ಬೆಂಗಳೂರು : ಕೋಕಾ-ಕೋಲಾ ಕಂಪನಿಯು ತನ್ನ ಪ್ಯಾಕೇಜಿಂಗ್ ನಲ್ಲಿ ಮಾರ್ವೆಲ್ ಯೂನಿವರ್ಸ್ ನ ಪಾತ್ರಗಳುಳ್ಳ ಸೀಮಿತ ಆವೃತ್ತಿಯ ಉತ್ಪನ್ನವನ್ನು ಬಿಡುಗಡೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಜಾಹೀರಾತು ಚಿತ್ರ ಬಿಡುಗಡೆಯಾಗಿದೆ. ಈ ಮೂಲಕ ಮಾರ್ವೆಲ್ ಜೊತೆಗಿನ ಪಾಲುದಾರಿಕೆಯನ್ನು ಅನಾವರಣಗೊಳಿಸಿದೆ.
ಈ ವಿಶಿಷ್ಟ ಸಹಯೋಗದ ಕಾರಣದಿಂದ ಮಾರ್ವೆಲ್ ಯೂನಿವರ್ಸ್ ನ ಆಂಟ್ ಮ್ಯಾನ್ನಿಂದ ಹಿಡಿದು ಕ್ಯಾಪ್ಟನ್ ಅಮೇರಿಕಾವರೆಗಿನ 30 ಪಾತ್ರಗಳು ಕೋಕಾ ಕೋಲಾ, ಕೋಕಾ ಕೋಲಾ ಝೀರೋ ಶುಗರ್ ಬಾಟಲ್ ಮತ್ತು ಕ್ಯಾನ ಗಳ ಪ್ಯಾಕೇಜಿಂಗ್ ನಲ್ಲಿ ಕಾಣಿಸಿಕೊಳ್ಳಲಿವೆ. ಈ ಪ್ಯಾಕೇಜಿಂಗ್ ಅನ್ನು ಬಿಳಿ, ಕಪ್ಪು ಮತ್ತು ಕೆಂಪು ಬಣ್ಣಗಳ ಸಂಯೋಜನೆಯಲ್ಲಿ ರಚಿಸಲಾಗಿದೆ. ಈ ಪ್ಯಾಕೇಜಿಂಗ್ ನಲ್ಲಿ ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ ಕೋಡ್ಗಳು ಇದ್ದು, ಆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅಲ್ಲಿ ಪ್ರತೀ ಹೀರೋ ಅಥವಾ ವಿಲನ್ ಗಳನ್ನು ಆಗ್ಮೆಂಟೆಡ್ ರಿಯಾಲಿಟಿ ಮೂಲಕ ನೋಡಬಹುದು. ಜೊತೆಗೆ 8 ಮಾರ್ವೆಲ್ ಪಾತ್ರಗಳು ಇರುವ ವಿಶೇಷ ಮಾರ್ವೆಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಬಹುದು.
ಈ ವಿಶೇಷ ಸಹಯೋಗವನ್ನು ಅತ್ಯುತ್ತಮ ಮತ್ತು ಆಕರ್ಷಕವಾದ ಜಾಹೀರಾತು ಚಿತ್ರದ ಮೂಲಕ ಅನಾವರಣಗೊಳಿಸಲಾಗಿದೆ. ಮೇಲೆ ನೀಡಿರುವ ಲಿಂಕ್ ನಲ್ಲಿ ಆ ಜಾಹೀರಾತನ್ನು ನೋಡಬಹುದಾಗಿದೆ.
ಈ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಮಾರ್ವೆಲ್ ಅಭಿಮಾನಿಗಳು ಪಾತ್ರಗಳ ಚಿತ್ರಣ ಇರುವ ಕ್ಯಾನ್ ಗಳನ್ನು ಸಂಗ್ರಹಿಸುವ ಅವಕಾಶವನ್ನು ಹೊಂದಿದ್ದಾರೆ. ಈ ಕೋಕಾ ಕೋಲಾ ಆವೃತ್ತಿಯು ಕೋಕಾ ಕೋಲಾ ಮತ್ತು ಮಾರ್ವೆಲ್ ಅನ್ನು ಆನಂದಿಸಲು ಉತ್ತಮ ಅವಕಾಶವಾಗಿದೆ.
ಜಾಹೀರಾತು ಚಿತ್ರ: https://www.youtube.com/watch?v=_oI_B0OBgVw