ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಲು ಇಸ್ರೋ ಸಿದ್ಧವಾಗಿದೆ. ಇದು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಮೊದಲನೆಯದು. ಭಾನುವಾರ, ಭಾರತದ ಬಾಹ್ಯಾಕಾಶ ಸಂಸ್ಥೆ ಅದನ್ನು ಸಂಜೆ 6.04 ಕ್ಕೆ ಮಾಡುವುದಾಗಿ ನಿರ್ದಿಷ್ಟಪಡಿಸಿದೆ. ಆದರೆ ನಿನ್ನೆ ಪ್ರಕಾಶ್ ರಾಜ್ ಟ್ವೀಟರ್ನಲ್ಲಿ ಹಂಚಿಕೊಂಡ ವ್ಯಂಗ್ಯಚಿತ್ರವೊಂದು ವಿವಾದಕ್ಕೀಡಾಗಿದೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಟ್ವೀಟರ್ನಲ್ಲಿ ಹಂಚಿಕೊಂಡ ವ್ಯಂಗ್ಯಚಿತ್ರವೊಂದು ವಿವಾದಕ್ಕೀಡಾಗಿದೆ. ಲೋಟವೊಂದರಲ್ಲಿ ಚಹಾ ಸುರಿಯುತ್ತಿರುವ ವ್ಯಕ್ತಿಯೊಬ್ಬರ ವ್ಯಂಗ್ಯಚಿತ್ರವನ್ನು ರಾಜ್ ಟ್ವೀಟರ್ನ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಅವರು ‘ಇದೀಗ ಬಂದ ಸುದ್ದಿ: ಚಂದ್ರನಿಂದ ಬಂದ ಮೊದಲ ಚಿತ್ರ. ವಿಕ್ರಮ್ ಲ್ಯಾಂಡರ್. ಜಸ್ಟ್ ಆಸ್ಕಿಂಗ್’ ಎಂದು ಬರೆದುಕೊಂಡಿದ್ದಾರೆ. ಕಾರ್ಟೂನ್ನಲ್ಲಿರುವ ವ್ಯಕ್ತಿ ನಿರ್ದಿಷ್ಟವಾಗಿ ಇವರೇ ಎಂದು ಹೇಳಿಲ್ಲ. ಆದರೆ ರಾಜ್ ಅವರು ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್ ಅವರನ್ನು ಗೇಲಿ ಮಾಡಿದಂತೆ ಇದೆ. ಚಿತ್ರವು ಶಿವನ್ರನ್ನೇ ಹೋಲುತ್ತದೆ. ಈ ವ್ಯಂಗ್ಯಚಿತ್ರದ ಮೂಲಕ ಪ್ರಕಾಶ್ ವಿಜ್ಞಾನಿಗಳನ್ನು ಅವಮಾನಿಸಿದ್ದಾರೆ ಎಂದು ಅನೇಕರು ಕಿಡಿಕಾರಿದ್ದಾರೆ.
ಈ ನಡುವೆ, ರಾಜ್ ಈ ಟ್ವೀಟನ್ನು ಅನೇಕರು ಖಂಡಿಸಿದ್ದಾರೆ, “ಪ್ರಕಾಶ್ ರಾಜ್ ಅವರ ಈ ನಾಚಿಕೆಗೇಡಿನ ಟ್ವೀಟನ್ನು ನಾನು ಖಂಡಿಸುತ್ತೇನೆ. ಇಸ್ರೋದ ಯಶಸ್ಸು ಭಾರತದ ಯಶಸ್ಸು” ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
“ಪ್ರಕಾಶಜೀ, ಈ ಚಂದ್ರಯಾನ ಮಿಷನ್ ಇಸ್ರೋದಿಂದ ಬಂದದ್ದು ಬಿಜೆಪಿಯಿಂದಲ್ಲ. ಇದು ಯಶಸ್ವಿಯಾದರೆ ಅದು ಭಾರತಕ್ಕೆ ಹೊರತು ಯಾವುದೇ ಪಕ್ಷಕ್ಕೆ ಅಲ್ಲ. ಇಸ್ರೋ ವರ್ಷಗಳ ಕಾಲ ಉಳಿಯುತ್ತದೆ ಮತ್ತು ನಮಗೆ ಹೆಮ್ಮೆ ತರುತ್ತದೆ” ಎಂದು ಕೆಲವರು ಬರೆದಿದ್ದಾರೆ.
“ಜಗತ್ತು ಒಂದು ಮೈಲಿಗಲ್ಲು ಎಂದು ಪರಿಗಣಿಸುವ ಸಾಧನೆಯನ್ನು ಅವರು ಗೇಲಿ ಮಾಡುತ್ತಿದ್ದಾರೆ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
ಇದರ ಬೆನ್ನಲ್ಲೇ ಪ್ರಕಾಶ್ ರಾಜ್ ಈ ಬಗ್ಗೆ ಸ್ಪಷ್ಟನೆ ನೀಡಿ, ‘ನಾನು 1969ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲಿಗ, ಅಮೆರಿಕ ಗಗನಯಾನಿ ನೀಲ್ ಆರ್ಮಸ್ಟ್ರಾಂಗ್ ಅವರನ್ನು ಉಲ್ಲೇಖಿಸಿ ಹಳೆಯ ಜೋಕ್ ಟ್ವೀಟ್ ಮಾಡಿದ್ದೆ. ಅವರ ಸಾಧನೆಯನ್ನು ಕೇರಳದ ಚಾಯ್ವಾಲಾ ಒಬ್ಬ ಸಂಭ್ರಮಿಸುವ ಚಿತ್ರ ಅದು. ಆದರೆ ಇದರಲ್ಲಿ ಟ್ರೋಲ್ಗಳು ಯಾವ ಚಾಯ್ವಾಲಾನನ್ನು ಕಂಡರು?’ ಎಂದು ಪ್ರಶ್ನಿಸಿದ್ದಾರೆ.
ಇಸ್ರೋದ ಯಶಸ್ಸನ್ನು ಇಡೀ ಜಗತ್ತು ಕಾದು ನೋಡುತ್ತಿದೆ ಇಂಥ ಸಮಯದಲ್ಲಿ ಭಾರತೀಯರಾದ ನಾವು ಇಸ್ರೋದ ಈ ಸಾಧನೆಗೆ ಹೆಮ್ಮೆಪಡುವುದನ್ನು ಬಿಟ್ಟು ಈ ತರದ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಡಿಸುವುದು ಹಾಗೂ ಜನಸಾಮಾನ್ಯರಿಗೆ ತಪ್ಪು ಸಂದೇಶಗಳನ್ನು ನೀಡುವ ಕೆಲಸಗಳನ್ನು ಪ್ರಕಾಶ್ ರಾಜ್ ಅಥವಾ ಬೇರೆ ಯಾರು ಮಾಡಬಾರದು.