪ ಮತ್ತು ಕಾಟ್ಕರಿ ಆಹಾರ ಪದ್ಧತಿ ಮುಂತಾದ ಅಂಶಗಳು ಕಾಟ್ಕರಿ ಜನಾಂಗಾವನ್ನು ಮುಖ್ಯ ವಾಹಿನಿಯಿಂದ ಮತ್ತಷ್ಟು ದೂರ ಇರಿಸಿದೆ, ಎಂಬುದು ಮೂಲಗಳ ಅಭಿಪ್ರಾಯ.
ಲಾಕ್ ಡೌನ್ ಸಂದರ್ಭ ಕತ್ಕಾರಿ ಯುವ ಸಮೂಹ ಆನ್ಲೈನ್ ಮೂಲಕ ಗಿಲೊಯ್ ಮತ್ತು ಇತರ ಸಮಾಗ್ರಿಗಳನ್ನು ಮಾರುವುದರ ಮೂಲಕ, ಜನ ಸಾಮಾನ್ಯರ ನಡುವೆ ಹೆಸರುಗಳಿಸಿತ್ತು.
ಬ್ರಿಟಿಷರ 1871 ಕ್ರಿಮಿನಲ್ ಟ್ರೈಬ್ ಆಕ್ಟ್ ಅಡಿಯಲ್ಲಿ ಹೆಸರಿಸಲ್ಪಟ್ಟ ಕಟ್ಕರಿಗಳು, ಕಾಡು ಮತ್ತು ಮರಗಳೊಂದಿಗಿನ ತಮ್ಮ ಒಡನಾಟಕ್ಕಾಗಿಯೇ ಕಟ್ಕರಿ ಎಂದು ಕರೆಯಲ್ಪಟ್ಟಿದ್ದಾರೆ.