ಗಿಡ ಮರಗಳಲ್ಲಿ ಯಾವುದೇ ಬಗೆಯ ಗಿಡಗಳನ್ನು ನೆಟ್ಟರೂ ಕೂಡ ನಮಗೆ ಒಂದಲ್ಲ ಒಂದು ರೀತಿಯ ಉಪಯೋಗ ಸಿಕ್ಕೇ ಸಿಗುತ್ತದೆ. ಅದರಲ್ಲೂ ಕೆಲವು ಗಿಡಗಳಿಂದ ಅತಿಯಾದ ಉಪಯೋಗವನ್ನು ಮಾನವ ಪಡೆಯುತ್ತಿರುತ್ತಾನೆ. ಆದರೆ ಮಾನವ ಸ್ವಾರ್ಥಕ್ಕಾಗಿ ಕೆಲವು ಮರ-ಗಿಡಗಳನ್ನು ಕೂಡ ನಾಶಪಡಿಸುತ್ತಾನೆ.
ನಮಗೆ ಹಗಲಿನಲ್ಲಿ ಕೆಲವು ಮರಗಳಿಂದ ಆಮ್ಲಜನಕ ಸಿಗುತ್ತದೆ ಎಂದು ತಿಳಿದಿದೆ. ಆದರೆ ರಾತ್ರಿಯ ಸಮಯದಲ್ಲಿಯೂ ಸಾಮಾನ್ಯವಾಗಿ ಗಿಡಗಳು ಆಕ್ಸಿಜನ್ನ್ನು ಬಿಡುಗಡೆ ಮಾಡೋದಿಲ್ಲ. ಆದರೆ, ಈ ಗಿಡಗಳು ಉಲ್ಟವಂತೆ. ಈ ಗಿಡಗಳಿಂದ ನಮಗೆ ಆಕ್ಸಿಜನ್ ಸಿಗುತ್ತದೆ.
ರಾತ್ರಿ ಮರದ ಕೆಳಗೆ ಇರಬಾರದು ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಅದು ಯಾಕೆಂದರೆ ಮರಗಳು ರಾತ್ರಿಯಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ. ಆದರೆ ಕೆಲವು ಸಸ್ಯಗಳು ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ, ಆದ್ದರಿಂದ ಈ ಸಸ್ಯಗಳು ನಿಮಗೆ ತಿಳಿಯದೆ ನಿಮ್ಮ ಜೀವನವನ್ನು ಹೆಚ್ಚಿಸಬಹುದು. ಈ ಸಸ್ಯಗಳನ್ನು ಒಳಾಂಗಣ ಅಥವಾ ಹೊರಾಂಗಣದಲ್ಲಿ ಬೆಳೆಸಿರಿ. ಇದರಿಂದ ನಮಗೆ ಒಳ್ಳೆಯ ಆರೋಗ್ಯ ಸಿಗುತ್ತದೆ. ಹಾಗಾದರೆ ಈ ಪಟ್ಟಿಯಲ್ಲಿ ಯಾವ ಮರಗಳಿವೆ ಎಂಬುದನ್ನು ನೋಡೋಣ.
ಅಲೋವೆರ- ಈ ಸಸ್ಯವು ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ ಈ ಸಸ್ಯವು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಅಲ್ಲದಿರದಿಂದ ನಮಗೆ ಅನೇಕ ಉಪಯೋಗಗಳಿವೆ. ಈ ಸಸ್ಯಕ್ಕೆ ಯಾವುದೇ ನಿರ್ವಹಣೆ ಅಗತ್ಯವು ಕೂಡ ಅಷ್ಟಾಗಿ ಇರುವುದಿಲ್ಲ.
ಆರ್ಕಿಡ್ಗಳು – ಈ ಗಿಡಗಳು ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ ಮತ್ತು ಡೈಗಳಲ್ಲಿ ಕಂಡುಬರುವ ಕ್ಸೈಲೀನ್ ಅನ್ನು ತೆಗೆದುಹಾಕುತ್ತವೆ. ಪರಿಣಾಮವಾಗಿ, ಕೊಠಡಿ ತಾಜಾ ಗಾಳಿಯಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
ಹಾವಿನ ಸಸ್ಯ – ಇದು ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಅಲ್ಲದೆ, ಸಸ್ಯವು ನಿರಂತರವಾಗಿ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಕೊಳ್ಳುತ್ತಿರುತ್ತದೆ. ಹಾಗಾಗಿ ಮನೆಯಲ್ಲಿ ಈ ಗಿಡ ಇದ್ದರೆ ಹಗಲು ರಾತ್ರಿ ಆರೋಗ್ಯಕರ ವಾತಾವರಣ ನಿಮ್ಮದಾಗುತ್ತದೆ.
ರಾವಿ ಮರ – ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುವುದಲ್ಲದೆ, ಮಧುಮೇಹ, ಮಲಬದ್ಧತೆ ಮತ್ತು ಅಸ್ತಮಾವನ್ನು ನಿಯಂತ್ರಿಸುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ.
ಬೇವಿನ ಮರ: ಈ ಮರವು ರಾತ್ರಿಯೂ ಆಮ್ಲಜನಕವನ್ನು ಹೊರಸೂಸುತ್ತದೆ. ಬೇವಿನ ಮರವು ನೈಸರ್ಗಿಕ ಕೀಟನಾಶಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಬೇವಿನ ಮರದಿಂದ ಅನೇಕ ಉಪಯೋಗಗಳು ನಮಗಿವೆ ಆದ್ದರಿಂದ ಮನೆಯ ತೋಟದಲ್ಲಿ ಬೇವಿನಮರ ಇರುವುದು ಒಳ್ಳೆಯದು.
ಈ ಎಲ್ಲಾ ಬಗೆಯ ಗಿಡಗಳು ರಾತ್ರಿಯ ಸಮಯದಲ್ಲಿ ಆಕ್ಸಿಜನ್ನ್ನು ಹೊರ ಹಾಕುವುದರಿಂದ ಈ ಗಿಡಗಳನ್ನು ನೀವು ನಿಮ್ಮ ಮನೆಗಳಲ್ಲಿ ಬೆಳೆಸಿ ಮತ್ತು ನಿಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳಿ.